ಪವರ್ ಶೇರಿಂಗ್ ಫೈಟ್ ನಡುವೆ ಸಿಎಂ ಸಿದ್ದರಾಮಯ್ಯ ಐತಿಹಾಸಿಕ ಬಜೆಟ್ ಮಂಡಿಸಲು ಮುಂದಾಗಿದ್ದಾರೆ. ಈಗಾಗಲೇ 16 ಬಾರಿ ಬಜೆಟ್ ಮಂಡಿಸಿರೋ ಸಿಎಂ ಸಿದ್ದರಾಮಯ್ಯ, 17 ನೇ ಐತಿಹಾಸಿಕ ಬಜೆಟ್ ಮಂಡನೆಯ ಮೂಲಕ ದಾಖಲೆ ಬರೆಯಲು ಸಿದ್ದರಾಗಿದ್ದಾರೆ. ಸಾಲು ಸಾಲು ಸವಾಲುಗಳನ್ನ ಎದುರಿಸುತ್ತಿರೋ ಸಿಎಂ, ಹಣಕಾಸಿನ ಕೊರತೆಯ ನಡುವೆಯೂ 5 ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡಿಸಲಿದ್ದಾರೆ ಹಾಗಾದ್ರೆ ಬಜೆಟ್ ನಲ್ಲಿ ಯಾವುದಕ್ಕೆಲ್ಲ ಆದ್ಯೆತೆ ನೀಡಲಾಗಿದೆ? ಬಜೆಟ್ ನ ನಿರೀಕ್ಷೆಗಳೇನು? ಬಜೆಟ್ ಗೆ ಸಿಎಂ ಮುಂದಿರೋ ಸವಾಲುಗಳೇನು ಅನ್ನೋ ಕುರಿತು ಒಂದು ರಿಪೋರ್ಟ್ ಇಲ್ಲಿದೆ…
- ಐತಿಹಾಸಿಕ ಬಜೆಟ್ ಮಂಡಿಸಲು ಸಿಎಂ ಸಿದ್ದರಾಮಯ್ಯ ತಯಾರಿ
- ಸಿಎಂ ಸಿದ್ದರಾಮಯ್ಯ ಮುಂದಿರೋ ಸವಾಲುಗಳೇನು?
- ಹಣಕಾಸಿನ ಕೊರತೆಯ ನಡುವೆ ಸಿಎಂ ದಾಖಲೆ ಬಜೆಟ್
ಕಳೆದೊಂದು ತಿಂಗಳಿನಿಂದ ಸಾಲು ಸಾಲು ಸಭೆ ನಡೆಸುವ ಮೂಲಕ ಸಿಎಂ ಸಿದ್ದರಾಮಯ್ಯ ಎಲ್ಲ ಇಲಾಖೆಗಳ ಮಾಹಿತಿ ಪಡೆದುಕೊಂಡಿದ್ದಾರೆ. ಆದರೆ, ಈ ಬಾರಿಯ ಬಜೆಟ್ ಮಂಡನೆ ಸಿಎಂ ಪಾಲಿಗೆ ಅಷ್ಟು ಸುಲಭವಾಗಿಲ್ಲ. ಯಾಕೆಂದ್ರೆ ಗ್ಯಾರಂಟಿ ಯೋಜನೆಗಳ ನಿರ್ವಹಣೆ ಮತ್ತು ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಹೊಂದಿಸುವುದು ಸಿಎಂಗೆ ಕಗ್ಗಂಟಾಗಿ ಪರಿಣಮಿಸಿದ್ದು, ಬಜೆಟ್ ಮಂಡನೆಗೂ ಮುನ್ನವೇ ಸರ್ಕಾರದ ಬೊಕ್ಕಸಕ್ಕೆ ಸಂಪನ್ಮೂಲ ಕೊರತೆಯ ಬಿಸಿ ತಟ್ಟಿದೆ. ದಾಖಲೆಯ ಗಾತ್ರದ ಬಜೆಟ್ ಮಂಡಿಸಲು ಮುಂದಾಗಿರುವ ಸಿದ್ದರಾಮಯ್ಯ ಅವರಿಗೆ ಪ್ರಮುಖ ಇಲಾಖೆಗಳಿಂದ ನಿರೀಕ್ಷಿತ ಆದಾಯ ಹರಿದುಬಂದಿಲ್ಲ. ಇದು ಆರ್ಥಿಕ ಇಲಾಖೆಯ ಚಿಂತೆಗೆ ಕಾರಣವಾಗಿದ್ದು, ಸಿಎಂ ಸಿದ್ದರಾಮಯ್ಯ ಕಳೆದ ಬಾರಿ ಮಂಡಿಸಿದ್ದ 4.09 ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡನೆ ಮಾಡಿದ್ದರು. ಈ ಬಾರಿ ಐದು ಲಕ್ಷ ಕೋಟಿ ಗಾತ್ರದ ಬಜೆಟ್ ಮಾಡಲು ಸಿಎಂ ಸಿದ್ದರಾಮಯ್ಯ ಕಸರತ್ತು ನಡೆಸಿದ್ದಾರೆ..
