ಕೃತಿಕಾ ರೆಡ್ಡಿ ಕೇಸ್‌ಗೆ ಟ್ವಿಸ್ಟ್: ಫೋನ್‌ ಪೇ ಚಾಟ್‌ನಲ್ಲಿ ಪತಿಯ ಭಯಾನಕ ಸತ್ಯ ಬಹಿರಂಗ

Untitled design 2026 04 08T231129.188

ಬೆಂಗಳೂರು, ಏಪ್ರಿಲ್ 8: ಚರ್ಮರೋಗ ವೈದ್ಯೆ ಡಾ. ಕೃತಿಕಾ ರೆಡ್ಡಿ ಕೊಲೆ ಪ್ರಕರಣದಲ್ಲಿ ಮತ್ತೊಂದು ಅಚ್ಚರಿಯ ಬೆಳವಣಿಗೆ ಕಂಡುಬಂದಿದೆ. ಪತಿ ಮಹೇಂದ್ರ ರೆಡ್ಡಿಯೇ ಪ್ರೊಪೋಫೋಲ್ ಅರಿವಳಿಕೆ ಚುಚ್ಚಿ ಕೊಲೆ ಮಾಡಿರುವುದು ಈಗಾಗಲೇ ಬಯಲಾಗಿತ್ತು. ಇದೀಗ ತನಿಖಾ ಸಂಸ್ಥೆಗಳು ಆರೋಪಿಯ ಫೋನ್ ಪೇ ಅಕೌಂಟ್‌ನಿಂದ ಅವನ ಪ್ರೇಯಸಿಗೆ ಕಳುಹಿಸಿದ್ದ ರಹಸ್ಯ ಸಂದೇಶಗಳನ್ನು ಪತ್ತೆ ಮಾಡಿವೆ. ಈ ಸಂದೇಶಗಳು ಕೊಲೆಯ ಉದ್ದೇಶ ಮತ್ತು ಸಾಕ್ಷ್ಯ ನಾಶದ ಪ್ರಯತ್ನದ ಬಗ್ಗೆ ತಿಳಿಸಲಾಗಿದೆ ಎಂದು ಹೇಳಲಾಗಿದೆ.

ಪ್ರಕರಣದ ಹಿನ್ನೆಲೆ

ಏಪ್ರಿಲ್ 2025ರಲ್ಲಿ ಬೆಂಗಳೂರಿನ ಮಾರತ್ತಹಳ್ಳಿಯಲ್ಲಿ ವೈದ್ಯೆ ಕೃತಿಕಾ ರೆಡ್ಡಿ ಅಸಹಜ ಸ್ಥಿತಿಯಲ್ಲಿ ಮೃತಪಟ್ಟಿದ್ದರು. ಆರಂಭದಲ್ಲಿ ಸ್ವಾಭಾವಿಕ ಸಾವು ಎಂದು ಭಾವಿಸಲಾಗಿತ್ತು. ಆದರೆ ಮರಣೋತ್ತರ ಪರೀಕ್ಷೆಯ ವರದಿ ಆಘಾತಕಾರಿಯಾಗಿತ್ತು. ದೇಹದಲ್ಲಿ ಪ್ರೊಪೋಫೋಲ್ ಎಂಬ ಅರಿವಳಿಕೆ ಔಷಧದ ಅಂಶ ಪತ್ತೆಯಾಯಿತು. ಇದನ್ನು IV ಫ್ಲೂಯಿಡ್ ಮೂಲಕ ನೀಡಲಾಗಿತ್ತು. ಪತಿ ಮಹೇಂದ್ರ ರೆಡ್ಡಿ ವಿರುದ್ಧ ಕೊಲೆ ಆರೋಪ ಸಾಬೀತಾಗಿ ಅವನನ್ನು ಬಂಧಿಸಲಾಯಿತು.

