ದೆಹಲಿಯ ಹೈಕಮಾಂಡ್ ಪಾಲಿಗೆ ರಾಜ್ಯ ಕಾಂಗ್ರೆಸ್ ಸದಾ ಸಂಜೀವಿನಿ. ದೇಶದ ರಾಜಕೀಯದಲ್ಲಿ 2014ರಿಂದ ಇಲ್ಲಿಯವರೆಗೂ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್ ಮುಗ್ಗರಿಸಿ, ಮುಗ್ಗರಿಸಿ ಮತ್ತೆ-ಮತ್ತೆ ಬಿದ್ದಿದ್ದೆ ಜಾಸ್ತಿ..ಪೆಟ್ಟಾದ ಸ್ಥಳಕ್ಕೆ ಮತ್ತೆ ಮತ್ತೆ ಪೆಟ್ಟಾಗಿ ಈ ಜೀವನವೇ (ರಾಜಕೀಯ) ಬೇಡ ಅನ್ನೋ ನಿರ್ಧಾರಕ್ಕೆ ಬಂದ ಹೈಕಮಾಂಡ್‌ಗೆ ಕರ್ನಾಟಕ ಕಾಂಗ್ರೆಸ್ ರಾಜಕೀಯವಾಗಿ ಬದುಕುವ ಚೈತನ್ಯ ಕೊಟ್ಟಿದೆ. ಈಗಲೂ ದೇಶದ ಕಾಂಗ್ರೆಸ್‌ಗೆ ಮತ್ತೆ ರಾಜಕೀಯದಲ್ಲಿ ಉತ್ಸಾಹ ತುಂಬಿದ್ದು ಇದೇ ಕಾಂಗ್ರೆಸ್..ಇದೇ ಸಿದ್ದರಾಮಯ್ಯ …ಡಿಕೆ ಶಿವಕುಮಾರ್..ಡಾ.ಜಿ ಪರಮೇಶ್ವರ್..
ದೇಶದಲ್ಲಿ ಯುಪಿಎ ಸರ್ಕಾರ ಉತ್ತುಂಗ ಸ್ಥತಿಯಲ್ಲಿದ್ದ ಕಾಲವಾದು. ಇನ್ನೂ ನಮನ್ನ ಬಿಜೆಪಿ ನೇತೃತ್ವದ ಎನ್ಡಿಎ ಏನು ಮಾಡಲು ಆಗಲ್ಲ.. ಆನೆ ನಡೆದಿದ್ದೇ ಹಾದಿ ಅಂದುಕೊಂಡಿತ್ತು ಕಾಂಗ್ರೆಸ್ ಹೈಕಮಾಂಡ್.ಮುಂದೊಂದು ದಿನ ಮೋದಿ ಅನ್ನೋ ಪದ ಹೈಕಮಾಂಡ್‌ಗೆ ನಿದ್ದೆಗೆಡಿಸುತ್ತೆ ಅಂತ ಸೋನಿಯಾಗಾಂಧಿ,ರಾಹುಲ್ ಗಾಂಧಿ ಕನಸು ಮನಸಿನಲ್ಲೂಅಂದುಕೊಂಡಿರಲಿಲ್ಲ.
2004 ಹಾಗೂ 2009ರ ಲೋಕಸಭಾ ಚುನಾವಣೆಯನ್ನ ಬಿಜೆಪಿಯ ಭೀಷ್ಮಾ ಅಡ್ವಾನಿ ನೇತೃತ್ವದಲ್ಲಿಎದುರಿಸಿ ಯುಪಿಎ ವಿರುದ್ಧ ಸೋತಿದ್ದ ಬಿಜೆಪಿಯನ್ನ 2014ರಲ್ಲಿ ಶತಾಯಗತಾಯ ಯುಪಿಎ ಸೋಲಿಸಲೇಬೇಕು ಅಂತ ನಿರ್ಧಾರ ಮಾಡಿತ್ತು ಆರ್ಎಸ್ಎಸ್. ಕಾಂಗ್ರೆಸ್ ನೇತೃತ್ವದ ಯುಪಿಎ ಗೆಲುವಿನ ನಾಗಲೋಟಕ್ಕೆ ಬ್ರೇಕ್ ಹಾಕಲು ನಿರ್ಧಾರ ಮಾಡಿ ಗುಜರಾತ್ ಸಿಎಂ ಮೋದಿ ಅಸ್ತ್ರ ಬಳಸುವುದು ಅನಿವಾರ್ಯ ಅಂತ ಬಾವಿಸಿತು.ಯುಪಿಎ ಭ್ರಷ್ಟಾಚಾರದ ವಿರುದ್ಧ ಮೋದಿ ಅಂತ ಕ್ಲೀನ್ ಇಮೇಜ್ ಇರೋ ನಾಯಕನ ಅವಶ್ಯಕತೆಯನ್ನ ಆರ್ಎಸ್ಎಸ್ ಅರಿತಿತ್ತು.
