ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಚಿನ್ನತೇಕೂರು ಗ್ರಾಮದ ಬಳಿ, ಇಂದು ಮುಂಜಾನೆ 3 ಗಂಟೆ ಸುಮಾರಿಗೆ ಬಸ್ ಸುಟ್ಟು ಪ್ರಯಾಣಿಕರು ಸಾವನ್ನಪ್ಪಿರುವ ದುರಂತ ನಡೆದಿದೆ. ಹೈದರಾಬಾದ್‌ನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಾವೇರಿ ಟ್ರಾವೆಲ್ಸ್‌ನ ಖಾಸಗಿ ಸ್ಲೀಪರ್ ಬಸ್, ವಿರುದ್ಧ ದಿಕ್ಕಿನ ಬೈಕ್‌ಗೆ ಡಿಕ್ಕಿ ಹೊಡೆದ ನಂತರ ಬೆಂಕಿಗೆ ಆಹುತಿಯಾಗಿದೆ.
ಬಸ್‌ನಲ್ಲಿ ಸುಮಾರು 40-42 ಮಂದಿ ಪ್ರಯಾಣಿಕರು ಇದ್ದರು. ಈ ದುರಂತದಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರು ಬೆಂಕಿಯಲ್ಲಿ ಸುಟ್ಟು ಕರಕಲಾಗಿ ಸಾವಿಗೀಡಗಿದ್ದಾರೆ. ಇನ್ನೂ 18 ಮಂದಿ ಗಂಭೀರವಾಗಿ ಗಾಯಗೊಂಡು ಕರ್ನೂಲು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಸ್ ಚಲಿಸುತ್ತಿದ್ದ ವೇಳೆ ವಿರುದ್ದ ದಿಕ್ಕಿನಿಂದ ಬರುತ್ತಿದ್ದ ಬೈಕ್ ಬಸ್‌ಗೆನ ಡಿಕ್ಕಿ ಹೊಡೆದು,ಬಸ್‌ನ ಚಲ್ರಕ್ಕೆ ಸ್ಕಡ್ ಆಗಿದೆ ಈ ವೇಳೆ ಬೈಕ್‌ನ ಪೆಟ್ರೋಲ್ ಟ್ಯಾಂಕ್ ಸಿಡಿದು ಬೆಂಕಿ ಹೊತ್ತಿಕೊಂಡಿದ್ದು, ಕ್ಷಣಮಾತ್ರದಲ್ಲಿ ಬೆಂಕಿ ಬಸ್‌ಗೆ ವ್ಯಾಪಿಸಿತು. ಚಾಲಕ ಬೆಂಕಿ ಆರಿಸಲು ಪ್ರಯತ್ನಿಸಿದ್ದಾರೆ. ಆದರೆ ಬೆಂಕಿ ಇನ್ನೂ ಗಾಡವಾಗಿ ಹೊತ್ತಿಕೊಂಡಿದೆ. ಚಾಲಕ ಪ್ರಯಾಣಿಕರಿಗೆ ಇಳಿಯಿರಿ ಎಂದು ಹೇಳದೆ ತನ್ನ ಪಡಿಗೆ ತಾನು ಬೆಂಕಿ ಆರಿಸಲು ಪ್ರಯತ್ನಿಸಿದ್ದಾನೆ. ಇದರಿಂದ ಪ್ರಯಾಣಿಕರಿಗೆ ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲಿ ಈ ದುರ್ಘಟನೆ ಸಂಭವಿಸಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತಲುಪುವ ಬೆಂಕಿಯ ತೀವ್ರತೆಯಿಂದಾಗಿ ಬಸ್ ಸಂಪೂರ್ಣ ಸುಟ್ಟುಹೋಗಿದೆ. ಈ ಮಧ್ಯೆ ಪ್ರಯಾಣಿಕರು ಬಸ್‌ನ ಕಿಟಕಿಯನ್ನ ಒಡೆದು 18 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಉಳಿದ 20 ಕ್ಕೂ ಹೆಚ್ಚು ಮಂದಿ ಬೆಂಕಿಯಲ್ಲಿ ಸುಟ್ಟುಭಸ್ಮವಾಗಿದ್ದಾರೆ. ಮೃತರ ಗುರುತು ಗುರುತಿಸುವುದು ಕಷ್ಟಕರವಾಗಿದ್ದು,ಸ್ಥಳಕ್ಕೆ ಫೊರೆನ್ಸಿಕ್ ತಂಡ ಬೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ.
ಮೃತರ ಪಟ್ಟಿ ಇನ್ನೂ ಸಂಪೂರ್ಣವಾಗಿಲ್ಲವಾದರೂ, ಲಭ್ಯವಿರುವ ಮಾಹಿತಿಯ ಪ್ರಕಾರ, ಬಸ್‌ನಲ್ಲಿ ಇದ್ದ ಪ್ರಯಾಣಿಕರಲ್ಲಿ ಶ್ರೀಹರ್ಷ, ಶಿವ, ಸ್ಯಾಮ್, ಮೇಘಾನಂದ್, ಧಾತ್ರಿ, ರಾಮರೆಡ್ಡಿ, ಅಮೃತಕುಮಾರ್, ಚಂದನ, ಸೂರ್ಯ, ಉಮಾಪತಿ, ಪಂಕಜ್, ಹಾರಿಕಾ, ಕೀರ್ತಿ, ತರುಣ, ವೇಣುಗೋಪಾಲ್, ಆಕಾಶ್, ಮಹಮ್ಮದ್, ಜಯಂತ್, ಅಶ್ವಿನ್ ರೆಡ್ಡಿ, ಸತ್ಯ, ಸುಬ್ರಹ್ಮಣ್ಯ, ಪ್ರಶಾಂತ್, ಗುಣಸಾಯಿ, ಆರ್ಗ, ನವೀನ್ ಕುಮಾರ್, ರಮೇಶ್ ಮತ್ತು ವೇಣುಗುಂಡ ಸೇರಿದಂತೆ ಹಲವರು ಸಿಲುಕಿದ್ದರು.
ಈ ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ, ಹಲವು ಜೀವಗಳು ಬಲಿಯಾಗಿದ್ದು ದುಃಖಕರ. ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲು ಪ್ರಾರ್ಥಿಸುತ್ತೇನೆ ಎಂದು ಪೋಸ್ಟ್ ಮಾಡಿದ್ದಾರೆ.
ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು, ಈ ಘಟನೆಯಿಂದ ಆಘಾತವಾಗಿದೆ.. ಸರ್ಕಾರ ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ. ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಹೆಲ್ಪ್‌ಲೈನ್ ಘೋಷಿಸಿ, ಗಾಂಧಿನಗರ ಜಿಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಹ ಸಂತಾಪ ಸೂಚಿಸಿದ್ದಾರೆ.