ರಾಜ್ಯ ಸರ್ಕಾರ ತೆರಿಗೆ ಸಂಗ್ರಹ ಕಳೆದ ವರ್ಷಕ್ಕಿಂತ ಗಣೀನಿಯವಾಗಿ ಕುಸಿದಿದೆ. ಹೀಗಾಗಿ ಸಿಎಂ ಸಿದ್ದರಾಮುಯ್ಯರಿಗೆ ಸಂಪನ್ಮೂಲ ಕ್ರೂಡೀಕರಣವೇ ದೊಡ್ಡ ಸಮಸ್ಯೆಯಾಗಿದೆ. ಜೊತೆಗೆ ಸಂಪನ್ಮೂಲದ ತೀವ್ರ ಕೊರತೆಯಿಂದಾಗಿ, ಪಂಚ ಗ್ಯಾರಂಟಿ ಯೋಜನೆಗಳ ನಿಯಮಗಳನ್ನು ಬಿಗಿಗೊಳಿಸಲು ಅಥವಾ ಕೆಲವೊಂದಕ್ಕೆ ಕತ್ತರಿ ಹಾಕಲು ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ. ಆರ್ಥಿಕ ಇಲಾಖೆಯ ಅಧಿಕಾರಿಗಳೊಂದಿಗೆ ಸಿಎಂ ನಡೆಸಿದ ಸಾಲು ಸಾಲು ಸಭೆಗಳಲ್ಲಿ ಈ ಬಗ್ಗೆ ಪ್ರಮುಖ ಚರ್ಚೆಗಳು ನಡೆಸಲಾಗಿದ್ದು, ಸರ್ಕಾರಿ ನೌಕರರು, ಆದಾಯ ತೆರಿಗೆ ಪಾವತಿದಾರರು ಮತ್ತು ನಿಗದಿತ ಮಿತಿಗಿಂತ ಹೆಚ್ಚು ಜಮೀನು ಹೊಂದಿರುವವರ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಿ, ಅರ್ಹರನ್ನು ಗ್ಯಾರಂಟಿಗಳಿಂದ ಹೊರಗಿಡುವ ಪ್ಲಾನ್ ಮಾಡಲಾಗಿದೆ. ಜೊತೆಗೆ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಇನ್ಮುಂದೆ ಜೀವಂತ ಪ್ರಮಾಣ ಪತ್ರ ಕಡ್ಡಾಯಗೊಳಿಸುವ ಸಾಧ್ಯತೆಯಿದೆ.
ರಾಜ್ಯದ ಆದಾಯದ ಕೊರತೆಯನ್ನು ನೀಗಿಸಲು ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಂದ ಹಲವು ಸಲಹೆಗಳನ್ನು ಪಡೆದಿದ್ದಾರೆ. ಅಲ್ಲದೇ ಹಲವು ತೆರಿಗೆಗಳನ್ನ ಹೆಚ್ಚಳ ಮಾಡೋದಕ್ಕೆ ಸರ್ಕಾರ ತಯಾರಿ ನಡೆಸುತ್ತಿದ್ದಾರೆ. ಇತ್ತ ಐತಿಹಾಸಿಕ ಬಜೆಟ್ ಇದಾಗಿದೆ.
ದುರ್ಗೇಶ್ ನಾಯಕ್, ಪೊಲಿಟಿಕಲ್ ಬ್ಯೂರೋ ಗ್ಯಾರಂಟಿ ನ್ಯೂಸ್.. ಬೆಂಗಳೂರು