ಅದರಂತೆ 2014ರ ಲೋಕಸಭಾ ಚುನಾವಣೆಯಲ್ಲಿ ಯುಪಿಎ ವಿರುದ್ದ ಮೋದಿ ಅಸ್ತ್ರದ ಪ್ರಯೋಗ ಜತೆಗೆ ಬಿಜೆಪಿ 272+ ಗುರಿಯೊಂದಿಂಗೆ ಚುನಾವಣೆ ಎದುರಿಸಿ ಅದರಲ್ಲಿ ಸಕ್ಸಸ್ ಕೂಡ ಆಯಿತು.. ಅಲ್ಲಿಗೆ ಕಾಂಗ್ರೆಸ್ ಅಶ್ವವೇಗ ಕುದುರೆಯನ್ನ ನಿಲ್ಲಿಸುವಲ್ಲಿ ಅಮಿತ್ ಶಾ – ಮೋದಿ ಭಲೇ ಜೋಡಿ ಯಶಸ್ವಿಯಾದರು.
2014ರ ಆರಂಭವಾದ ಸೋಲಿನ ಸರಮಾಲೆ ಸಂಕೋಲೆಗಳಿಂದ ಕಾಂಗ್ರೆಸ್ ಹೈಕಮಾಂಡ್‌ಗೆ ಬಿಡುಗಡೆ ಭಾಗ್ಯವೇ ಸಿಗಲಿಲ್ಲ. ಬಂದ ಎಲೆಕ್ಷನ್‌ನಲ್ಲಿ ಹಲವು ಬಾರಿ ಜಾಮೀನು ಪಡೆಯಲು ಹರಸಹಾಸಪಟ್ರೂ ಫಲಿತಾಂಶದಲ್ಲಿ ಬದಲಾವಣೆ ಕಾಣಲು ಸಾಧ್ಯವಾಗಲಿಲ್ಲ. ಹೈಕಮಾಂಡ್ ಹಿಡಿದಿರುವ ಈ ಶಾಪ ವಿಮೋಚನೆ ಆಗಲು ಏನು ಮಾಡಬೇಕು ಅಂತ ಯೋಚಿಸುತ್ತಿದ್ದಾಗ ಮತ್ತೆ ನಾವಿದ್ದೇವೆ ಅಂತ ಕೈ ಹಿಡಿದಿದ್ದು ಇದೇ ಕರ್ನಾಟಕದ ಕಾಂಗ್ರೆಸ್ ನಾಯಕರು..ಅದು ಸಿದ್ದರಾಮಯ್ಯ ತುಟಿಕ್ ಪಿಟಿಕ್ ಎನ್ನದೇ ಸಿಎಂ ಸ್ಥಾನವನ್ನ ಡಿಕೆ ಶಿವಕುಮಾರ್‌ಗೆ ಬಿಟ್ಟು ಕೊಡುವ ಮೂಲಕ ದೇಶದಲ್ಲಿ ಕಾಂಗ್ರೆಸ್ ಹೈಕಮಾಂಡ್‌ಗೆ ಮರ್ಯಾದೆ ಕಾಪಾಡಿದ್ದಾರೆ..ಜತೆಗೆ ಕಾಂಗ್ರೆಸ್ ನಾಯಕತ್ವ ಸ್ಟ್ರಾಂಗ್ ಆಗ್ತಿದೆ ಅನ್ನೋ ಮೇಸೆಜ್ ಕಳಿಸಿದ್ದಾರೆ..
2014ರಲ್ಲಿ ದೇಶದಲ್ಲಿ ಕಾಂಗ್ರೆಸ್ ಸೋತ್ರು..ರಾಜ್ಯದಲ್ಲಿ ಗೆದ್ದಿತ್ತು..
