ಟ್ಯಾಟೂದಿಂದ ಕ್ಯಾನ್ಸರ್, ಎಚ್‌ಐವಿ! ಆರೋಗ್ಯ ಇಲಾಖೆಯಿಂದ ಹೊಸ ನಿಯಮ ಜಾರಿ?

Tattoo

ಟ್ಯಾಟೂ (ಅಚ್ಚೆ) ಹಾಕಿಸಿಕೊಳ್ಳುವುದರಿಂದ ಸೋಂಕು ಮತ್ತು ಗಂಭೀರ ರೋಗಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ಕಟ್ಟುನಿಟ್ಟಾದ ಹೊಸ ನಿಯಮಗಳನ್ನು ಜಾರಿಗೆ ತರಲು ಮುಂದಾಗಿದೆ. ಟ್ಯಾಟೂದ ಸೂಜಿ, ಬಣ್ಣ ಮತ್ತು ಅನೈರ್ಮಲ್ಯದಿಂದ ಹೆಚ್ಚುತ್ತಿರುವ HIV, ಚರ್ಮ ಕ್ಯಾನ್ಸರ್, ಹೆಪಟೈಟಿಸ್ ಮತ್ತು ಇತರೆ ಸೋಂಕುಗಳನ್ನು ತಡೆಗಟ್ಟುವುದು ಈ ನಿಯಮಗಳ ಮುಖ್ಯ ಉದ್ದೇಶ.

ಟ್ಯಾಟೂ ಹಾಕೋರಿಗೆ ನಿಯಂತ್ರಣವೇ ಇಲ್ಲ!

ದೇಶದಲ್ಲಿ ಟ್ಯಾಟೂ ಕಲಾವಿದರು ಮತ್ತು ಸ್ಟುಡಿಯೋಗಳು ಕಟ್ಟುನಿಟ್ಟಾದ ನಿಯಮಗಳಿಲ್ಲದೆ ಕಾರ್ಯನಿರ್ವಹಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಸೂಜಿ, ಬಣ್ಣ ಮತ್ತು ಸಾಧನಗಳ ಸ್ವಚ್ಛತೆ ಕುರಿತು ಸರಿಯಾದ ಮಾನದಂಡಗಳನ್ನು ಅನುಸರಿಸುತ್ತಿಲ್ಲ. ಇದರಿಂದ HIV, ಹೆಪಟೈಟಿಸ್ B ಮತ್ತು C, ಸ್ಟ್ಯಾಫಿಲೋಕೊಕಸ್ ಔರೆಸ್ (Staphylococcus aureus) ನಂಥಾ ಮಾರಣಾಂತಿಕ ಸೋಂಕುಗಳು ಹರಡುವ ಅಪಾಯ ಹೆಚ್ಚಾಗಿದೆ. ಇದನ್ನು ಗಮನಿಸಿದ ಆರೋಗ್ಯ ಇಲಾಖೆ, ಮೊದಲ ಬಾರಿಗೆ ರಾಜ್ಯದಲ್ಲಿ ಟ್ಯಾಟೂಗೆ ಸಂಬಂಧಿಸಿದ ಕಾನೂನು ರೂಪಿಸಲು ತೀರ್ಮಾನಿಸಿದೆ.

ADVERTISEMENT
ADVERTISEMENT

ಹೊಸ ಕಾನೂನಿನ ಮುಖ್ಯ ಅಂಶಗಳು

1. ವೈದ್ಯಕೀಯ ತಪಾಸಣೆ ಕಡ್ಡಾಯ: ಟ್ಯಾಟೂ ಹಾಕಿಸಿಕೊಳ್ಳುವ ಪ್ರತಿಯೊಬ್ಬರೂ ಮೊದಲು ವೈದ್ಯರಿಂದ ತಪಾಸಣೆ ಮಾಡಿಸಿ, “ಆರೋಗ್ಯ ಪ್ರಮಾಣ ಪತ್ರ” ಪಡೆಯುವುದು ಕಡ್ಡಾಯವಾಗುತ್ತದೆ. ಇದು ಸೋಂಕು ಅಪಾಯವಿರುವವರನ್ನು ಗುರುತಿಸಲು ಸಹಾಯ ಮಾಡುತ್ತದೆ.

