ರಾಜ್ಯದಲ್ಲಿ ಅತಿ ಹೆಚ್ಚು ಕೇಸ್ ದಾಖಲಿಸುವಲ್ಲಿ ಮಾದನಾಯಕನಹಳ್ಳಿ ಠಾಣೆಯೇ ಮೊದಲ ಸ್ಥಾನ..!

Untitled design 2025 12 31T200930.620

ಮೂರ್ತಿ ಬೀರಯ್ಯನಪಾಳ್ಯ ಗ್ಯಾರಂಟಿ ನ್ಯೂಸ್ ನೆಲಮಂಗಲ

ನೆಲಮಂಗಲ: 2025ಕ್ಕೆ ವಿದಾಯ ಹೇಳುವ ಹೊತ್ತಿನಲ್ಲಿ ರಾಜ್ಯಾದ್ಯಂತ ದಾಖಲಾಗಿರುವ ಅಪರಾಧ ಪ್ರಕರಣಗಳ ಲೆಕ್ಕಾಚಾರ ಹೊರಬಿದ್ದಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಉಪವಿಭಾಗ ವ್ಯಾಪ್ತಿಗೆ ಬರುವ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ಕರ್ನಾಟಕದಲ್ಲೇ ಅತಿ ಹೆಚ್ಚು ಪ್ರಕರಣ ದಾಖಲಾಗಿರುವ ಠಾಣೆಯಾಗಿ ಮೊದಲ ಸ್ಥಾನ ಪಡೆದಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ವರ್ಷದ ಕೊನೆಯಲ್ಲಿ ಒಟ್ಟು 1283 ಅಪರಾಧ ಪ್ರಕರಣ ದಾಖಲಾಗಿದ್ದು, ಇತರೆ ದೊಡ್ಡ ಜಿಲ್ಲೆಯನ್ನೇ ಹಿಂದಿಕ್ಕಿ ಅಪರಾಧ ಪ್ರಕರಣದಲ್ಲಿ ಕರ್ನಾಟಕದಲ್ಲೇ ಮೊದಲ ಸ್ಥಾನದಲ್ಲಿರುವುದು ಕಳವಳಕಾರಿ ಸಂಗತಿಯಾಗಿದೆ.

ಇದಕ್ಕೆ ಸಂಬಂಧಿಸಿದಂತೆ ಅಸ್ವಾಭಾವಿಕ ಸಾವಿನಿಂದಲೇ 175(UDR) ಪ್ರಕರಣ ದಾಖಲಾಗಿದೆ. ಕೊಲೆ, ಕೊಲೆ ಯತ್ನ, ದರೋಡೆ, ಸುಲಿಗೆ, ಸರಗಳ್ಳತನ, ಮನೆಗಳ್ಳತನ, ವಾಹನ ಕಳವು, ಜಾನುವಾರು ಕಳವು, ಮಿಸ್ಸಿಂಗ್ ಸೇರಿದಂತೆ ಒಟ್ಟು 1283 ಪ್ರಕರಣಗಳ ದಾಖಲಾಗಿವೆ. ಈ ಮೂಲಕ ಕರ್ನಾಟಕದಲ್ಲೇ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಿರುವ ಪೊಲೀಸ್‌ ಠಾಣೆಯಾಗಿದೆ.

ಇನ್ನು ಅಪರಾಧದಲ್ಲಿ ದ್ವಿತೀಯ ಸ್ಥಾನ ಬೆಂಗಳೂರಿನ ಮಡಿವಾಳ ಪೊಲೀಸ್ ಠಾಣೆ 975, ತೃತೀಯ ಸ್ಥಾನ ವೈಟ್‌ಫೀಲ್ಡ್ ಪೊಲೀಸ್ ಠಾಣೆ 916, ನಾಲ್ಕನೇ ಸ್ಥಾನ ಯಲಹಂಕ ಪೊಲೀಸ್ ಠಾಣೆ 822,ಅದ್ರೆ ರಾಜ್ಯದಲ್ಲೇ ಅತಿ ಕಡಿಮೆ ಪ್ರಕರಣ ದಾಖಲಾದ ಪೊಲೀಸ್ ಪಟ್ಟಿ ನೋಡೊದಾರೆ ಕೊಡಗು ಜಿಲ್ಲೆಯ ಬಾಗಮಂಡಲ ಪೊಲೀಸ್ ಠಾಣೆ. ಈ ಠಾಣೆಯಲ್ಲಿ ಕೇವಲ 18 ಪ್ರಕರಣಗಳು ದಾಖಲಾಗಿದೆ. ಚಾಮರಾಜನಗರ ಜಿಲ್ಲೆಯ ತೆರಕಣಾಂಬಿ ಪೊಲೀಸ್ ಠಾಣೆಯಲ್ಲಿ15 ಪ್ರಕರಣ, ಅತಿ ಕಡಿಮೆ ಅಂದ್ರೆ ಉತ್ತರ ಕನ್ನಡ ಜಿಲ್ಲೆಯ ಕದರ ಪೊಲೀಸ್ ಠಾಣೆಯಲ್ಲಿ ವರ್ಷದಲ್ಲಿ ಕೇವಲ 08 ಪ್ರಕರಣ ದಾಖಲಾಗಿವೆ.