ಮೋದಿ ಅಮಿತ್ ಶಾ ಭಲೇ ಜೋಡಿ ಆಟಕ್ಕೆ 2014ರಲ್ಲಿ ಕಾಂಗ್ರೆಸ್ ಮಕಾಡೆ ಮಲಗಿತ್ತು. ಆದ್ರೆ ಸಿದ್ದರಾಮಯ್ಯ ಸಿಎಂ ಆಗಿ, ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷರಾಗಿ ಆ ಕಷ್ಟಕಾಲದಲ್ಲೂ ಒಂಬತ್ತು ಸಂದಸದರನ್ನ ರಾಜ್ಯದಿಂದ ಆಯ್ಕೆ ಮಾಡಿ ಕಳುಹಿಸಿದ್ರು. ಈ ಬಗ್ಗೆ ಹಲವು ಬಾರಿ ರಾಹುಲ್ ಹಾಗೂ ಸೋನಿಯಾ ಅವರೇ ರಾಜ್ಯ ನಾಯಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ರು.
ಮೋದಿ-ಅಮಿತ್ ಶಾ ಮೀರಿಸಿದ ಸಿದ್ದು-ಡಿಕೆ ಜೋಡಿ
ಹೈಕಮಾಂಡ್ ಕೊಟ್ಟ ಟಾಸ್ಕ್‌ಗಳನ್ನ ನಿರ್ವಹಿಸಿ ಬಿಜೆಪಿ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿ ಜೈಲು ಪಾಲಾಗುವ ಪರಿಸ್ಥಿತಿ ಬಂದ ಡಿಕೆಶಿ ಮುಂದೆ ಎರಡು ಅವಕಾಶಗಳಿದ್ವು. ಒಂದು ಜೈಲಿಗೆ ಹೋಗಬೇಕು ಮತ್ತೊಂದು ಕಾಂಗ್ರೆಸ್ ನಿಷ್ಠೆ ಬಿಟ್ಟು ಬಿಜೆಪಿ ಸೇರ್ಪಡೆಯಾಗಬೇಕು. ಬಿಜೆಪಿ ಸೇರ್ಪಡೆಯಾದ್ರೆ ವಾಷಿಂಗ್ ಮಿಷನ್ ಹಾಕಿ ನಿಮ್ಮನ್ನ ಭ್ರಷ್ಟಚಾರ ಆರೋಪ ಮುಕ್ತ ಮಾಡ್ತೀವಿ ಅಂತ ಆಫರ್ ಕೊಟ್ಟಿದ್ರಂತೆ. ಈ ಪ್ರೆಸರ್ ಪಾಲಿಟಿಕ್ಸ್ ಬಗ್ಗೆ ಡಿಕೆ ಸುರೇಶ್ ಸೇರಿದಂತೆ ಕುಟುಂಬದ ಸದಸ್ಯರ ಜತೆ ಚರ್ಚೆ ಮಾಡಿದಾಗ ಬಿಜೆಪಿಗೆ ಹೋದ್ರೆ ಸಿಎಂ ಆಸೆ ಬಿಡಬೇಕಾಗುತ್ತೆ. ಇದನ್ನ ಫೇಸ್ ಮಾಡಕ್ಕೆ ರೆಡಿಯಾಗಿ ಜೈಲಿಗೆ ಹೋದ್ರೆ ಬಂದ ತಕ್ಷಣ ಕೆಪಿಸಿಸಿ ಹಾಗೂ ಸಿಎಂ ಸ್ಥಾನ ನಿನ್ನ ಮನೆ ಬಾಗಿಲ ಬಳಿ ಬಂದು ನಿಂತುರುತ್ತೆ ಅಂದ್ರೆಂತೆ.ಸಹೋದರನ ಸಲಹಯಂತೆ ಜೈಲಿಗೆ ಹೋಗುವುದೇ ಲೇಸು ಅಂತ ತೀರ್ಮಾನ ಮಾಡಿದ್ರು ಡಿಕೆ ಶಿವಕುಮಾರ್.
