ರೈತರ ಸಾಲ ಮನ್ನಾ ವಿಚಾರ: ಸಿಎಂ ಡಿಕೆಶಿ ವಿರುದ್ಧ ಹೆಚ್‌ಡಿಕೆ ವಾಗ್ದಾಳಿ

Your paragraph text (83)

ಬೆಂಗಳೂರು: 2018ರಲ್ಲಿ ನಾನು ರೈತರ ಸಾಲ ಮನ್ನಾ ಮಾಡಿದಾಗ ಈ ಪಾಪಿಗಳು (ಕಾಂಗ್ರೆಸ್ ನವರು) ಬೆಂಬಲ ನೀಡಲಿಲ್ಲ. ಸಾಲ ಮನ್ನಾ ನಿಮ್ಮ ಭರವಸೆ. ಅದಕ್ಕೂ ನಮಗೂ ಸಂಬಂಧವಿಲ್ಲ ಎಂದು ಹೇಳಿದ್ದರು ಎಂಬುದಾಗಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಜೆಡಿಎಸ್ ಪಕ್ಷದ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ನಂತರ ಮಾಧ್ಯಮಗಳ ಜತೆ ಅವರು ಮಾತನಾಡಿದರು.

ಸಾರ್ವಜನಿಕರ ಹೆರಿಗೆ ಹಣವನ್ನು ಮನಸು ಇಚ್ಛೆ ಪೋಲು ಮಾಡುತ್ತಿರುವ ಇವರಿಗೆ ಸಾಲ ಮನ್ನಾ ಮಾಡಲು ಹಣವು ಇಲ್ಲ. ಅಷ್ಟೇ ಏಕೆ ಅಂತಹ ಒಳ್ಳೆ ಕೆಲಸಗಳನ್ನು ಮಾಡುವುದಕ್ಕೆ ಇವರಿಗೆ ಮನಸ್ಸು ಬರುವುದಿಲ್ಲ. ಜನರು ತೆರಿಗೆ ಕಟ್ಟಿ ಖಜಾನೆ ತುಂಬಿಸುತ್ತಿದ್ದಾರೆ ಗುರು ಲೂಟಿ ಹೊಡೆಯುತ್ತಿದ್ದಾರೆ. ಹೀಗಾಗಿ ಸಾಲ ಮನ್ನಾ ಮಾಡುವುದಕ್ಕೆ ಹಣ ಎಲ್ಲಿದೆ? ಎಂದು ಪ್ರಶ್ನಿಸಿದರು.

ನಾನು ಸಾಲಮನ್ನಾ ಮಾಡಿದಾಗ ತಮ್ಮ ಭಾಗ್ಯಗಳಿಗೆ ಮಾತ್ರ ಹಣ ಕೊಡಿ ಎಂದು ನನ್ನ ಮೇಲೆ ಒತ್ತಡ ಏರಿದರೆ ವಿನಾ ಸಾಲಮನ್ನಾ ಮಾಡುವುದಕ್ಕೆ ಕೊನೆಯ ಪಕ್ಷ ಒಬ್ಬರೂ ಬೆಂಬಲ ನೀಡಲಿಲ್ಲ ಎಂದು ಸಚಿವರು ಹೇಳಿದರು.

