ಇನ್​ಸ್ಟಾದಲ್ಲಿ ಪರಿಚಯ..ಲವ್ ಮಾಡುವಂತೆ ಮಹಿಳೆಗೆ ಕಾಟ..ಕುತ್ತಿಗೆ ಕೊಯ್ದು ಹತ್ಯೆಗೆ ಯತ್ನ

Untitled design (36)

ಬೆಂಗಳೂರು: ಇನ್ಸ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿದ್ದ ವಿವಾಹಿತ ಮಹಿಳೆಯೊಬ್ಬಳನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ ಯುವಕನಿಗೆ ಬುದ್ದಿ ಹೇಳಲು ಕರೆಸಿ ಕೊಲೆಗೆ ಯತ್ನಿಸಿದ ಘಟಮೆ ಬೆಂಗಳೂರಿನಲ್ಲಿ ನಡೆದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಈ ಘಟನೆಯಲ್ಲಿ ಚಾಕುವಿನಿಂದ ಇರಿದು ಗಾಯಗೊಂಡ ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

 ತಮಿಳುನಾಡಿನ ತಿರಪ್ಪತ್ತೂರು ಮೂಲದ ಸೆಲ್ವ ಕಾರ್ತಿಕ್‌ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಓರ್ವ ಮದುವೆಯಾದ ಮಹಿಳೆ ಜೊತೆಗೆ ಪರಿಚಯವಾಗಿತ್ತು. ದಿನಗಳು ಕಳೆಯುತ್ತಿದ್ದಂತೆ, ಕಾರ್ತಿಕ್ ಆಕೆಗೆ ಸಂದೇಶಗಳನ್ನು ಕಳುಹಿಸಿ, ಪ್ರೀತಿಸುವಂತೆ ಒತ್ತಾಯಿಸುತ್ತಿದ್ದನಂತೆ. ಆದರೆ, ಆಕೆ ಈಗಾಗಲೇ ವಿವಾಹಿತಳಾಗಿದ್ದಳು. ಕಾರ್ತಿಕ್‌ನ ಸಂದೇಶಗಳಿಂದ ಕಿರಿಕಿರಿಗೊಳಗಾದ ಆಕೆ, ಈ ವಿಷಯವನ್ನು ತನ್ನ ಗಂಡನಿಗೆ ತಿಳಿಸದೆ, ತಂದೆಗೆ ಮಾತ್ರ ತಿಳಿಸಿದ್ದಳು.

ADVERTISEMENT
ADVERTISEMENT

ಮಗಳಿಂದ ಈ ವಿಷಯ ತಿಳಿದ ತಕ್ಷಣ, ಆಕೆಯ ತಂದೆ ಕಾರ್ತಿಕ್‌ನನ್ನು ಮಾತುಕತೆಗೆಂದು ಬೆಂಗಳೂರಿನ ಹೆಚ್‌ಎಎಲ್‌ಗೆ ಕರೆಸಿದ್ದರು. ಆದರೆ, ಮಾತುಕತೆಯ ಸಂದರ್ಭದಲ್ಲಿ ಕಾರ್ತಿಕ್, ಮಹಿಳೆಯ ಜೊತೆಗೆ ಮಾತನಾಡಬೇಕೆಂದು ಒತ್ತಾಯಿಸಿದ್ದಾನೆ. ಈ ವೇಳೆ, ಆಕೆ ತಂದೆಯ ಸಂಬಂಧಿಯೊಬ್ಬನಾದ ಪ್ರಶಾಂತ್‌ನನ್ನು ಬೈಕ್‌ನಲ್ಲಿ ಕರೆದುಕೊಂಡು ಹೊರಟಿದ್ದಾನೆ.

ಕಾರ್ತಿಕ್‌ನ ಒತ್ತಾಯದಂತೆ, ಆಕೆಯ ಸಂಬಂಧಿ ಪ್ರಶಾಂತ್‌ನನ್ನು ಬೈಕ್‌ನಲ್ಲಿ ಕರೆದುಕೊಂಡು ಮನೆಯ ಕಡೆಗೆ ಹೊರಟಿದ್ದಾನೆ. ಆದರೆ, ದಾರಿಯಲ್ಲಿ ಕಾರ್ತಿಕ್‌ ಪ್ರಶಾಂತ್‌ನ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ. ಚಲಿಸುತ್ತಿದ್ದ ಬೈಕ್‌ನಲ್ಲಿಯೇ ಈ ದುರ್ಘಟನೆ ನಡೆದಿದ್ದು, ಕಾರ್ತಿಕ್ ಪ್ರಶಾಂತ್‌ನ ಕುತ್ತಿಗೆಯನ್ನು ಕೊಯ್ದು ಹತ್ಯೆಗೆ ಯತ್ನಿಸಿದ್ದಾನೆ. ಗಾಯಗೊಂಡ ಪ್ರಶಾಂತ್‌ನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಘಟನೆಯ ಬಗ್ಗೆ ಸ್ಥಳೀಯರು ತಕ್ಷಣವೇ ಹೆಚ್‌ಎಎಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ತಕ್ಷಣ , ಆರೋಪಿ ಸೆಲ್ವ ಕಾರ್ತಿಕ್‌ನನ್ನು ಬಂಧಿಸಿದ್ದಾರೆ. ಆತನ ವಿರುದ್ಧ ಐಪಿಸಿ ಸೆಕ್ಷನ್ 307 (ಕೊಲೆ ಯತ್ನ) ಸೇರಿದಂತೆ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.

ಹೆಚ್‌ಎಎಲ್ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಗಾಯಾಳು ಪ್ರಶಾಂತ್‌ನ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದರೂ, ಈ ಘಟನೆ ಸ್ಥಳೀಯರಲ್ಲಿ ಆತಂಕವನ್ನುಂಟು ಮಾಡಿದೆ.

Exit mobile version