ನಂತರ ಆಗಿದ್ದೆಲ್ಲವೂ…ರಣ ರೋಚಕ
ಜೈಲಿನಲ್ಲಿದ್ದ ಡಿಕೆ ಶಿವಕುಮಾರ್ ಭೇಟಿ ಮಾಡಿದ್ದ ಸೋನಿಯಗಾಂಧಿ ಪಕ್ಷಕ್ಕಾಗಿ ನಿನ್ನ ನಿಷ್ಠೆ ಪ್ರಶ್ನಾರ್ಹ .. ಜೈಲಿನಿಂದ ಬಂದ ತಕ್ಷಣ ಕೆಪಿಸಿಸಿ ಅಧ್ಯಕ್ಷ ಪಟ್ಟ ನಿನಗೆ ಕೊಡ್ತೀವಿ ರಾಜ್ಯ ಸುತ್ತಿ ಪಕ್ಷವನ್ನ ಅಧಿಕಾರಕ್ಕೆ ತೆಗೆದುಕೊಂಡು ಬಾ ಅಂತ ಸೂಚಿಸಿದ್ರು. ಸೋನಿಯಾ ಗಾಂಧಿ ಕೊಟ್ಟ ಮಾತು ಮರೆಯಲಿಲ್ಲ. ಡಿಕೆ ಶಿವಕುಮಾರ್ ಛಲ ಬಿಡಲಿಲ್ಲ. ಆದ್ರೆ ರಾಜ್ಯ ಕಾಂಗ್ರೆಸ್ ಈ ಬೆಳವಣಿಗೆಯನ್ನು ಬಿಜೆಪಿ ವ್ಯಂಗ್ಯವಾಡಿದ್ದು ನಿಜ. ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಒಂದಾಗಿ ಹೋಗಲ್ಲ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ..ನಮ್ಮ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರೋದನ್ನ ಯಾರು ತಪ್ಪಿಸಲು ಸಾಧ್ಯವಿಲ್ಲ ಅಂದುಕೊಂಡ್ರು. ಅದ್ರೆ ಬಿಜೆಪಿ ಲೆಕ್ಕಚಾರವನ್ನು ತಪ್ಪಾಗಿಸಿದ್ರು ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಜೋಡಿ..
ಪ್ರತಿಷ್ಠೆಯನ್ನ ಪಕ್ಕಕ್ಕಿಟ್ಟು ಪಕ್ಷ ಅಧಿಕಾರಕ್ಕೆ ತಂದ್ರು..
ಯಡಿಯೂರಪ್ಪ ರಾಜಕೀಯವಾಗಿ ಆಕ್ಟೀವ್ ಆಗಿದ್ರೂ ಬಿಜೆಪಿ ಹೈಕಮಾಂಡ್ 2022ರಲ್ಲಿ ಸಿಎಂ ಸ್ಥಾನದಿಂದ ಕೆಳಗಿಳಿಯುವಂತೆ ಸೂಚನೆ ನೀಡಿತು.ಇದನ್ನ ಯಡಿಯೂರಪ್ಪ ಕಣ್ಣೀರಿಡುತ್ತಾ ಒಪ್ಪಿಕೊಂಡರು ಅವರ ಬೆಂಬಲಿಗರು ಇದನ್ನ ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಒಂದು ಕಡೆ ಯಡಿಯೂರಪ್ಪ ಅವರನ್ನ ಅಗೌರವಯುತವಾಗಿ ನಡೆಸಿಕೊಂಡಿದ್ದು.. ಮತ್ತೊಂದು ಕಡೆ ಸರ್ಕಾರದ ವಿರುದ್ಧ ಕೇಳಿಬಂದ ಕಮಿಷನ್ ಆರೋಪಗಳು ಸ್ವತಹ: ಬಿಜೆಪಿ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿತ್ತು.ಇದನ್ನ ಬೇಗ ಅರ್ಥೈಸಿಕೊಂಡ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ತಮ್ಮ ಪ್ರತಿಷ್ಠೆಗಳನ್ನ ಬದಿಗೊತ್ತಿ ಪಕ್ಷ ಅಧಿಕಾರಕ್ಕೆ ತರಲು ಇಬ್ಬರು ಒಂದಾಗಿ ಹೋದ್ರು.