ಅಪರಾಧದಲ್ಲಿ ಖ್ಯಾತಿ ಪಡೆದಿರುವ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 5 ಲಕ್ಷಕ್ಕೂ ಹೆಚ್ಚು ಜನ ವಾಸಿಸುತ್ತಿದ್ದಾರೆ. ಅನೇಕ ಜಿಲ್ಲೆಗಳಿಗೆ ಸಂಪರ್ಕ ಹೊಂದಿರುವ ಬೆಂಗಳೂರು ಗೇಟ್‌ವೇ ಕೂಡ ಇದೇ ಆಗಿದೆ. ಇದರಿಂದ ದಾಖಲಾದ ಅಪರಾಧಗಳನ್ನು ಸಮರ್ಪಕವಾಗಿ ತನಿಖೆ ಮಾಡಲು ಸಿಬ್ಬಂದಿಗಳಿಗೆ ಕಷ್ಟವಾಗುತ್ತಿದೆ. ಒಂದು ಪೊಲೀಸ್ ಠಾಣೆಯಲ್ಲಿ ಸಾವಿರಗಟ್ಟಲೇ FIR ದಾಖಲಾದರೆ ತನಿಖೆ ಹೇಗೆ ಸಾಧ್ಯ ? ಎನ್ನುವ ಪ್ರಶ್ನೆ ಉದ್ಭವಿಸುತ್ತವೆ.

ಮಾಹಿತಿ ಪ್ರಕಾರ ನಗರಕ್ಕೆ ಹೊಂದಿಕೊಂಡಂತೆ 77 ಹಳ್ಳಿಗಳು, 35ಕ್ಕೂ ಹೆಚ್ಚು ಲೇಔಟ್​ಗಳು, 20ಕ್ಕೂ ಹೆಚ್ಚು ಗಣ್ಯ ವ್ಯಕ್ತಿಗಳು ವಾಸಿಸುವ ಐಷಾರಾಮಿ ಅಪಾರ್ಟ್ಮೆಂಟ್‌ಗಳು ಸೇರಿದಂತೆ ಸುಮಾರು 5ಲಕ್ಷಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ರಾಜ್ಯಾದ್ಯಂತ ಅತಿ ಹೆಚ್ಚು ಕೂಲಿಕಾರ್ಮಿಕರು ವಾಸಿಸುವ ಸ್ಥಳವೂ ಆಗಿದೆ,
ಇನ್ನೂ ಪೊಲೀಸ್ ಠಾಣೆ ನಿರ್ಮಾಣ ಮಾಡಲು ನಿರ್ದಿಷ್ಟ ಜನಸಂಖ್ಯೆಯು ಭಾರತದಲ್ಲಿ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ. ಆದಾಗ್ಯೂ, ಭಾರತ ಸರ್ಕಾರವು ಪೊಲೀಸ್ ಠಾಣೆಗಳ ನಿರ್ಮಾಣಕ್ಕೆ ಸಾಮಾನ್ಯ ಮಾರ್ಗಸೂಚಿಗಳನ್ನು ನೀಡಿದೆ.

ಸಾಮಾನ್ಯವಾಗಿ ಪೊಲೀಸ್ ಠಾಣೆಯು ಒಂದು ಲಕ್ಷದಿಂದ ಐದು ಲಕ್ಷದವರೆಗಿನ ಜನಸಂಖ್ಯೆಯನ್ನು ಹೊಂದಿರಬಹುದು. ಆದಾಗ್ಯೂ, ನಗರ ಪ್ರದೇಶಗಳಲ್ಲಿ ಜನಸಂಖ್ಯೆಯ ಅಧಾರದ ಮೇಲೆ ಹೊಸ ಹೊಸ ಪೊಲೀಸ್ ಠಾಣೆಯನ್ನ ಮಾನದಂಡಗಳ ಅಧಾರದ ಮೇಲೆ ಕಾರ್ಯರಂಭ ಮಾಡಲಾಗಿದೆ. ಇದರ ಹೊರತುಪಡಿಸಿ ಕರ್ನಾಟಕ ರಾಜ್ಯದಲ್ಲಿ, ಪೊಲೀಸ್ ಠಾಣೆಯು ಸಾಮಾನ್ಯವಾಗಿ ಒಂದು ಲಕ್ಷದಿಂದ ಮಿತಿಮೀರಿ ಮೂರು ಲಕ್ಷದವರೆಗಿನ ಜನಸಂಖ್ಯೆಯನ್ನು ಹೊಂದಿದೆ. ಹೀಗಾಗಿ ಪ್ರತಿ ವರ್ಷವೂ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ಒಂದರಲ್ಲಿಯೇ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿದೆ.

