ಇನ್ಮುಂದೆ ಸಾಮಾಜಿಕ ಬಹಿಷ್ಕಾರ ಹಾಕಿದ್ರೆ 3 ವರ್ಷ ಜೈಲು..!: ಮಸೂದೆ ಮಂಡನೆ

Untitled design 2025 12 11T191927.811

ಬೆಳಗಾವಿ: ಕರ್ನಾಟಕ ರಾಜ್ಯದಲ್ಲಿ ಇನ್ನೂ ಕೆಲವು ಕಡೆಗಳಲ್ಲಿ ಬೇರೂರಿರುವ ಅನಿಷ್ಟ ಪದ್ಧತಿಯಾದ ಸಾಮಾಜಿಕ ಬಹಿಷ್ಕಾರವನ್ನು ಸಂಪೂರ್ಣವಾಗಿ ನಿರ್ಮೂಲನಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಡಿಸೆಂಬರ್ 11ರಂದು ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರು ‘ಕರ್ನಾಟಕ ಸಾಮಾಜಿಕ ಬಹಿಷ್ಕಾರ (ತಡೆ, ನಿಷೇಧ ಮತ್ತು ಪರಿಹಾರ) ಮಸೂದೆ-2025’ ಅನ್ನು ವಿಧಾನಸಭೆಯಲ್ಲಿ ಮಂಡಿಸಿದ್ದಾರೆ. ಈ ಮಸೂದೆಯು ಜಾತಿ ಅಥವಾ ಸಮುದಾಯ ಪಂಚಾಯತ್‌ಗಳು ಹೇರುವ ಬಹಿಷ್ಕಾರದಂತಹ ಅಸಾಂವಿಧಾನಿಕ ಪದ್ಧತಿಗಳನ್ನು ಕ್ರಿಮಿನಲ್ ಅಪರಾಧವನ್ನಾಗಿ ಪರಿಗಣಿಸಿ ಕಠಿಣ ಶಿಕ್ಷೆ ವಿಧಿಸುವುದನ್ನು ಒಳಗೊಂಡಿದೆ.

ಸಾಮಾಜಿಕ ಬಹಿಷ್ಕಾರ ಎಂದರೇನು?

ಸಮಾಜದಲ್ಲಿ ವ್ಯಕ್ತಿ ಅಥವಾ ಕುಟುಂಬವನ್ನು ಸಂಪೂರ್ಣವಾಗಿ ಒಂಟಿಯಾಗಿಸುವ, ಅವರ ದೈನಂದಿನ ಜೀವನಕ್ಕೆ ಅಡ್ಡಿಯಾಗುವ ಕ್ರೂರ ಪದ್ಧತಿ. ಅಂತರ್ಜಾತಿ ವಿವಾಹ, ಸಾಂಪ್ರದಾಯಿಕ ನಿಯಮಗಳ ಉಲ್ಲಂಘನೆ ಅಥವಾ ಇತರ ಕಾರಣಗಳಿಂದ ಜಾತಿ ಪಂಚಾಯತ್‌ಗಳು ಈ ಬಹಿಷ್ಕಾರ ಹೇರಿ ವ್ಯಕ್ತಿಗಳ ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತವೆ. ಇದರಿಂದ ಸಂತ್ರಸ್ತರು ಸಾಮಾಜಿಕ, ಆರ್ಥಿಕ ಮತ್ತು ಧಾರ್ಮಿಕ ಚಟುವಟಿಕೆಗಳಿಂದ ವಂಚಿತರಾಗುತ್ತಾರೆ. ರಾಜ್ಯದಲ್ಲಿ ಇಂತಹ ಪ್ರಕರಣಗಳು ಇನ್ನೂ ವರದಿಯಾಗುತ್ತಿರುವುದರಿಂದ ಸರ್ಕಾರ ಈ ಮಸೂದೆಯನ್ನು ತಂದಿದೆ. ಮಹಾರಾಷ್ಟ್ರದಂತಹ ರಾಜ್ಯಗಳಲ್ಲಿ ಇಂತಹ ಕಾನೂನು ಯಶಸ್ವಿಯಾಗಿರುವುದು ಕರ್ನಾಟಕಕ್ಕೆ ಸ್ಫೂರ್ತಿ ನೀಡಿದೆ.

ಮಸೂದೆಯ ಮುಖ್ಯ ಅಂಶಗಳು

ಈ ಮಸೂದೆಯಲ್ಲಿ ಸಾಮಾಜಿಕ ಬಹಿಷ್ಕಾರದ 20 ವಿಧಗಳನ್ನು ಸ್ಪಷ್ಟವಾಗಿ ವಿವರಿಸಲಾಗಿದೆ. ಯಾವುದೇ ವ್ಯಕ್ತಿ, ಕುಟುಂಬ ಅಥವಾ ಗುಂಪನ್ನು ಸಾಮಾಜಿಕವಾಗಿ ಬಹಿಷ್ಕರಿಸಿದರೆ ಅದು ಅಪರಾಧವಾಗಲಿದೆ. ಬಹಿಷ್ಕಾರ ಹೇರಿದವರು, ಸಭೆ ನಡೆಸಿ ತೀರ್ಮಾನಿಸಿದವರು, ಸಹಾಯ ಮಾಡಿದವರು ಅಥವಾ ಪ್ರಚೋದನೆ ನೀಡಿದವರು ಎಲ್ಲರೂ ಶಿಕ್ಷೆಗೆ ಒಳಗಾಗುತ್ತಾರೆ. ಶಿಕ್ಷೆಯಾಗಿ ಕನಿಷ್ಠ 3 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷ ರೂಪಾಯಿ ದಂಡ ವಿಧಿಸಲಾಗುವುದು.

ಬಹಿಷ್ಕಾರದ ವಿಧಗಳು

ಸಂತ್ರಸ್ತರಿಗೆ ಪರಿಹಾರ

ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾದವರು ನೇರವಾಗಿ ಪೊಲೀಸ್ ಅಥವಾ ಪ್ರಥಮ ದರ್ಜೆ ನ್ಯಾಯಾಧೀಶರ ಬಳಿ ದೂರು ಸಲ್ಲಿಸಬಹುದು. ನ್ಯಾಯಾಧೀಶರು ತನಿಖೆಗೆ ಆದೇಶ ನೀಡಿ, ಸಂತ್ರಸ್ತರಿಗೆ ಸಹಾಯ ಒದಗಿಸಬಹುದು. ದಂಡದ ಹಣವನ್ನು ಸಂತ್ರಸ್ತರಿಗೆ ಪರಿಹಾರವಾಗಿ ನೀಡಬಹುದು. ಸರ್ಕಾರ ಸಾಮಾಜಿಕ ಬಹಿಷ್ಕಾರ ತಡೆ ಅಧಿಕಾರಿಯನ್ನು (Social Boycott Prohibition Officer) ನೇಮಿಸಲಿದೆ. ಜಿಲ್ಲಾಧಿಕಾರಿಗಳಿಗೂ ಬಹಿಷ್ಕಾರ ಸಭೆಗಳನ್ನು ತಡೆಯುವ ಅಧಿಕಾರ ನೀಡಲಾಗಿದೆ.

Exit mobile version