ಆನ್‌ಲೈನ್ ಬೆಟ್ಟಿಂಗ್‌ನಿಂದ ಬರೋಬ್ಬರಿ 2000 ಸಾವಿರ ಕೋಟಿ ಸಂಗ್ರಹಿಸಿದ ವಿರೇಂದ್ರ ಪಪ್ಪಿ

Untitled design 2025 09 04t091613.976

ಚಿತ್ರದುರ್ಗ ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರ ಮೇಲೆ ಇಡಿ ನಡೆಸಿದ ತನಿಖೆ, ಪ್ರಕರಣವನ್ನು ಭಾರೀ ಪ್ರಮಾಣದ ಅಕ್ರಮ ಆನ್ಲೈನ್ ಬೆಟ್ಟಿಂಗ್ ಜಾಲವನ್ನು ಬಯಲು ಮಾಡಿದೆ. ಅಕ್ರಮ ಆನ್ಲೈನ್ ಬೆಟ್ಟಿಂಗ್ ಮತ್ತು ಗೇಮಿಂಗ್ ವ್ಯವಹಾರದ ಆರೋಪದ ಮೇಲೆ ಬಂಧಿತರಾಗಿದ್ದ ಶಾಸಕರ ವಿರುದ್ಧ ಇಡಿ ಅಧಿಕಾರಿಗಳು ಸ್ಪೋಟಕವಾದ ವಿವರಗಳನ್ನು ಬಹಿರಂಗಪಡಿಸಿದ್ದಾರೆ.

ಇಡಿ ಅಧಿಕಾರಿಗಳು ಚಳ್ಳಕೆರೆ ಮತ್ತು ಬೆಂಗಳೂರಿನಲ್ಲಿ ವೀರೇಂದ್ರ ಅವರ ನಿವಾಸಗಳ ಮೇಲೆ ದಾಳಿ ನಡೆಸಿದ್ದು, ಒಟ್ಟು 55 ಕೋಟಿ ರೂಪಾಯಿಗಳನ್ನು ಫ್ರೀಜ್ ಮಾಡಿದ್ದಾರೆ. ಇದರಲ್ಲಿ ಶಾಸಕನ 9 ಬ್ಯಾಂಕ್ ಖಾತೆಗಳಿಂದ 40.69 ಕೋಟಿ ರೂಪಾಯಿ ಮತ್ತು 262 ಮ್ಯೂಲ್ ಖಾತೆಗಳಿಂದ 14.46 ಕೋಟಿ ರೂಪಾಯಿಗಳನ್ನು ಜಪ್ತಿ ಮಾಡಲಾಗಿದೆ. ಜೊತೆಗೆ, ಐದು ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ದಾಳಿಯಲ್ಲಿ ವೀರೇಂದ್ರ ಅವರ ಸಹೋದರರಾದ ಕೆ.ಸಿ. ತಿಪ್ಪೇಸ್ವಾಮಿ ಸೇರಿದಂತೆ ಡೈಮೆಂಡ್ ಸಾಫ್ಟ್ ಟೆಕ್, ಟಿಆರ್‌ಎಸ್ ಟೆಕ್ನಾಲಜೀಸ್, ಮತ್ತು ಪ್ರೈಮ್ 9 ಟೆಕ್ನಾಲಜೀಸ್ ಎಂಬ ಮೂರು ಕಂಪನಿಗಳು ದುಬೈನಿಂದ ಕಾರ್ಯನಿರ್ವಹಿಸುತ್ತಿದ್ದವು ಎಂಬ ಆಘಾತಕಾರಿ ಸಂಗತಿ ಬಯಲಾಗಿದೆ.

ಇಡಿ ತನಿಖೆಯಿಂದ ತಿಳಿದುಬಂದಿರುವಂತೆ, ವೀರೇಂದ್ರ ಪಪ್ಪಿ ಮತ್ತು ಸಹಚರರು ಆನ್‌ಲೈನ್ ಬೆಟ್ಟಿಂಗ್ ಆಪ್‌ಗಳ ಮೂಲಕ ಅಲ್ಪಾವಧಿಯಲ್ಲಿ ಸುಮಾರು 2000 ಕೋಟಿ ರೂಪಾಯಿಗಳಷ್ಟು ಲಾಭ ಗಳಿಸಿದ್ದಾರೆ ಎಂಬ ಆರೋಪವಿದೆ. ಈ ಹಣವನ್ನು 262 ಮ್ಯೂಲ್ ಖಾತೆಗಳ ಮೂಲಕ ಸಂಗ್ರಹಿಸಲಾಗಿದೆ ಎಂದು ಇಡಿ ಹೇಳಿದೆ. ಈ ಕಂಪನಿಗಳು ಕಾಲ್‌ಸೆಂಟರ್‌ಗಳ ಮೂಲಕ ಗೇಮಿಂಗ್ ವ್ಯವಹಾರವನ್ನು ನಿರ್ವಹಿಸುತ್ತಿದ್ದವು ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಚಳ್ಳಕೆರೆಯ ಕೋಟಕ್ ಮಹೀಂದ್ರ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್‌ಗಳಿಗೆ ಇಡಿ ಅಧಿಕಾರಿಗಳು ಭೇಟಿ ನೀಡಿ, ವೀರೇಂದ್ರ ಮತ್ತು ಅವರ ಕುಟುಂಬ ಸದಸ್ಯರ ಹಣಕಾಸು ವರ್ಗಾವಣೆಗೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ಬೆಟ್ಟಿಂಗ್ ಆಪ್‌ಗಳ ಮೂಲಕ ಗಳಿಸಿದ ಹಣವನ್ನು ಈ ಖಾತೆಗಳ ಮೂಲಕ ವರ್ಗಾಯಿಸಿ, ಅಕ್ರಮ ವ್ಯವಹಾರ ನಡೆಸಲಾಗಿದೆ ಎಂಬ ಶಂಕೆಯಿದೆ.

ವೀರೇಂದ್ರ ಪಪ್ಪಿಯ ಇಡಿ ಕಸ್ಟಡಿ ಇಂದಿಗೆ ಅಂತ್ಯಗೊಂಡಿದ್ದು, ಮೊದಲಿಗೆ 5 ದಿನ ಮತ್ತು ಎರಡನೇ ಬಾರಿ 6 ದಿನಗಳ ಕಾಲ ಕಸ್ಟಡಿಯಲ್ಲಿದ್ದರು. ಇಡಿ ಈಗ ಮತ್ತೆ ಕಸ್ಟಡಿಗೆ ಕೇಳಿಕೊಳ್ಳುವ ಸಾಧ್ಯತೆಯಿದೆ. ಒಂದು ವೇಳೆ ಕಸ್ಟಡಿಗೆ ಕೇಳದಿದ್ದರೆ, ನ್ಯಾಯಾಂಗ ಬಂಧನಕ್ಕೆ ಕೇಳಲು ಇಡಿ ಸಿದ್ಧತೆ ನಡೆಸಿದೆ.

Exit mobile version