ಪ್ರೇಯಸಿ ಜತೆ ಅಕ್ರಮ ಸಂಬಂಧ

ಮಹೇಂದ್ರ ರೆಡ್ಡಿ ಮತ್ತು ಅವನ ಪ್ರೇಯಸಿ (ನರ್ಸ್ ಎಂದು ಹೇಳಲಾಗುತ್ತದೆ) ನಡುವೆ 2022 ರಿಂದಲೇ ಪ್ರೇಮ ಸಂಬಂಧವಿತ್ತು. ಆದರೂ, ಅವನು 2024ರಲ್ಲಿ ಕೃತಿಕಾ ರೆಡ್ಡಿಯನ್ನು ಮದುವೆಯಾಗಿದ್ದ. ಹಣದ ಆಸೆ ಮತ್ತು ಪ್ರೇಯಸಿ ಜತೆಗೆ ಸೇರಿಕೊಳ್ಳುವ ಉದ್ದೇಶದಿಂದ ಕೃತಿಕಾಳನ್ನು ಕೊಲ್ಲಲು ಯೋಜಿಸಿದ್ದ. ಕೊಲೆಯ ನಂತರ ತಾನು ಸಿಕ್ಕಿಬೀಳದಂತೆ ನೋಡಿಕೊಳ್ಳಲು ಮತ್ತು ಪ್ರೇಯಸಿಗೆ ಸೂಚನೆಗಳನ್ನು ನೀಡಲು ಫೋನ್ ಪೇ ಮೂಲಕ ಸಂದೇಶಗಳನ್ನು ಕಳುಹಿಸಿದ್ದ.

ಫೋನ್ ಪೇ ಚಾಟ್ ನಿಂದ ಪತ್ತೆಯಾದ ಮೂರು ಪ್ರಮುಖ ಸಂದೇಶಗಳು

ಮಾರತ್ತಹಳ್ಳಿ ಪೊಲೀಸರು ಆರೋಪಿಯ ಮೊಬೈಲ್ ಅನ್ನು ಫೋರೆನ್ಸಿಕ್ ಸೈನ್ಸ್ ಲ್ಯಾಬೊರೇಟರಿಗೆ (FSL) ಕಳುಹಿಸಿದ್ದರು. ರಿಟ್ರೀವ್ ಆದ ಡೇಟಾದಲ್ಲಿ ಒಟ್ಟು 485 ಫೋನ್ ಪೇ ಚಾಟ್‌ಗಳು ಪತ್ತೆಯಾಗಿವೆ. ಅವುಗಳಲ್ಲಿ ಈ ಮೂರು ಸಂದೇಶಗಳು ಪ್ರಕರಣದಲ್ಲಿ ಪ್ರಮುಖ ಸಾಕ್ಷ್ಯಗಳಾಗಿವೆ.

ಮೆಸೇಜ್ 1 (ಸಾಕ್ಷ್ಯ ನಾಶದ ಸೂಚನೆ)
“ಈ ಮೆಸೇಜ್ ನೋಡಿದ ನಂತರ ನನಗೆ ಎಲ್ಲಿಯೂ ಮೆಸೇಜ್ ಅಥವಾ ಕರೆ ಮಾಡಬೇಡ. ಎಲ್ಲವೂ ಸರಿಯಾದ ನಂತರ ನಾನು ನಿನಗೆ ಫೋನ್ ಮಾಡ್ತೇನೆ. ಪೊಲೀಸರು ನಮ್ಮ ಸಂಬಂಧದ ಬಗ್ಗೆ ಕೇಳಲು ನಿನ್ನನ್ನು ಕರೆಯಬಹುದು. ಆಗ ನಾವು ಸ್ನೇಹಿತರು ಅಂತಷ್ಟೇ ಹೇಳಿ. ನೀವು ಪದೇ ಪದೇ ನನಗೆ ಕರೆ ಮಾಡಿದ್ರಾ ಅಂತ ಕೇಳಿದರೆ ಹೌದು ಎಂತಾ ಹೇಳು. ನಾನು ಆಸ್ಪತ್ರೆಯ ಬಗ್ಗೆ ಸಹಾಯ ಕೇಳಿದೆ ಅಂತಾ ಹೇಳು.” ಎಂದು ಮೆಸೇಜ್ ಮಾಡಲಾಗಿದೆ.