2. ಟ್ಯಾಟೂ ಕಲಾವಿದರಿಗೆ ಮಾರ್ಗಸೂಚಿಗಳು: ಟ್ಯಾಟೂ ಹಾಕುವವರು ಬಳಸುವ ಬಣ್ಣ, ರಾಸಾಯನಿಕಗಳು, ಸೂಜಿ ಮತ್ತು ಇತರೆ ಸಾಧನಗಳು ನಿರ್ದಿಷ್ಟ ಗುಣಮಟ್ಟಕ್ಕೆ ಅನುಗುಣವಾಗಿರಬೇಕು. ಇವುಗಳ ಬಗ್ಗೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡುವುದು ಕಡ್ಡಾಯವಾಗುತ್ತದೆ.

3. ಸ್ವಚ್ಛತೆ ಮತ್ತು ಸುರಕ್ಷತೆ: ಎಲ್ಲಾ ಟ್ಯಾಟೂ ಸ್ಟುಡಿಯೋಗಳು ಸೋಂಕು ನಿರೋಧಕ ಮಾನದಂಡಗಳನ್ನು ಪಾಲಿಸಬೇಕು. ಒಮ್ಮೆ ಬಳಸಿದ ಸೂಜಿ, ಹ್ಯಾಂಡ್ ಗ್ಲವ್ಸ್‌ಗೌ ಳನ್ನು ಪುನಃ ಬಳಸುವುದನ್ನು ನಿಷೇಧಿಸಲಾಗುತ್ತದೆ.

ಟ್ಯಾಟೂದಿಂದ ಹರಡುವ ರೋಗಗಳು ಯಾವುವು?

ಆರೋಗ್ಯ ಇಲಾಖೆಯ ಸಮೀಕ್ಷೆಯ ಪ್ರಕಾರ ಚರ್ಮ ಕ್ಯಾನ್ಸರ್, HIV, ಹೆಪಟೈಟಿಸ್ ಮತ್ತು ಬ್ಯಾಕ್ಟೀರಿಯಾದ ಸೋಂಕುಗಳು ಇತ್ತೀಚಿನ ವರ್ಷಗಳಲ್ಲಿ ಗಮನಾರ್ಹವಾಗಿ ಹೆಚ್ಚಿವೆ. ಇದಕ್ಕೆ ಕಾರಣ ಅಶುದ್ಧ ಸೂಜಿಗಳು ಮತ್ತು ರಾಸಾಯನಿಕಗಳ ಬಳಕೆ. ಉದಾಹರಣೆಗೆ, ಟ್ಯಾಟೂ ಬಣ್ಣಗಳಲ್ಲಿ ಕಂಡುಬರುವ ಕಾರ್ಸಿನೋಜೆನಿಕ್ (ಕ್ಯಾನ್ಸರ್ ಉಂಟುಮಾಡುವ) ರಾಸಾಯನಿಕಗಳು ದೀರ್ಘ ಕಾಲದಲ್ಲಿ ಚರ್ಮದ ಕ್ಯಾನ್ಸರ್‌ಗೆ ಕಾರಣವಾಗುತ್ತವೆ. ಅದೇ ರೀತಿ, ರಕ್ತದ ಮೂಲಕ ಹರಡುವ HIV ಮತ್ತು ಹೆಪಟೈಟಿಸ್ ಸೋಂಕುಗಳು ಅಶುದ್ಧ ಸೂಜಿಗಳಿಂದ ಸುಲಭವಾಗಿ ವರ್ಗಾವಣೆ ಆಗುತ್ತವೆ.

ಸಾರ್ವಜನಿಕರಿಗೆ ಎಚ್ಚರಿಕೆ!

ಆರೋಗ್ಯ ಇಲಾಖೆಯು ಟ್ಯಾಟೂ ಹಾಕಿಸಿಕೊಳ್ಳಲು ಬಯಸುವವರಿಗೆ ಕೆಲವು ಮುಖ್ಯ ಸೂಚನೆಗಳನ್ನು ನೀಡಿದೆ:

ಹೊಸ ನಿಯಮಗಳು ಜಾರಿಗೆ ಬಂದರೆ, ಟ್ಯಾಟೂ ಕಲಾವಿದರು ಮತ್ತು ಸ್ಟುಡಿಯೋಗಳು ಸರ್ಕಾರದಿಂದ ಪರವಾನಗಿ ಪಡೆಯಬೇಕಾಗುತ್ತದೆ. ಇದು ಸೋಂಕುಗಳ ಹರಡುವಿಕೆ ಮತ್ತು ದೀರ್ಘಕಾಲೀನ ಆರೋಗ್ಯ ಅಪಾಯಗಳನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದು ಆರೋಗ್ಯ ಇಲಾಖೆ ನಿರೀಕ್ಷಿಸಿದೆ.

Exit mobile version