ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಇಂದು ಕೂಡ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಮಂಗಳೂರು, ಬೆಳಗಾವಿ, ಶಿವಮೊಗ್ಗ, ಚಿತ್ರದುರ್ಗ, ಹಾವೇರಿ, ಬಳ್ಳಾರಿ, ಗದಗ, ರಾಯಚೂರು, ಯಾದಗಿರಿ, ವಿಜಯಪುರ, ಬೀದರ್, ಕಲಬುರಗಿ, ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಭಾರೀ ಮಳೆಯ ಸಾಧ್ಯತೆಯಿದೆ. ಇನ್ನುಳಿದಂತೆ ಚಿಕ್ಕಮಗಳೂರು, ಕೋಲಾರ, ಮೈಸೂರು, ಮಂಡ್ಯ, ತುಮಕೂರು, ಚಾಮರಾಜನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬಿಸಿಲು ಮತ್ತು ಮಳೆಯ ಮಿಶ್ರ ವಾತಾವರಣ ಇರಲಿದೆ.
ಬೆಳಗ್ಗೆ ಮತ್ತು ಸಂಜೆ ಮಳೆಯಾಗುವ ಸಾಧ್ಯತೆಯಿದ್ದು, ಮಧ್ಯಾಹ್ನ ಬಿಸಿಲಿನ ವಾತಾವರಣ ಕಾಣಿಸಲಿದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28°C ಮತ್ತು ಕನಿಷ್ಠ ತಾಪಮಾನ 22°C ದಾಖಲಾಗಲಿದೆ. ರಾಯಚೂರು ಮತ್ತು ಯಾದಗಿರಿಯಲ್ಲಿ ಗರಿಷ್ಠ ತಾಪಮಾನ 36°C ಮತ್ತು ಕನಿಷ್ಠ ತಾಪಮಾನ 25°C ಇರಲಿದೆ.
ಕರ್ನಾಟಕದ ನಗರಗಳ ಹವಾಮಾನ ವರದಿ (ತಾಪಮಾನ °C ನಲ್ಲಿ)
|
ನಗರ |
ಗರಿಷ್ಠ ತಾಪಮಾನ |
ಕನಿಷ್ಠ ತಾಪಮಾನ |
|---|---|---|
|
ಬೆಂಗಳೂರು |
28 | 22 |
|
ಮಂಗಳೂರು |
29 | 24 |
|
ಶಿವಮೊಗ್ಗ |
28 | 23 |
|
ಬೆಳಗಾವಿ |
29 | 22 |
|
ಮೈಸೂರು |
30 | 22 |
|
ಮಂಡ್ಯ |
29 | 22 |
|
ಮಡಿಕೇರಿ |
27 | 20 |
|
ರಾಮನಗರ |
28 | 22 |
|
ಹಾಸನ |
28 | 21 |
|
ಚಾಮರಾಜನಗರ |
30 | 22 |
|
ಚಿಕ್ಕಬಳ್ಳಾಪುರ |
28 | 22 |
|
ಕೋಲಾರ |
29 | 22 |
|
ತುಮಕೂರು |
28 | 22 |
|
ಉಡುಪಿ |
31 | 25 |
|
ಕಾರವಾರ |
33 | 28 |
|
ಚಿಕ್ಕಮಗಳೂರು |
25 | 19 |
|
ದಾವಣಗೆರೆ |
30 | 23 |
|
ಹುಬ್ಬಳ್ಳಿ |
33 | 23 |
|
ಚಿತ್ರದುರ್ಗ |
29 | 23 |
|
ಹಾವೇರಿ |
32 | 24 |
|
ಬಳ್ಳಾರಿ |
33 | 24 |
|
ಗದಗ |
31 | 23 |
|
ಕೊಪ್ಪಳ |
32 | 24 |
|
ರಾಯಚೂರು |
36 | 25 |
|
ಯಾದಗಿರಿ |
36 | 25 |
|
ವಿಜಯಪುರ |
32 | 24 |
|
ಬೀದರ್ |
34 | 24 |
|
ಕಲಬುರಗಿ |
35 | 25 |
|
ಬಾಗಲಕೋಟೆ |
33 | 24 |