ಅತಿಹೆಚ್ಚು ವಾಹನ ಕಳವು, ಮನೆಗಳ್ಳತನ, ಕೊಲೆ, ಸುಲಿಗೆ ಸೇರಿದಂತೆ ಮಿಸ್ಸಿಂಗ್ ಪ್ರಕರಣಗಳ ಸಂಖ್ಯೆ ಈ ಠಾಣೆಯಲ್ಲೇ ಹೆಚ್ಚಾಗಿದೆ ಹೀಗಾಗಿ ಈ ಠಾಣೆಯ ಪ್ರತಿ ಸಿಬ್ಬಂದಿಯ ಪಾಡು ಹೇಳ ತೀರದಂತಾಗಿದೆ. ಬೆಂಗಳೂರು ನಗರಕ್ಕೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ಸೇರಿಸುವ ಅದೇಶವಾಗಿದ್ರು, ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ,
ಸಿಬ್ಬಂದಿ ಕೊರತೆ ಮಧ್ಯ ಇಷ್ಟೊಂದು ಪ್ರಮಾಣದಲ್ಲಿ ಎಫ್​ಐಆರ್ ದಾಖಲಾಗಿದ್ದು, ಅವುಗಳನ್ನು ಸಮರ್ಪಕವಾಗಿ, ದಕ್ಷತೆಯಿಂದ, ಪ್ರಾಮಾಣಿಕತೆಯಿಂದ ತನಿಖೆ ಮಾಡಲು ಕಷ್ಟಕರವಾಗಿದೆ. ಹೀಗಾಗಿ ಕೇವಲ ಕೇಸ್‌ ದಾಕಲಿಸಲಾಗಿದೆ ಹಿರತು ಯಾವುದೇ ತನಿಖೆ ಮಾಡಲು ಸಾಧ್ಯವಾಗುತ್ತಿಲ್ಲ.

ಎಫ್​ಐಆರ್​ಗಳಿಗೆ ನೊಂದ ದೂರುದಾರರಿಗೆ ಸರಿಯಾದ ರೀತಿಯಲ್ಲಿ ನ್ಯಾಯ ಒದಗಿಸಬೇಕು ಅಂದ್ರೆ ಈ ಪೊಲೀಸ್ ಠಾಣೆ ಬೆಂಗಳೂರು ನಗರಕ್ಕೆ ಸೇರಲೇ ಬೇಕು, ಇಲ್ಲವೇ ಗೃಹ ಇಲಾಖೆ ಈ ಠಾಣೆಗೆ ಹೆಚ್ಚಿನ ಸಿಬ್ಬಂದಿಯನ್ನ ನೇಮಿಸಬೇಕು. ಇಲ್ಲಿನ ಜನಸಂಖ್ಯೆ ಆಧಾರದಲ್ಲಿ ಎರಡರಿಂದ ಮೂರು ಪೊಲೀಸ್ ಠಾಣೆಯಾಗಿ ಡಿವೈಡ್ ಮಾಡಿದ್ರೆ ಕ್ರೈಂ ರೇಟ್ ಕಡಿಮೆ ಮಾಡಬಹುದು. ಅಲ್ಲದೇ ಅನ್ಯಾಯಕ್ಕೊಳಗಾಗಿದವರಿಗೆ ಸೂಕ್ತ ತನಿಖೆ ನಡೆಸಿ ನ್ಯಾಯ ಕೊಡಿಸಬಹುದು. ಇದರಿಂದ ಆರೋಪಿಗಳಿಗೆ ಕಾನೂನು ರೀತಿಯಲ್ಲಿ ಶಿಕ್ಷೆ ಒದಗಿಸಲು ಸಹಾಯವಾಗುತ್ತದೆ ಎಂದು ಗೃಹ ಇಲಾಖೆಗೆ ಮನವಿ ಮಾಡಲಾಗಿದೆ.

ಈ ಠಾಣಾ ವ್ಯಾಪ್ತಿ ಬಗ್ಗೆ ಗೃಹ ಇಲಾಖೆ ಗಮನಹರಿಸಿ ಇದಕ್ಕೊಂದು ಪರಿಹಾರ ಹುಡುಕಿ ಅಪರಾಧ ಚಟುವಟಿಕೆಗಳಿಗೆ ಬ್ರೇಕ್ ಹಾಕಬೇಕಿದೆ. ಆಗ ಮಾತ್ರ ಜನರು ಕೂಡ ನೆಮ್ಮದಿಯಾಗಿ ವಾಸಮಾಡಲು ಆಗುತ್ತೆ. ಖದೀಮರಿಗೂ ಸಹ ಭಯ ಇರುತ್ತೆ. ಆಗ ಆಟೋಮೆಟಿಕ್ ಕ್ರೈಮ್ ರೇಟ್ ಸಹ ಕಂಟ್ರೋಲ್​ಗೆ ಬರುತ್ತೆ. ಸರ್ಕಾರ ಈ ಬಗ್ಗೆ ಯಾವ ರೀತಿ ಕ್ರಮ ತೆಗೆದುಕೊಳ್ಳುತ್ತದೆ ಎಂದು ಕಾದುನೋಡಬೇಕಿದೆ.

 

 

| Reported by: ಮೂರ್ತಿ ಬೀರಯ್ಯನಪಾಳ್ಯ ಗ್ಯಾರಂಟಿ ನ್ಯೂಸ್ ನೆಲಮಂಗಲ
Exit mobile version