ಏಪ್ರಿಲ್ 1ರಿಂದ ವಾಹನ ಸವಾರರಿಗೆ ಬಿಗ್ ಶಾಕ್: ರಾಜ್ಯದ 9 ಹೆದ್ದಾರಿಗಳಲ್ಲಿ ಟೋಲ್ ದರ ಶೇ. 5 ಏರಿಕೆ

Untitled design 2026 03 30T091325.904

ಬೆಂಗಳೂರು, ಮಾರ್ಚ್ 30: ಹೊಸ ಹಣಕಾಸು ವರ್ಷದ ಆರಂಭವೇ ವಾಹನ ಸವಾರರಿಗೆ ಕಹಿ ಅನುಭವ ತಂದಿದೆ. ಏಪ್ರಿಲ್ 1, ಮಂಗಳವಾರದಿಂದ ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿ ಪ್ರಯಾಣ ಶುಲ್ಕವನ್ನು (ಟೋಲ್) ಶೇ. 5 ರಷ್ಟು ಹೆಚ್ಚಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ನಿರ್ಧರಿಸಿದೆ. ಈ ನಿರ್ಧಾರದಿಂದಾಗಿ ಕರ್ನಾಟಕದ ಪ್ರಮುಖ 9 ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚಾರ ನಡೆಸುವ ಕಾರು, ಬಸ್ ಮತ್ತು ಲಾರಿ ಸೇರಿದಂತೆ ಎಲ್ಲಾ ವಾಣಿಜ್ಯ ಮತ್ತು ಖಾಸಗಿ ವಾಹನಗಳ ಮೇಲೆ ಹೆಚ್ಚುವರಿ ಹೊರೆ ಬೀಳಲಿದೆ.

ಯಾವೆಲ್ಲಾ ಹೆದ್ದಾರಿಗಳಲ್ಲಿ ಟೋಲ್ ದರ ಹೆಚ್ಚಳ?
ರಾಜ್ಯದ ಪ್ರಮುಖ 9 ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೊಸ ಟೋಲ್ ದರ ಜಾರಿಗೊಳ್ಳಲಿದೆ.

ವಾರ್ಷಿಕ ಪಾಸ್ ದರದಲ್ಲೂ ಏರಿಕೆ
ಹೆದ್ದಾರಿಗಳಲ್ಲಿ ಆಗಾಗ್ಗೆ ಸಂಚಾರ ನಡೆಸುವವರಿಗೆ ಅನುಕೂಲವಾಗುವ ವಾರ್ಷಿಕ ಪಾಸ್ ದರದಲ್ಲೂ ಹೆಚ್ಚಳವಾಗಿದೆ. ಈ ಹಿಂದೆ 3,000 ರೂಪಾಯಿ ಇದ್ದ ವಾರ್ಷಿಕ ಪಾಸ್ ಶುಲ್ಕವನ್ನು ಈಗ 3,075 ರೂಪಾಯಿಗೆ ಏರಿಸಲಾಗಿದೆ. ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳನ್ನು ಈ ಏರಿಕೆಯಿಂದ ಹೊರಗಿಡಲಾಗಿದ್ದು, ಉಳಿದಂತೆ ಕಾರು, ಜೀಪ್, ಬಸ್, ಲಾರಿ, ಕಂಟೇನರ್ ಸೇರಿದಂತೆ ಎಲ್ಲಾ ವಾಹನಗಳಿಗೆ ಹೊಸ ದರ ಅನ್ವಯವಾಗಲಿದೆ.

ಸಾರ್ವಜನಿಕರ ಆಕ್ರೋಶ
ಪ್ರತಿ ವರ್ಷ ಹೆದ್ದಾರಿ ನಿರ್ವಹಣೆ ಮತ್ತು ನಿರ್ಮಾಣದ ಹೆಸರಿನಲ್ಲಿ ಶೇ. 5 ರಷ್ಟು ಟೋಲ್ ದರ ಏರಿಕೆ ಮಾಡುತ್ತಿರುವುದಕ್ಕೆ ವಾಹನ ಸವಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ನಮ್ಮ ಸಂಬಳ ವರ್ಷಕ್ಕೆ ಶೇ. 1 ಅಥವಾ 2 ರಷ್ಟು ಮಾತ್ರ ಏರಿಕೆಯಾಗುತ್ತದೆ. ಆದರೆ ಟೋಲ್ ದರ ಮಾತ್ರ ಶೇ. 5 ರಷ್ಟು ಹೆಚ್ಚಾಗುತ್ತಿದೆ. ಇದು ಎಷ್ಟು ಸರಿ?” ಎಂದು ವಾಹನ ಮಾಲೀಕರು ಪ್ರಶ್ನಿಸುತ್ತಿದ್ದಾರೆ. 

ಏಕೆ ಟೋಲ್ ಏರಿಕೆ?
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಹಣದುಬ್ಬರ ಮತ್ತು ಹೆದ್ದಾರಿ ನಿರ್ವಹಣಾ ವೆಚ್ಚ ಹೆಚ್ಚಳವನ್ನು ಟೋಲ್ ಏರಿಕೆಗೆ ಮುಖ್ಯ ಕಾರಣವಾಗಿ ನೀಡಿದೆ. ಹಲವಾರು ಹೆದ್ದಾರಿಗಳಲ್ಲಿ ಸಾಕಷ್ಟು ನಿರ್ವಹಣೆ ಇಲ್ಲ ಎಂಬ ಸಾರ್ವಜನಿಕ ಆರೋಪವೂ ಇದೆ. ಹೊಸ ಹಣಕಾಸು ವರ್ಷದ ಆರಂಭದಲ್ಲಿಯೇ ಈ ಏರಿಕೆಯು ಸಾಮಾನ್ಯರ ದೈನಂದಿನ ಜೀವನದ ಮೇಲೆ ಪರಿಣಾಮ ಬೀರಲಿದೆ.

Exit mobile version