ಜನವರಿ 15ರೊಳಗೆ ಡಿ.ಕೆ ಶಿವಕುಮಾರ್ ಸಿಎಂ ಆಗ್ತಾರೆ: ಖ್ಯಾತ ಜ್ಯೋತಿಷಿ ಸ್ಫೋಟಕ ಭವಿಷ್ಯ

Untitled design 2025 12 22T211042.862

ಬೆಂಗಳೂರು, ಡಿಸೆಂಬರ್ 22: ರಾಜ್ಯ ರಾಜಕೀಯದಲ್ಲಿ ಮತ್ತೆ ಮುಖ್ಯಮಂತ್ರಿ ಕುರ್ಚಿ ಕುರಿತು ಚರ್ಚೆ ಭುಗಿಲೆದ್ದಿದೆ. ಆದರೆ ಈ ನಡುವೆ ಬಾಗಲಕೋಟೆಯ ಖ್ಯಾತ ಜ್ಯೋತಿಷಿ ಉಲ್ಲಾಸ್ ಜೋಶಿ ಅವರು ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಬಬಲೇಶ್ವರ ಜ್ಯೋತಿಷಿ ಮನೆತನಕ್ಕೆ ಸೇರಿದ ಉಲ್ಲಾಸ್ ಜೋಶಿ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜನವರಿ 15ರ ಒಳಗಾಗಿ ಮುಖ್ಯಮಂತ್ರಿಗಳಾಗುತ್ತಾರೆ ಎಂದು ಘೋಷಿಸಿದ್ದಾರೆ. ಇದಲ್ಲದೆ, ಸಚಿವ ಸತೀಶ್ ಜಾರಕಿಹೊಳಿ ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷರಾಗಿ ನೇಮಕಗೊಳ್ಳಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ನಡುವೆ ಬ್ರೇಕ್‌ಫಾಸ್ಟ್ ಮೀಟಿಂಗ್ ನಡೆದ ಬಳಿಕ ಸಿಎಂ ಬದಲಾವಣೆ ಚರ್ಚೆಗೆ ತಾತ್ಕಾಲಿಕ ಬ್ರೇಕ್ ಬಿದ್ದಿತ್ತು. ಆದರೆ, ಈಗ ಜ್ಯೋತಿಷಿ ಉಲ್ಲಾಸ್ ಜೋಶಿ ಅವರ ಭವಿಷ್ಯ ರಾಜಕೀಯ ವಲಯದಲ್ಲಿ ಹೊಸ ಕುತೂಹಲ ಮೂಡಿಸಿದೆ.

ಉಲ್ಲಾಸ್ ಜೋಶಿ ಅವರು, “ಆ ರಾಘವೇಂದ್ರ ಸ್ವಾಮಿಗಳೇ ನನ್ನ ನಾಲಿಗೆಯಿಂದ ಇದನ್ನು ನುಡಿಸುತ್ತಾರೆ. ನಾನು ಮೊದಲು ಜಪಮಾಲೆ ಪಠಿಸಿ ಶ್ರೀ ರಾಘವೇಂದ್ರ ಸ್ವಾಮಿಗೆ ಪ್ರಶ್ನೆ ಹಾಕುತ್ತೇನೆ. ಅದಕ್ಕೆ ಸ್ವಾಮಿ ಉತ್ತರಿಸುವುದನ್ನು ನಾನು ಭವಿಷ್ಯವಾಗಿ ಹೇಳುತ್ತೇನೆ. ಇಲ್ಲಿವರೆಗೆ ನಾನು ಅನೇಕರಿಗೆ ಭವಿಷ್ಯ ಹೇಳಿದ್ದೇನೆ, ಅದು ಯಾವುದೂ ಸುಳ್ಳಾಗಿಲ್ಲ. ಯಾರಿಗೂ ನಾನು ಹೇಳಿದ್ದು ತಪ್ಪಾಗಿಲ್ಲ.” ಈ ರೀತಿ ತಮ್ಮ ಭವಿಷ್ಯ ನುಡಿಯುವ ವಿಧಾನವನ್ನು ವಿವರಿಸಿದ ಅವರು, “ಜನವರಿ 15ರ ಒಳಗಾಗಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುತ್ತಾರೆ” ಎಂದು ದೃಢವಾಗಿ ಹೇಳಿದ್ದಾರೆ.

ಕರ್ನಾಟಕ ರಾಜಕೀಯದಲ್ಲಿ ಸಿಎಂ ಸ್ಥಾನಕ್ಕೆ ಸಂಬಂಧಿಸಿದ ಚರ್ಚೆಗಳು ಹೊಸದಲ್ಲ. 2023ರ ವಿಧಾನಸಭೆ ಚುನಾವಣೆಯ ನಂತರ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ತೀವ್ರ ಸ್ಪರ್ಧೆ ನಡೆದಿತ್ತು. ಪಕ್ಷದ ಹೈಕಮಾಂಡ್ ಮಧ್ಯಪ್ರವೇಶಿಸಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ, ಡಿ.ಕೆ. ಶಿವಕುಮಾರ್ ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿ ನೇಮಿಸಿತ್ತು. ಆದರೆ, ಅಧಿಕಾರ ಹಂಚಿಕೆ ಒಪ್ಪಂದದ ಬಗ್ಗೆ ಊಹಾಪೋಹಗಳು ಮುಂದುವರಿದವು. ಇತ್ತೀಚೆಗೆ ಬ್ರೇಕ್‌ಫಾಸ್ಟ್ ಮೀಟಿಂಗ್‌ಗಳ ಮೂಲಕ ಇಬ್ಬರೂ ಒಗ್ಗಟ್ಟು ತೋರಿಸಿದ್ದಾರೆ. ಸಿದ್ದರಾಮಯ್ಯ ಅವರು “ಪೂರ್ಣ ಅವಧಿಗೆ ಸಿಎಂ ಆಗಿ ಮುಂದುವರಿಯುತ್ತೇನೆ” ಎಂದು ಹೇಳಿದ್ದಾರೆ ಹೊರತು, ಡಿ.ಕೆ. ಶಿವಕುಮಾರ್ ಅವರು ಹೈಕಮಾಂಡ್ ಕರೆದಾಗ ದೆಹಲಿಗೆ ಹೋಗುತ್ತೇನೆ ಎಂದು ತಿಳಿಸಿದ್ದಾರೆ.

 

Exit mobile version