ಸಿದ್ದು ಜತೆಗಿನ ಜಗಳಕಿಂತಲೂ ಸ್ನೇಹದ ವೇಲ್ಯೂ ಅರಿತಿದ್ದ ಡಿಕೆಶಿ
ಕೆಪಿಸಿಸಿ ಸಾರಥ್ಯ ನನ್ನದೇ ಇದ್ರೂ ನಾನು ಉತ್ತಮ ಸಂಘಟನಕಾರನಾದ್ರೂ..ಮಾಸ್ ಲೀಡರ್ ಸಿದ್ದರಾಮಯ್ಯ ಅವರ ಸಪೋರ್ಟ್ ಇಲ್ಲದೇ ರಾಜ್ಯದಲ್ಲಿ ಅಧಿಕಾರಕ್ಕೇರುವುದು ಅಷ್ಟು ಸುಲುಭವಿಲ್ಲಅನ್ನೋದು ಡಿಕೆಶಿಗೆ ತಿಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲ. ಹೀಗಾಗಿ ಮೇಕೆದಾಟು ಪಾದಯಾತ್ರೆ ಹಾಗೂ ರಾಹುಲ್ ಭಾರತ್ ಜೋಡೋದಲ್ಲಿ ಸಿದ್ದರಾಮಯ್ಯ ಅವರನ್ನ ಜತೆಗೆ ಕರೆದುಕೊಂಡು ಹೆಜ್ಜೆ ಹಾಕಿದ್ರು.. ರಾಹುಲ್ ಗಾಂಧಿ ಸೂಚನೆ ಹಾಗೂ ವೇಣುಗೋಪಾಲ್ ಸಲಹಯಂತೆ ಇಬ್ಬರು ಜೋಡೆತ್ತುಗಳಾಗಿ ಕೆಲಸ ಮಾಡಿದ್ರು. ಅದ್ರಲ್ಲೂ ಸಿದ್ದರಾಮೋತ್ಸವದಲ್ಲಿ ಮಾಡಿದ ಶಕ್ತಿ ಪ್ರದರ್ಶನ ಸಿದ್ದರಾಮಯ್ಯ ಜತೆ ಇನ್ನಷ್ಟು ಆಪ್ತವಾಗಿ ನಡೆದುಕೊಳ್ಳಲು ಕಾರಣವಾಯಿತು.ಇದು ಎಲ್ಲಿವರೆಗೂ ಅಂದ್ರೆ ಟಿಕೆಟ್ ಹಂಚಿಕೆಯಿಂದ ಹಿಡಿದು ಚುನಾವಣೆ ಇನ್ನೂ ಎರಡು ದಿನಗಳಿರುವಾಗ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಇಬ್ಬರು ಒಬ್ಬರನ್ನೊಬ್ಬರು ಸಂದರ್ಶನ ಮಾಡಿ ಇಬ್ಬರು ಒಂದಾಗಿದ್ದಾರೆ ನಾವು ಒಂದಾಗಿ ವೋಟ್ ಹಾಕಿಸಬೇಕು ಹಠಕ್ಕೆ ಬಿದ್ದು ವೋಟ್ ಹಾಕಿ 136 ಸ್ಥಾನ ಗೆಲ್ಲಿಸಿ ದೇಶಕ್ಕೆ ಕರ್ನಾಟದಲ್ಲಿ ಕಾಂಗ್ರೆಸ್ ಸುಭದ್ರ ಅನ್ನೋ ಸಂದೇಶ ರವಾನೆ ಮಾಡಿದ್ರು.