ಮೆಸೇಜ್ 2 (ತಪ್ಪೊಪ್ಪಿಗೆ ಮತ್ತು ಜೈಲು ಶಿಕ್ಷೆಯ ಸೂಚನೆ)
“ನಾನು ಬೇಗ ಹೋಗಿ ನನ್ನ ಹೆತ್ತವರಿಗೆ ಮತ್ತು ಕೃತಿಕಾ ಹೆತ್ತವರಿಗೆ ಹೇಳುತ್ತೇನೆ. ನಾನು ಕೃತಿಕಾಳನ್ನು ಕೊಂದಿರುವೆ ಮತ್ತು ನನ್ನ ಬಳಿ ಪುರಾವೆ ಇಲ್ಲ ಅಂತ. ಅಲ್ಲದೆ ನಾನು ಕಂಬಿಗಳ ಹಿಂದೆ ಹೋಗುತ್ತೇನೆ, ಆಗ ನೀನೂ ಸೇರಿದಂತೆ ಎಲ್ಲರೂ ಸಂತೋಷವಾಗಿರುತ್ತೀರಿ ಎಂದು ನಾನು ಭಾವಿಸುತ್ತೇನೆ.” ಎಂದು ಕಳುಹಿಸಿದ್ದ.

ಮೆಸೇಜ್ 3 (ಅಂತಿಮ ವಿದಾಯ ಮತ್ತು ಆತ್ಮಹತ್ಯೆಯ ಸುಳಿವು)
“ನಾನು ಇದನ್ನು ಇಲ್ಲಿಗೆ ಕೊನೆಗೊಳಿಸುತ್ತಿದ್ದೇನೆ. ಹೋಗಿ ನಿನ್ನ ಜೀವನವನ್ನು ಆನಂದಿಸು. ನೀನು ಬಯಸಿದಂತೆ ನಾನು ದುಃಖದಿಂದ ಬಳಲುತ್ತೇನೆ. ಮತ್ತು ನೀನು ಬಯಸಿದಂತೆ ಸಾಯುತ್ತೇನೆ. ಕೊಲೆಗಾರ ಎಂದಿಗೂ ಸಂತೋಷವಾಗಿರಲು ಸಾಧ್ಯವಿಲ್ಲ. ನಾನು ಕೊಲೆಗಾರನಾಗಿಯೇ ಜೀವನವನ್ನು ನಡೆಸುತ್ತೇನೆ.” ಎಂದು ತಿಳಿಸಿದ್ದಾನೆ.

10 ಲಕ್ಷ 34 ಸಾವಿರ ಡಿಜಿಟಲ್ ಫೈಲ್‌ಗಳ ರಿಟ್ರೀವ್

ಆರೋಪಿ ಮಹೇಂದ್ರ ರೆಡ್ಡಿ, ಅವನ ಪ್ರೇಯಸಿ ಮತ್ತು ಮೃತೆ ಕೃತಿಕಾ ಅವರ ಮೊಬೈಲ್‌ಗಳಿಂದ ಒಟ್ಟು 10,34,000 ಡಿಜಿಟಲ್ ಫೈಲ್‌ಗಳನ್ನು ಪೊಲೀಸರು ರಿಟ್ರೀವ್ ಮಾಡಿದ್ದಾರೆ. ಇವುಗಳಲ್ಲಿ ವಾಟ್ಸಾಪ್ ಚಾಟ್‌ಗಳು, ಫೋನ್ ಕಾಲ್ ಲಾಗ್‌ಗಳು, ಲೊಕೇಶನ್ ಡೇಟಾ ಮತ್ತು ಫೋನ್ ಪೇ ಸಂದೇಶಗಳು ಸೇರಿವೆ. ಪ್ರಮುಖ ಸಾಕ್ಷ್ಯಗಳನ್ನು ಹೆಚ್ಚುವರಿ ಆಪಾದನಾ ಪಟ್ಟಿಕೆಯಲ್ಲಿ (charge sheet) ಸೇರಿಸಲಾಗುವುದು.

ಮಹೇಂದ್ರ ರೆಡ್ಡಿ ನ್ಯಾಯಾಂಗ ಬಂಧನದಲ್ಲಿದ್ದು, ವಿಚಾರಣೆ ಮುಂದುವರಿದಿದೆ. ಪ್ರೇಯಸಿ ನರ್ಸ್ ವಿರುದ್ಧವೂ ಕಾನೂನು ಕ್ರಮಕ್ಕೆ ಪೊಲೀಸರು ಸಿದ್ಧತೆ ನಡೆಸಿದ್ದಾರೆ. 

Exit mobile version