ಬೆಂಗಳೂರು:ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿ ಖೈದಿಗಳಿಗೆ ಐಷಾರಾಮಿ ಸವಲತ್ತುಗಳು ಮತ್ತು ರಾಜಾತಿಥ್ಯ ದೊರಕುತ್ತಿದ್ದ ಪ್ರಕರಣವು ರಾಜ್ಯದ ಪ್ರಮುಖ ಚರ್ಚೆಯ ವಿಷಯವಾಗಿದೆ. ಈ ತೀವ್ರ ಸಮಸ್ಯೆಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಆದೇಶ ಹೊರಡಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಮತ್ತು ಇಂತಹ ಘಟನೆಗಳು ಮತ್ತೆ ನಡೆಯದಂತೆ ತಡೆಯುವ ಬಗ್ಗೆ ಸರ್ಕಾರ ಗಂಭೀರವಾಗಿ ಯೋಚಿಸುತ್ತಿದೆ ಎಂದು ಸಿಎಂ ಖಚಿತಪಡಿಸಿದ್ದಾರೆ.
ಜೈಲು ಆಡಳಿತದಲ್ಲಿನ ಈ ಬೃಹತ್ ತಪ್ಪಿಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ರಜೆಯ ಮೇಲೆ ತೆರಳಿದ್ದಾರೆ. ಈ ಕ್ರಮವನ್ನು ಸರ್ಕಾರದ ತುರ್ತು ಪ್ರತಿಕ್ರಿಯೆ ಎಂದು ಪರಿಗಣಿಸಲಾಗಿದೆ. ಇದೇ ವೇಳೆ, ಈ ಪ್ರಕರಣವನ್ನು ಸಂಪೂರ್ಣವಾಗಿ ಪರಿಶೋಧಿಸುವ ಸಲುವಾಗಿ ಗೃಹ ಸಚಿವ ಡಾ. ಜಿ. ಪಾರಮೇಶ್ವರ ಅವರು ನಾಳೆ (ನ.10) ಉನ್ನತಮಟ್ಟದ ಸಭೆ ಸೇರಿಸಲು ನಿರ್ಧರಿಸಿದ್ದಾರೆ. ಈ ಸಭೆಯಲ್ಲಿ ಘಟನೆಯ ಎಲ್ಲಾ ಮುಖಗಳನ್ನು ಪರಿಶೀಲಿಸಲಾಗುವುದು ಮತ್ತು ಜವಾಬ್ದಾರಿಯುತರ ಮೇಲೆ ಕ್ರಮ ಸೂಚಿಸಲಾಗುವುದು.ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮದೊಂದಿಗೆ ಮಾತನಾಡಿ, ಈ ಪ್ರಕರಣವನ್ನು ನಮ್ಮ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಕೈದಿಗಳಿಗೆ ರಾಜಾತಿಥ್ಯ ಮತ್ತು ಸವಲತ್ತುಗಳನ್ನು ಒದಗಿಸಲು ಅವಕಾಶ ಮಾಡಿ ಕೊಟ್ಟ ವ್ಯಕ್ತಿಗಳ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು. ತಪ್ಪು ಮಾಡಿದವರನ್ನು ಯಾರೇ ಆಗಲಿ, ಯಾವುದೇ ಸಂದರ್ಭದಲ್ಲಿ ಅವರಿಗೆ ಶಿಕ್ಷೆ ವಿಧಿಸಲಾಗುತ್ತದೆ. ಇದು ನಮ್ಮ ಸರ್ಕಾರದ ಕ ಟ್ಟುನಿಟ್ಟಿನ ನೀತಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರದಿಗಳ ಪ್ರಕಾರ, ಕೆಲವು ಪ್ರಭಾವಶಾಲಿ ಖೈದಿಗಳು ಜೈಲಿನೊಳಗೆ ಮೊಬೈಲ್ ಫೋನ್ಗಳನ್ನು ಬಳಸುವುದು, ಐಷಾರಾಮಿ ಆಹಾರ ಪಡೆಯುವುದು, ಮತ್ತು ಇತರೆ ಅನುಮತಿಸಲಾಗದ ಸವಲತ್ತುಗಳನ್ನು ಅನುಭವಿಸುತ್ತಿದ್ದರೆಂದು ತಿಳಿದುಬಂದಿದೆ. ಇದು ಸಾಮಾನ್ಯ ನಾಗರಿಕರಲ್ಲಿ ಮತ್ತು ನ್ಯಾಯ ವ್ಯವಸ್ಥೆಯಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ.ಸರ್ಕಾರದ ವತಿಯಿಂದ ಇಂತಹ ಕ್ರಮಗಳು ಜೈಲು ಸುಧಾರಣೆ ಮತ್ತು ಕೈದಿ ನಿರ್ವಹಣೆಗೆ ಸಂಬಂಧಿಸಿದ ಹೊಸ ಮಾರ್ಗಸೂಚಿಗಳನ್ನು ರೂಪಿಸಬೇಕು ಎಂದು ಸಾರ್ವಜನಿಕರು ಹೇಳಿದ್ದಾರೆ. ಒಟ್ಟಾರೆ ಜೈಲಿನಲ್ಲಿ ಖೈದಿಗಳು ತಮ್ಮ ತಪ್ಪಿಗೆ ಯಾವುದೇ ಪ್ರಾಯಶ್ಚಿತ ಇಲ್ಲದೆ ಐಶಾರಾಮಿ ಜೀವನ ನಡೆಸುತ್ತಿರುವುದು ಅಧಿಕಾರಿಗಳ ದುರ್ಬಲತೆಗಳನ್ನ ಎತ್ತಿತೋರಿಸುತ್ತಿದೆ. ಮುಂದೆ ಈ ರೀತಿಯ ಪ್ರಕರಣ ನಡೆಯದಂತೆ ಅಧಿಕಾರಿಗಲು ಹಾಗೂ ಅಧಿಕಾರಿಗಲ ವರ್ಗ ಕ್ರಮ ವಹಿಸಿ, ನಾಳೆ ನಡೆಯುವ ಸಭೆಯಲ್ಲಿ ಇದಕ್ಕೆ ಸೂಕ್ತವಾದ ಜರುಗಿಸಿ ಆರೋಪಿಗಳ ವಿರುದ್ದ ಕ್ರಮ ತೆಗೆದುಕೋಳ್ಳುತ್ತಾರಾ ಎಂದು ಕಾದು ನೋಡಬೇಕಿದೆ.
