2026-27ನೇ ಸಾಲಿನ ಕರ್ನಾಟಕ ರಾಜ್ಯ ಬಜೆಟ್ ಮಂಡನೆಗೆ ಕ್ಷಣಗಣನೆ ಶುರುವಾಗಿದೆ. ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್ 6ರಂದು ವಿಧಾನಸೌಧದಲ್ಲಿ ಮಂಡಿಸಲಿರುವ ಈ ಬಜೆಟ್ ಮೇಲೆ ರಾಜ್ಯದ ಜನತೆ ಬೆಟ್ಟದಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಕೇವಲ ಗ್ಯಾರಂಟಿ ಯೋಜನೆಗಳಿಗಷ್ಟೇ ಸೀಮಿತವಾಗದೆ ಶಿಕ್ಷಣ, ಕೃಷಿ, ಕೈಗಾರಿಕೆ, ಸಾರಿಗೆ, ಆರೋಗ್ಯ ಸೇರಿದಂತೆ ಪ್ರಮುಖ ವಲಯಗಳಿಗೆ ಬಂಪರ್ ಕೊಡುಗೆಗಳು ಸಿಗುವ ನಿರೀಕ್ಷೆಯಿದೆ. ವಿವಿಧ ಕ್ಷೇತ್ರಗಳು ಮತ್ತು ಸಮುದಾಯಗಳು ಈ ಬಾರಿಯ ಬಜೆಟ್ನಿಂದ ಏನೆಲ್ಲಾ ನಿರೀಕ್ಷಿಸುತ್ತಿವೆ ಎಂಬುದರ ಸಂಕ್ಷಿಪ್ತ ವಿವರ ಇಲ್ಲಿದೆ.
ಶಿಕ್ಷಣ ಕ್ಷೇತ್ರದ ನಿರೀಕ್ಷೆಗಳು :
- ಸರ್ಕಾರಿ ಶಾಲೆಗಳಲ್ಲಿ ಖಾಲಿಯಾಗಿರುವ ಸುಮಾರು 60,000 ಶಿಕ್ಷಕರ ಹುದ್ದೆಗಳ ಭರ್ತಿಗೆ ಗ್ರೀನ್ ಸಿಗ್ನಲ್.
- ಹಳೆಯ ಪಿಂಚಣಿ ಯೋಜನೆ (Old Pension Scheme – OPS) ಮರುಜಾರಿಗೆ ಒತ್ತಾಯ.
- ಖಾಸಗಿ ಶಾಲೆಗಳಲ್ಲಿ RTE ಕಾಯ್ದೆಯಡಿ ಬಡ ಮಕ್ಕಳಿಗೆ ಶೇ.25 ಸೀಟು ಮೀಸಲಾತಿ ಪರಿಣಾಮಕಾರಿಯಾಗಿ ಜಾರಿಗೊಳಿಸುವುದು.
- ಅತಿಥಿ ಶಿಕ್ಷಕರು, ಉಪನ್ಯಾಸಕರು ಮತ್ತು ಬಿಸಿಯೂಟ ಸಿಬ್ಬಂದಿಗೆ ಗೌರವಧನ ಹೆಚ್ಚಳ.
ಕೃಷಿ ಮತ್ತು ರೈತ ಕಲ್ಯಾಣದ ಡಿಮ್ಯಾಂಡ್ :
- ಪಂಜಾಬ್ ಮಾದರಿಯಲ್ಲಿ ರೈತರ ಬೆಳೆ ಸಾಗಣೆಗೆ ಟೋಲ್ ಮುಕ್ತಗೊಳಿಸುವುದು.
- ಕಬ್ಬು ಕಟಾವು ಮತ್ತು ಸಾಗಣೆ ವೆಚ್ಚವನ್ನು ಕಾರ್ಖಾನೆಗಳೇ ಭರಿಸುವಂತೆ ಆಗ್ರಹ.
- ಎಪಿಎಂಸಿ ಕಾಯ್ದೆ ಮತ್ತು ಭೂ ಸುಧಾರಣೆ ಕಾಯ್ದೆ ರದ್ದುಗೊಳಿಸುವ ಬೇಡಿಕೆ.
- ನಕಲಿ ಗೊಬ್ಬರ-ಕೀಟನಾಶಕ ಮಾರಾಟಕ್ಕೆ ಕಠಿಣ ಕ್ರಮ, ಬೆಳೆ ವಿಮೆ, ಬೆಂಬಲ ಬೆಲೆ, ಹನಿ ನೀರಾವರಿ, ವನ್ಯಜೀವಿ ದಾಳಿ ಪರಿಹಾರ ಹೆಚ್ಚಳ.