ದೆಹಲಿ ಹೈಕಮಾಂಡ್ ಲೆಕ್ಕಚಾರ ಉಲ್ಟಾ ಮಾಡಿದ ಸಿದ್ದರಾಮಯ್ಯ :
ಕಾಂಗ್ರೆಸ್‌ಲ್ಲಿ ಇನ್ನೂ ಮುಂದೆ ಸಿದ್ದು ಫಾರ್ಮಾಲಾ :
2023ರಲ್ಲಿ136 ಸ್ಥಾನ ಗೆದ್ದ ತಕ್ಷಣ ಸಿಎಂ ಅಭ್ಯರ್ಥಿ ನೇಮಕ ಮಾಡುವುದು ಅಷ್ಟು ಸುಲುಭವಿರಲಿಲ್ಲ. ಕೆಪಿಸಿಸಿ ಅಧ್ಯಕ್ಷ ನಾನು ಸಿಎಂ ಆಗಬೇಕು ಅಂತ ಡಿಕೆ ಶಿವಕುಮಾರ್ ಹಠ ಹಿಡಿದ್ರು. ಇತ್ತ ಸಿದ್ದರಾಮಯ್ಯ ನಾನು ಸಿನಿಯರ್ ಹೀಗಾಗಿ ನನಗೆ ಮೊದಲು ಅವಕಾಶ ಸಿಗಬೇಕು ಅಂತ ಪಟ್ಟು ಹಿಡಿದ್ರು.ಕೊನೆಗೆ ಹೈಕಮಾಂಡ್ ಅಂಗಳದಲ್ಲಿ ಒಪ್ಪಂದಕ್ಕೆ ಬಂದು ಡಿಕೆ ಶಿವಕುಮಾರ್ ಡಿಸಿಎಂ ಆಗಿ.. ಸಿದ್ದರಾಮಯ್ಯ ಸಿಎಂ ಆಗಿ ಪ್ರಮಾನವಚನ ಬೋದಿಸಿದ್ರು..ಇನ್ನೂ ಈ ಸರ್ಕಾರದಲ್ಲಿ ಅಧಿಕಾರ ಹಂಚಿಕೆ ಬಗ್ಗೆ ವಿಪಕ್ಷಗಳು ಟೀಕೆ ಮಾಡಿದಾಗಲೂ ಹೈಕಮಾಂಡ್ ಕಡೆ ಬೇರಳು ತೋರಿಸಿ ನಾಯಕತ್ವ ಗೊಂದಲಕ್ಕೆ ತೆರೆ ಎಳೆದರು..
ರಾಹುಲ್ ಕೊಟ್ಟ ಮಾತು ಮರೆತು ದೆಹಲಿಗೆ ಕರೆಸಿ ರಾಜೀನಾಮೆ ಕೊಡಿ ಅಂದಗಲೂ ಸಿದ್ದರಾಮಯ್ಯ ಯೋಚನೆ ಮಾಡಲಿಲ್ಲ. ನಾನು ರಾಜೀನಾಮೆಗೆ ಸಿದ್ಧ-ನಿಮ್ಮ ಆದೇಶಕ್ಕೆ ಬದ್ಧ ಅಂತ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಡಿಕೆ ಶಿವಕುಮಾರ್ ಅವರನ್ನ ಶಾಸಕಾಂಗ ಪಕ್ಷದ ನಾಯಕನನ್ನಾಗಿ ನೇಮಕ ಮಾಡಿ ಹೈಕಮಾಂಡ್ ಗೆ ಅಚ್ಚರಿ ಮೂಡಿಸಿದ್ರು. ಸಿದ್ದರಾಮಯ್ಯನ ಈ ನಡೆ ದೇಶದ ರಾಜಕೀಯದಲ್ಲಿ ಒಂದು ಚರಿತ್ರೆ ಸೃಷ್ಟಿ ಮಾಡಿದೆ. ಮಧ್ಯಪ್ರದೇಶ , ರಾಜಸ್ತಾನದಲ್ಲಿ ನಾಯಕತ್ವ ಸಮಸ್ಯೆ ಬಗೆಹರಿಸುವಲ್ಲಿ ವಿಫಲವಾಗಿ ಹೈಕಮಾಂಡ್ ವೀಕ್ ಅಂತ ಹೇಳ್ತಿದ್ದವರಿಗೆ ಸಿದ್ದರಾಮಯ್ಯ ನಡೆ ಹೈಕಮಾಂಡ್ ಗೌರವ ಹೆಚ್ಚಿಸುವಂತೆ ಮಾಡಿದೆ. ಸಿದ್ದರಾಮಯ್ಯ ಅವರ ಈ ನಡೆ ಮುಂದೆ ಹಲವು ರಾಜ್ಯಗಳ ಕಾಂಗ್ರೆಸ್ ಪವರ್ ಷೇರಿಂಗ್ ವಿಚಾರದಲ್ಲಿ ಸಿದ್ದರಾಮಯ್ಯ ಫಾರ್ಮಾಲಾ ಅಂತ ಹೈಕಮಾಂಡ್ ಹೇಳಿದ್ರು ಅಚ್ಚರಿ ಇಲ್ಲ.
