ಹನಿಟ್ರ್ಯಾಪ್ ವಿಚಾರ ದುರದೃಷ್ಟಕರ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

Film (27)

ರಾಜ್ಯದ ಸಚಿವರೊಬ್ಬರಿಗೆ ಹನಿಟ್ರ್ಯಾಪ್ ಮಾಡಲು ಯತ್ನಿಸಿರುವುದು ದುರದೃಷ್ಟಕರ ಸಂಗತಿ. ಸದನದಲ್ಲಿ ರಾಜ್ಯದ ಹಿರಿಯ ಸಚಿವರು ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಪ್ರತಿಕ್ರಿಯಿಸಿದ್ದಾರೆ.

ಹನಿಟ್ರ್ಯಾಪ್ ಯತ್ನಕ್ಕೆ ಸಂಬಂಧಿಸಿದಂತೆ ಈಗಾಗಲೇ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಹಾಗೂ ಗೃಹಸಚಿವರು ಪ್ರತಿಕ್ರಿಯೆ ನೀಡಿದ್ದಾರೆ. ಗೃಹ ಸಚಿವರು ಇದನ್ನು ನೋಡಿಕೊಳ್ಳುತ್ತಾರೆ. ನಾನು ಅದರ ಕುರಿತು ಹೆಚ್ಚು ಮಾತನಾಡಲ್ಲ ಎಂದರು.

ಘರ್ಜಿಸುವ ಹುಲಿಗಳಿಗೆ ಸಿಡಿ ತೋರಿಸಿ ಹೆದರಿಸಲಾಗುತ್ತಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವರು, ಅದಕ್ಕೆ ನೀವು ಮಾಧ್ಯಮದವರು ಅವರಿಂದಲೇ ಉತ್ತರ ಪಡೆಯಬೇಕು.
ನಾನು ಅದಕ್ಕೆ ಉತ್ತರ ನೀಡುವುದು ಸಮಂಜಸವಲ್ಲ. ಅಲ್ಲದೆ ಇಂತಹ ವಿಚಾರಗಳ ಕುರಿತು ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಹನಿಟ್ರ್ಯಾಪ್‌ ಅಶ್ಲೀಲ ಎಂದು ಕಾಂಗ್ರೆಸ್‌ ನಾಯಕರಿಗೆ ಅನ್ನಿಸಲೇ ಇಲ್ಲ

ನ್ಯಾಯಕ್ಕಾಗಿ ಆಗ್ರಹಿಸಿದ ಶಾಸಕರನ್ನು ಅಮಾನತು ಮಾಡಿರುವುದು ಖಂಡನೀಯ. ಇದು ಕಾಂಗ್ರೆಸ್‌ನ ದುರುಳ ನೀತಿ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಕ್ರೋಶ ವ್ಯಕ್ತಪಡಿಸಿದರು.

ಸದನದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದನದಲ್ಲಿ ಸಚಿವ ರಾಜಣ್ಣ ಅವರು ಹನಿಟ್ರ್ಯಾಪ್‌ ಆಗಿದೆ ಎಂದಾಗ, ಕಾಂಗ್ರೆಸ್‌ನ ಇತರೆ ಸಚಿವರಿಗೆ, ಮುಖ್ಯಮಂತ್ರಿಗೆ ಅದು ಅಶ್ಲೀಲ ಎಂದು ಅನ್ನಿಸಲೇ ಇಲ್ಲ. ಹಿಂದೆ ಶಾಸಕರು ಮೊಬೈಲ್‌ ನೋಡಿದ್ದಕ್ಕೆ ಕಾಂಗ್ರೆಸ್‌ನವರು ಎದ್ದು ಕುಣಿದಿದ್ದರು. ಆದರೆ ಹನಿಟ್ರ್ಯಾಪ್‌ ಅಶ್ಲೀಲ ಎಂದು ಅನಿಸಿಲ್ಲ. ಸದನಕ್ಕೆ ಗೌರವ ಇರಲಿ ಎಂದು ನ್ಯಾಯಾಂಗ ತನಿಖೆಗೆ ಆಗ್ರಹಿಸಿದ್ದೇವೆ. ಹನಿಟ್ರ್ಯಾಪ್‌ ಆಗಿರುವುದು ತಮ್ಮ ಪಕ್ಷದ ನಾಯಕರಿಂದಲೇ ಎಂದು ಹೇಳಿದರೂ ಸರ್ಕಾರ ಸುಮ್ಮನಿದೆ ಎಂದು ದೂರಿದರು.

ಬಿಜೆಪಿ ಶಾಸಕರು ನ್ಯಾಯಕ್ಕಾಗಿ ಹೋರಾಟ ಮಾಡಿದ್ದಾರೆ. ಅವರ ಮೇಲೆ ಸ್ಪೀಕರ್‌ ಯು.ಟಿ.ಖಾದರ್‌ ಗದಾ ಪ್ರಹಾರ ಮಾಡಿರುವುದು ಯಾವ ನ್ಯಾಯ? ಯಾವ ಮುಖ ಇಟ್ಟುಕೊಂಡು ಸಚಿವರು ಸದನಕ್ಕೆ ಬಂದಿದ್ದಾರೆ? 18 ಶಾಸಕರನ್ನು ಅಮಾನತು ಮಾಡಿರುವುದು ಅನ್ಯಾಯ. ಸ್ಪೀಕರ್‌ಗೆ ನಾವು ಯಾವುದೇ ಅನ್ಯಾಯ ಮಾಡಿಲ್ಲ. ನಾವು ನ್ಯಾಯ ಕೇಳಿದ್ದೇವೆ. ಸ್ಪೀಕರ್‌ರಿಂದ ನಾವು ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಇದು ಕಾಂಗ್ರೆಸ್‌ನ ದುರುಳ ನೀತಿ. ಅವರು ಯಾವ ಮಟ್ಟಕ್ಕೆ ಬೇಕಾದರೂ ಹೋಗುತ್ತಾರೆ ಎಂದರು.

ಶಾಸಕರನ್ನು ಅಮಾನತು ಮಾಡಿರುವುದನ್ನು ಖಂಡಿಸುತ್ತೇವೆ. ಇದು ಸದನಕ್ಕೆ ಅಗೌವರ. ನ್ಯಾಯಾಂಗ ತನಿಖೆಗೆ ಆಗ್ರಹಿಸುವುದು ಗೂಂಡಾಗಿರಿ ಆಗುತ್ತದೆಯೇ? ಕಾಂಗ್ರೆಸ್‌ನ ಏಜೆಂಟರಂತೆ ಸ್ಪೀಕರ್‌ ಕೆಲಸ ಮಾಡುತ್ತಿದ್ದಾರೆ ಎಂದರು.

Exit mobile version