ಕರ್ನಾಟಕದ ಕರಾವಳಿ ಸೇರಿ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ

1200 675 23174618 1021 23174618 1734921850159

ರಾಜ್ಯದಲ್ಲಿ ಏಪ್ರಿಲ್ 8ರವರೆಗೆ ಪೂರ್ವ ಮುಂಗಾರು ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ಕರಾವಳಿ ಜಿಲ್ಲೆಗಳಾದ ದಕ್ಷಿಣಕನ್ನಡ, ಉತ್ತರಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮಳೆಯಾಗುವ ಸಂಭವವಿದೆ.

ಹೌದು ದಕ್ಷಿಣ ಒಳನಾಡಿನ ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುವ ಸಂಭವವಿದೆ. ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ರಾಜ್ಯದ ಕೆಲವೆಡೆ ಪ್ರತಿ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ರಾಜ್ಯ ಹವಮಾನ ಇಲಾಖೆ ಮಾಹಿತಿ ನೀಡಿದ್ದು, ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರು, ಬಳ್ಳಾರಿ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 38 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ಕರ್ನಾಟಕದ ಹವಾಮಾನ ವರದಿ ತಿಳಿಯಿರಿ

ನಗರಗಳ ಹವಾಮಾನ ವರದಿ:
ಬೆಂಗಳೂರು: 31-22
ಮಂಗಳೂರು: 31-26
ಶಿವಮೊಗ್ಗ: 33-23
ಬೆಳಗಾವಿ: 35-22
ಮೈಸೂರು: 33-22

ಮಂಡ್ಯ: 32-22
ಮಡಿಕೇರಿ: 30-19
ರಾಮನಗರ: 32-22
ಹಾಸನ: 31-21
ಚಾಮರಾಜನಗರ: 32-22
ಚಿಕ್ಕಬಳ್ಳಾಪುರ: 30-21

ಕೋಲಾರ: 31-21
ತುಮಕೂರು: 32-21
ಉಡುಪಿ: 32-27
ಕಾರವಾರ: 33-26
ಚಿಕ್ಕಮಗಳೂರು: 30-19
ದಾವಣಗೆರೆ: 34-24

ಹುಬ್ಬಳ್ಳಿ: 37-23
ಚಿತ್ರದುರ್ಗ: 34-23
ಹಾವೇರಿ: 37-24
ಬಳ್ಳಾರಿ: 38-26
ಗದಗ: 36-24
ಕೊಪ್ಪಳ: 36-25

ರಾಯಚೂರು: 38-26
ಯಾದಗಿರಿ: 37-24
ವಿಜಯಪುರ: 37-24
ಬೀದರ್: 37-24
ಕಲಬುರಗಿ: 38-24
ಬಾಗಲಕೋಟೆ: 38-25

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..

Exit mobile version