ಹಿಂದುಳಿದ ವರ್ಗಗಳ ಕಲ್ಯಾಣ :
- ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಕನಿಷ್ಠ 10,000 ಕೋಟಿ ಅನುದಾನ ಮೀಸಲು.
- ಮೀಸಲಾತಿ ಪ್ರಮಾಣವನ್ನು ಶೇ.50ಕ್ಕೆ ಹೆಚ್ಚಿಸುವುದು.
- ಪ್ರವರ್ಗ-1 ಮತ್ತು 2Aಗೆ ಪ್ರತ್ಯೇಕ ಮೀಸಲಾತಿ ಭರವಸೆ.
- ದೇವರಾಜ ಅರಸು ನಿಗಮದ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ಪುನಃ ಆರಂಭ.
ಕೈಗಾರಿಕಾ ವಲಯದ ನಿರೀಕ್ಷೆ :
- ಕೈಗಾರಿಕೆಗಳನ್ನು ಬೆಂಗಳೂರು ಹೊರವಲಯಕ್ಕೂ ವಿಸ್ತರಿಸುವ ಉತ್ತೇಜಕ ಯೋಜನೆಗಳು.
- ಎಫ್ಕೆಸಿಸಿಐ ಶಿಫಾರಸುಗಳ ಅನುಷ್ಠಾನ, ಕೈಗಾರಿಕಾ ಟೌನ್ಶಿಪ್ಗಳ ಸ್ಥಾಪನೆ.
- ಪ್ರತ್ಯೇಕ MSME ನೀತಿ, ಸಾಲದ ಹರಿವು ಹೆಚ್ಚಳ, ಹಸಿರು ಇಂಧನ, ಕೌಶಲ್ಯಾಭಿವೃದ್ಧಿ ಮತ್ತು ಪ್ರವಾಸೋದ್ಯಮಕ್ಕೆ ಬೂಸ್ಟ್.
ಸಾರಿಗೆ ವಲಯದ ಬೇಡಿಕೆಗಳು :
- ಕೆಎಸ್ಆರ್ಟಿಸಿ ಸೇರಿದಂತೆ ಸಾರಿಗೆ ನೌಕರರ 38 ತಿಂಗಳ ಬಾಕಿ ವೇತನ ಪಾವತಿ ಮತ್ತು ವೇತನ ಪರಿಷ್ಕರಣೆ.
- ಅಸಂಘಟಿತ ಚಾಲಕರಿಗಾಗಿ ‘ಅಸಂಘಟಿತ ಚಾಲಕರ ಅಭಿವೃದ್ಧಿ ನಿಗಮ’ ಸ್ಥಾಪನೆ.
- ಹೆದ್ದಾರಿಗಳಲ್ಲಿ ಚಾಲಕರ ತಂಗುದಾಣ, ಸಿಸಿಟಿವಿ, ಪೊಲೀಸ್ ಪೆಟ್ರೋಲಿಂಗ್ ಮತ್ತು ಎಲೆಕ್ಟ್ರಿಕ್ ಆಟೋ/ಟ್ಯಾಕ್ಸಿ ಖರೀದಿಗೆ ಸಹಾಯಧನ.
ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರ :
- ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆ ಸಾಮರ್ಥ್ಯ ಹೆಚ್ಚಳ, ಆಧುನಿಕ ಉಪಕರಣಗಳ ನವೀಕರಣ.
- ಹೊಸ ಐಸಿಯು, ಡಯಾಲಿಸಿಸ್, ಕ್ಯಾನ್ಸರ್ ಚಿಕಿತ್ಸಾ ಘಟಕಗಳ ಸ್ಥಾಪನೆ.
- ವೈದ್ಯರು-ಸಿಬ್ಬಂದಿ ನೇಮಕಾತಿ, ಗರ್ಭಿಣಿ-ನವಜಾತ ಶಿಶು ಮರಣ ಪ್ರಮಾಣ ತಗ್ಗಿಸುವ ಯೋಜನೆ.
- ಆಯುಷ್ಮಾನ್ ಯೋಜನೆ ವಿಸ್ತರಣೆ, ಹೊಸ ಮೆಡಿಕಲ್ ಕಾಲೇಜುಗಳು, ಆರೋಗ್ಯ ಡೇಟಾ ಡಿಜಿಟಲೀಕರಣ.
ಒಟ್ಟಾರೆಯಾಗಿ, ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ತತ್ವದಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಲಿರುವ ಈ ಬಜೆಟ್ ಜನಸಾಮಾನ್ಯರ ನಿರೀಕ್ಷೆಗಳನ್ನು ಎಷ್ಟರಮಟ್ಟಿಗೆ ಈಡೇರಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.
