ಮತ್ತೆ ಹೆಚ್ಚಾಗಲಿದೆ ಚಳಿ ! ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ವಿಶೇಷ ಎಚ್ಚರಿಕೆ

Untitled design (84)

ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಕೊಂಚ ಕಡಿಮೆಯಾಗಿದ್ದ ಶೀತಲ ಹವಾಮಾನ ಪುನಃ ತೀವ್ರವಾಗುತ್ತಿದೆ. ಹವಾಮಾನ ಇಲಾಖೆಯು ನೀಡಿರುವ ಮುನ್ಸೂಚನೆಯ ಪ್ರಕಾರ, ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮುಂಜಾನೆ ಮತ್ತು ಸಂಜೆಯ ಸಮಯಗಳಲ್ಲಿ ತೀವ್ರ ಚಳಿ ಮುಂದುವೆಯಲಿದೆ. ಇದು ನಾಗರಿಕರ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುವುದರಿಂದ ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ಉತ್ತರ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಗಮನಾರ್ಹವಾಗಿ ತಾಪಮಾನ ಇಳಿಕೆಯಾಗುತ್ತಿರುವ ಸಂದರ್ಭದಲ್ಲಿ,  ಹೆಚ್ಚು ಬೆಚ್ಚಗಿನ ಉಡುಪುಗಳನ್ನು ಧರಿಸುವುದು, ಬಿಸಿನೀರನ್ನು ಬಳಸುವುದು, ಮುಂಜಾನೆ ಮತ್ತು ಸಂಜೆ ಅತಿ ಹೆಚ್ಚು ಚಳಿ ಇರುವುದರಿಂದ ಹೊರಗಿನ ವ್ಯಾಯಾಮ ಅಥವಾ ನಡಿಗೆಯನ್ನು ತಾತ್ಕಾಲಿಕವಾಗಿ ತಪ್ಪಿಸುವಂತೆ ಸೂಚಿಸಿದ್ದಾರೆ. ವಿಶೇಷವಾಗಿ ಹಿರಿಯ ನಾಗರಿಕರು ಹಾಗೂ ಮಕ್ಕಳಿಗೆ ಹೆಚ್ಚು ಜಾಗರೂಕರಾಗಿರುವಂತೆ ತಿಳಿಸಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ ಎಂದು ಮುನ್ಸೂಚನೆ ಇದೆ. ಮೈಸೂರಿನಲ್ಲಿ ಗರಿಷ್ಠ 30 ಡಿಗ್ರಿ ಮತ್ತು ಕನಿಷ್ಠ 16 ಡಿಗ್ರಿ ಸೆಲ್ಸಿಯಸ್ ಇರಬಹುದು. ತಂಪಾದ ಹವೆಯಿಗೆ ಹೆಸರುವಾಸಿಯಾದ ಮಡಿಕೇರಿಯಲ್ಲಿ ಗರಿಷ್ಠ 28 ಡಿಗ್ರಿ ಮತ್ತು ಕನಿಷ್ಠ 14 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ಕರಾವಳಿ ಪ್ರದೇಶದ ಮಂಗಳೂರಿನಲ್ಲಿ ಗರಿಷ್ಠ 32 ಡಿಗ್ರಿ, ಕನಿಷ್ಠ 22 ಡಿಗ್ರಿ ಇರಬಹುದು.

ಶಿವಮೊಗ್ಗ (31-15), ಮಂಡ್ಯ (31-16), ಹಾಸನ (27-13), ಚಾಮರಾಜನಗರ (30-14), ತುಮಕೂರು (27-14), ಚಿತ್ರದುರ್ಗ (28-15), ದಾವಣಗೆರೆ (31-15), ಚಿಕ್ಕಮಗಳೂರು (26-13), ಮತ್ತು ರಾಮನಗರ (29-15) ಡಿಗ್ರಿ ಸೆಲ್ಸಿಯಸ್ ತಾಪಮಾನ ನಿರೀಕ್ಷಿಸಲಾಗಿದೆ.

ಮಲೆನಾಡು :
ಚಿಕ್ಕಬಳ್ಳಾಪುರ (26-14), ಕೋಲಾರ (26-14), ಉಡುಪಿ (32-21), ಕಾರವಾರ (33-20) ಮತ್ತು ಮಡಿಕೇರಿ (28-14) ಪ್ರದೇಶಗಳು ಸಹ ಗಮನಾರ್ಹ ಕನಿಷ್ಠ ತಾಪಮಾನವನ್ನು ದಾಖಲಿಸಲಿವೆ.

ಉತ್ತರ ಕರ್ನಾಟಕದ ನಗರಗಳು :
ಈ ಪ್ರದೇಶದ ನಗರಗಳಲ್ಲಿ ಗರಿಷ್ಠ ತಾಪಮಾನ 28 ರಿಂದ 31 ಡಿಗ್ರಿಯಷ್ಟಿದ್ದರೆ, ರಾತ್ರಿಯ ಕನಿಷ್ಠ ತಾಪಮಾನ ಗಮನಾರ್ಹವಾಗಿ ಕಡಿಮೆ ಇರಲಿದೆ. ಬೀದರ್ನಲ್ಲಿ ಕನಿಷ್ಠ 12 ಡಿಗ್ರಿ, ಗದಗ ಮತ್ತು ಹುಬ್ಬಳ್ಳಿಯಲ್ಲಿ 13 ಡಿಗ್ರಿ, ಬಾಗಲಕೋಟೆ, ಬಳ್ಳಾರಿ, ಕೊಪ್ಪಳದಲ್ಲಿ 14 ಡಿಗ್ರಿ ಸೆಲ್ಸಿಯಸ್ ತಾಪಮಾನ ನಿರೀಕ್ಷಿಸಲಾಗಿದೆ. ರಾಯಚೂರು (31-16), ವಿಜಯಪುರ (29-14), ಯಾದಗಿರಿ (31-16), ಮತ್ತು ಹಾವೇರಿ (31-15) ನಗರಗಳಲ್ಲೂ ಚಳಿಯ ಪರಿಸ್ಥಿತಿ ಇರಲಿದೆ.

ಹೀಗಾಗಿ, ರಾಜ್ಯದ ನಿವಾಸಿಗಳು, ವಿಶೇಷವಾಗಿ ಉತ್ತರ ಕರ್ನಾಟಕ ಮತ್ತು ಮಲೆನಾಡು ಪ್ರದೇಶದವರು, ಮುಂಚಿತವಾಗಿಯೇ ಸಿದ್ಧತೆ ಮಾಡಿಕೊಂಡು, ಬೆಚ್ಚಗಿರಲು ಸೂಕ್ತ ಉಡುಗೆ ತೊಡುಗೆಗಳನ್ನು ಧರಿಸಿ, ಆರೋಗ್ಯಕರವಾಗಿರುವುದು ಅಗತ್ಯ.

Exit mobile version