ರಾಜ್ಯದಲ್ಲಿ ಹೃದಯಘಾತದ ಪ್ರಕರಣ ಹೆಚ್ಚಳ..!

ಇನ್ನೆರಡು ದಿನಗಳಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಕೆ ಸಾಧ್ಯತೆ..!

Untitled design (8)

ರಾಜ್ಯದಲ್ಲಿ ಹೃದಯಘಾತದಿಂದ ಸರಣಿ ಸಾವಾಗ್ತಿದ್ದು. ಈ ಹೃದಯಘಾತಕ್ಕೆ ಕೊವಿಡ್ ಲಸಿಕೆ ಕಾರಣ ಅನ್ನೋ ಅನುಮಾನ ಹೆಚ್ಚಾಗಿತ್ತು. ಹೀಗಾಗಿ ತಾಂತ್ರಿಕ ಸಲಹಾ ಸಮಿತಿ ಈ ವಿಚಾರವಾಗಿ ವರದಿ ಸಿದ್ದಪಡಿಸಿದ್ದು. ಆರೋಗ್ಯ ಇಲಾಖೆಗೆ ವರದಿಸಲ್ಲಿಸಿದೆ ಹಾಗಿದ್ರೆ ವರದಿಯಲ್ಲಿ ಏನಿದೆ.

ರಾಜ್ಯದಲ್ಲಿ ಕೊವಿಡ್‌ ನಂತರ ಜೀವನ ಶೈಲಿ ಬದಲಾಗಿದೆ. ಈ ಬದಲಾದ ಜೀವನಶೈಲಿಯಿಂದ ಹೃದಯಘಾತ ಪ್ರಮಾಣ ಹೆಚ್ಚಳವಾಗಿದೆ.ಆದ್ರೆ ಈ ಹೃದಯಘಾತಕ್ಕೆ ಕೊವಿಡ್ ಲಸಿಕೆ ಮುಖ್ಯ ಕಾರಣ ಅನ್ನೋ ಅನುಮಾನ ಹೆಚ್ಚಾಗಿತ್ತು. ಹೀಗಾಗಿಯೇ ಸಿಎಂ ಸಿದ್ದರಾಮಯ್ಯ ಅವರು ತಾಂತ್ರಿಕ ಸಲಹಾ ಸಮಿತಿಗೆ ಈ ಕುರಿತು ವರದಿ ಸಿದ್ದಪಡಿಸಲು ಸೂಚಿಸಿದ್ದು. ಇದೀಗಾ ವರದಿ ಆರೋಗ್ಯ ಇಲಾಖೆಗೆ ಸಲ್ಲಿಕೆಯಾಗಿದ್ದು.ಫೈನಲ್ ರಿಪೋರ್ಟ್ ಸೋಮವಾರ ಸರ್ಕಾರದ ಕೈ ಸೇರಲಿದೆ.

ಜಯದೇವ ಹೃದ್ರೋಗ ಸಂಸ್ಥೆಯ ನಿರಗದೇಶಕ ಡಾ. ಕೆ.ಎಸ್. ರವೀಂದ್ರನಾಥ್ ಅವರ ನೇತೃತ್ವದ 10 ಜನರನ್ನ‌ ಒಳಗೊಂಡ ತಾಂತ್ರಿಕ ಸಲಹಾ ಸಮಿತಿಯನ್ನ ಸರ್ಕಾರ ರಚಿಸಿತ್ತು. ಈ ತಾಂತ್ರಿಕ ಸಲಹಾ ಸಮಿತಿ ಕಳೆದ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಹಲವು ವಿಚಾರಗಳ ಮೇಲೆ ಸ್ಟಡಿ ಮಾಡಿ ರಿಪೋರ್ಟ್ ಅನ್ನು ಸಿದ್ದಪಡಿಸಿದೆ.‌ ರಾಜ್ಯದಲ್ಲಿ ಒಟ್ಟು 251ಜನರ ಸ್ಯಾಂಪಲ್ ಪಡೆದು ತನಿಖೆ ಮಾಡಲಾಗಿದೆ. ಪ್ರಮುಖವಾಗಿ ಈ 251ಜನರು 45 ವರ್ಷದೊಳಗಿನವರು. ಇವರ ಆರೋಗ್ಯದ ಕುರಿತು ವರದಿಯನ್ನ ಸಿದ್ದಪಡಿಸಲಾಗಿದೆ. ಆದ್ರೆ ಈ ವರದಿಯಲ್ಲಿ ಪ್ರಮುಖ ಅಂಶ ಏನು ಅಂದ್ರೆ ಈ ರೀತಿಯ ಸರಣಿ ಹೃದಯಘಾತಕ್ಜೆ ಯಾವುದೇ ರೀತಿ ಕೊವಿಡ್ ಲಸಿಕೆ ಕಾರಣವಲ್ಲ ಎಂಬುದು.ಬದಲಾಗಿ ಈಗಿನ ಬದಲಾದ ಜೀವನ ಶೈಲಿಯೇ ಹೃದಯಘಾತಕ್ಕೆ ಕಾರಣ ಎಂದು ತಿಳಿದುಬಂದಿದೆ.

ಹೃದಯಘಾತಕ್ಕೆ ಪ್ರಮುಖವಾಗಿ ದೇಹದ ಬೊಜ್ಜು, ಡಯಾಬಿಟಿಸ್, ಫ್ಯಾಮಿಲಿ ಹಿಸ್ಟರಿ ಸೇರಿದಂತೆ ಹಲವು ವಿಚಾರಗಳು ಕಾರಣವಾಗಿದ್ದು, ಕೊವಿಡ್ ನಂತರ ಜನರಲ್ಲಿ ಹೆಚ್ಚಾಗಿ ಈ ಮೇಲಿನ ಹಲವು ವಿಚಾರಗಳು ಹೆಚ್ಚಾಗಿ ಕಾಣಿಸಿಕೊಳ್ಳುತಿದೆ.
ಹಾಗಾದ್ರೆ ಕೊವಿಡ್‌ಗಿಂತ ಮೊದಲು ಹಾಗೂ ಕೊವಿಡ್‌ ನಂತರ ಜನರ ಆರೋಗ್ಯದ ಸ್ಥಿತಿ ಹೇಗಿದೆ ಅನ್ನೋದನ್ನ ನೋಡೋದಾದ್ರೆ…!?

ತಾಂತ್ರಿಕ ಸಲಹಾ ಸಮಿತಿ‌ ವರದಿಯಲ್ಲಿ ಕೆಲವೊಂದಿಷ್ಟು ಶಿಫಾರಸ್ಸನ್ನು ಕೂಡ ಸರ್ಕಾರಕ್ಕೆ ನೀಡಿದೆ. ಹಾಗಾದ್ರೆ ಸಲಹಾ ಸಮಿತಿ ನೀಡಿದ ಶಿಫಾರಸ್ಸು ಏನು ಅನ್ನೋದನ್ನ ನೋಡೋದಾದ್ರೆ.

ಕೊವಿಡ್ ಲಸಿಕೆಯೇ ಹೃದಯ ಬಡಿತ ನಿಲ್ಲೋಕೆ ಕಾರಣ ಅನ್ನೋ ಅನುಮಾನಕ್ಕೆ ಕೊನೆಗೂ ತೆರೆ ಬಿದ್ದಿದ್ದು.ಜನರು ಇನ್ಮುಂದೆ ಕೊವಿಡ್ ಲಸಿಕೆ ಬಗ್ಗೆ ಅನುಮಾನ ಪಡದೇ ಆರಾಮಾಗಿ‌ ಇರಬಹುದು.

Exit mobile version