ಯೂಟ್ಯೂಬರ್‌ ಮುಕಳೆಪ್ಪ ವಿರುದ್ಧ ಎಫ್‌ಐಆರ್‌ ದಾಖಲು

Untitled design (5)

ಹುಬ್ಬಳ್ಳಿ; ಯೂಟ್ಯೂಬ್‌ ಸ್ಟಾರ್ ಮುಕಳೆಪ್ಪ ಅಲಿಯಾಸ್‌ ಖ್ವಾಜಾ ವಿರುದ್ಧ ಜೀವ ಬೆದರಿಕೆ ಹಾಗೂ ಅಪಹರಣದ ಆರೋಪದ ಮೇಲೆ ಎಫ್‌ಐಆರ್ ದಾಖಲಾಗಿದೆ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದೂ ಯುವತಿಯನ್ನ ಪ್ರೀತಿಸಿ ಕ್ವಾಜಾ ಶಿರಹಟ್ಟಿ ವಿವಾಹವಾಗಿದ್ದ. ಆದರೆ ಯುವತಿ ಹಿಂದೂಪರ ಸಂಘಟನೆಗಳ ಜೊತೆ ಠಾಣೆಗೆ ಆಗಮಿಸಿ, ಪೋಷಕರೊಟ್ಟಿಗೆ ಎಫ್‌ಐಆರ್ ದಾಖಲಿಸಿದ್ದಾರೆ. ಯುವತಿಯ ಪೋಷಕರು ಕೂಡ ತಮ್ಮ ಮಗಳನ್ನ ಅಪಹರಿಸಿ ಮದುವೆಯಾಗಿದ್ದಾನೆ ಎಂಬ ಆರೋಪ ಮಾಡಿದ್ದಾರೆ. ಮುಕಳೆಪ್ಪ ವಿರುದ್ದ ಕ್ರಮ ಕೈಗೊಂಡು ತಮ್ಮ ಮಗಳನ್ನ ನಮ್ಮೊಟ್ಟಿಗೆ ಕಳುಹಿಸಿಕೊಡಿ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ

ನಾಲ್ಕು ತಿಂಗಳ ಹಿಂದೆ ರೀಲ್ಸ್ ಮಾಡುವ ನೆಪದಲ್ಲಿ ನಮ್ಮ ಮಗಳನ್ನು ಅಪಹರಿಸಿಕೊಂಡು ಹೋಗಿದ್ದಾನೆ. ಈ ವೇಳೆ ಮದುವೆ ಸಮಾರಂಭದ ವಿಡಿಯೋ ಎಂದು ಹೇಳಿ ಮದುವೆಯಾಗಿದ್ದನು. ಆಗ ಅದು ರೀಲ್ಸ್ ಎಂದಿದ್ದ  ,ಈಗ ನಿಜವಾಗಿಯೂ ಮದುವೆಯಾಗಿದ್ದೇನೆ ಎಂದು ಮುಕಳೆಪ್ಪ ಹೇಳುತ್ತಿದ್ದಾನೆ. ಇದು ಸುಳ್ಳು ಮದುವೆ, ನಮ್ಮ ಮಗಳನ್ನು ವಾಪಸ್ ಕಳುಹಿಸಿಕೊಡಿ ಎಂದಿದ್ದಕ್ಕೆ ಫೋನ್ ಮಾಡಿ ಧಮಕಿ ಹಾಕುತ್ತಿದ್ದಾನೆ ಎಂದು ಯುವತಿ ತಂದೆ ತಾಯಿ ದೂರಿನಲ್ಲಿ ತಿಳಿಸಿದ್ದಾರೆ. ಯುವತಿ ತಂದೆ-ತಾಯಿ ಕೊಟ್ಟ ದೂರಿನ ಆಧಾರದ ಮೇಲೆ ಮುಕಳೆಪ್ಪನ ವಿರುದ್ಧ ಜೀವ ಬೆದರಿಕೆ ಮತ್ತು ಅಪಹರಣ ಕೇಸ್ ದಾಖಲಿಸಿಕೊಂಡು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Exit mobile version