ನಾನು ಎಂದೂ ಕೇಂದ್ರದ ಬಳಿ ಕೈಚಾಚಲಿಲ್ಲ

ನಾನು ಎರಡು ಬಾರಿ ಸಾಲಮನ್ನಾ ಮಾಡಿದೆ ಎಂಬುದು ಎಲ್ಲರಿಗೂ ಗೊತ್ತು. ಆದರೆ ಈ ಎರಡೂ ಸಂದರ್ಭಗಳಲ್ಲಿ ನಾನು ಕೇಂದ್ರ ಸರ್ಕಾರದ ಮುಂದೆ ಸಾಲಮನ್ನಾ ಮಾಡುತ್ತೇನೆ, ಹಣ ಕೊಡಿ ಎಂದು ಅರ್ಜಿ ತೆಗೆದುಕೊಂಡು ಹೋಗಲಿಲ್ಲ. ಕೇಂದ್ರ ಸರ್ಕಾರದ ಬಳಿ ಕೈಚಾಚಲಿಲ್ಲ. ಇವರು ನೋಡಿದರೆ ₹2500 ಕೊಡ್ತೇವೆ ಎಂದು ಹೇಳಿ ಕೇಂದ್ರದ ಮುಂದೆ ಭಿಕ್ಷೆ ಬೇಡುತ್ತಿದ್ದಾರೆ. ನನ್ನ ಸರ್ಕಾರದ ಅವಧಿಯಲ್ಲಿ ಕಬ್ಬು ಬೆಳೆಗಾರರಿಗೆ ₹28,000 ಪರಿಹಾರ ನೀಡಲಾಗಿತ್ತು. ಅದೇ ಸಂದರ್ಭದಲ್ಲಿ ₹25,000 ಕೋಟಿ ಸಾಲಮನ್ನಾ ಮಾಡಿದ್ದೆ. ಮೈಕ್ರೋಫೈನಾನ್ಸ್ ಹಾವಳಿಯಿಂದ ರೈತರನ್ನು ರಕ್ಷಿಸಲು 14 ತಿಂಗಳ ಅವಧಿಯಲ್ಲೇ ಸಾಲಮನ್ನಾ ಮಾಡಿದ್ದೆ ಹಾಗೂ ಋಣಮುಕ್ತ ಕಾಯ್ದೆಗೆ ಸ್ವತಃ ರಾಷ್ಟ್ರಪತಿಗಳ ಬಳಿಗೆ ನಾನೇ ಹೋಗಿ ಸಹಿ ಹಾಕಿಸಿಕೊಂಡು ಬಂದಿದ್ದೆ. ನಾನು ಅಧಿಕಾರ ಬಿಟ್ಟ ಮೇಲೆ ಆ ಕಾಯ್ದೆ ಏನಾಯಿತು? ಎಂದು ಅವರು ಖಾರವಾಗಿ ಪ್ರಶ್ನಿಸಿದರು.

2018ರಲ್ಲಿ ಸರ್ಕಾರ ಮಾಡುವುದು ನನ್ನ ಉದ್ದೇಶ ಆಗಿರಲಿಲ್ಲ. ಸಾಲಮನ್ನಾ ಮಾಡುವ ಸಲುವಾಗಿಯೇ ನಾನು ಈ ಪಾಪಿಗಳ ಜತೆ ಸೇರಿ ಸರ್ಕಾರ ಮಾಡಬೇಕಾಯಿತು. ಆದರೆ ಸಾಲಮನ್ನಾ ಮಾಡುವುದರಲ್ಲಿ ಕಾಂಗ್ರೆಸ್ ಪಾತ್ರ ಇಲ್ಲ ಎಂದು ಸಚಿವರು ಹೇಳಿದರು.

ರೈತರು ಸಾಲ ಮಾಡಿ ಬಿತ್ತನೆ ಮಾಡಿದ್ದಾರೆ. ಎರಡೂವರೆ ಸಾವಿರದಲ್ಲಿ ಅವರು ಏನು ಮಾಡುತ್ತಾರೆ? ಹಿಂದಿನ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಕಾಫಿ, ತಿಂಡಿಗೆ ₹200 ಕೋಟಿ ಖರ್ಚು ಮಾಡುತ್ತೀರಿ, ರೈತರಿಗೆ ಎರಡೂವರೆ ಸಾವಿರ ಕೊಟ್ಟರೆ ಏನು ಮಾಡಲು ಆಗುತ್ತದೆ? ಯಾವ ಭಾಗದಲ್ಲಿ ರೈತರು ಎಷ್ಟು ನಷ್ಟ ಅನುಭವಿಸಿದ್ದಾರೆ ಎಂಬುದನ್ನು ವೈಜ್ಞಾನಿಕವಾಗಿ ತೀರ್ಮಾನಿಸಿ ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದರು.

ಸರ್ವಪಕ್ಷ ನಿಯೋಗ ಬೇಡ

ಬರದ ವಿಚಾರಕ್ಕಾಗಿ ಸರ್ವಪಕ್ಷ ನಿಯೋಗವನ್ನು ದೆಹಲಿಗೆ ಕರೆದುಕೊಂಡು ಹೋಗಿ ಏನು ಮಾಡುತ್ತೀರಿ? ಅದು ಮತ್ತೊಂದು ಖರ್ಚು. ವಿಮಾನ, ಫೈವ್ ಸ್ಟಾರ್ ಹೋಟೆಲ್ ವಾಸ್ತವ್ಯ ಎಲ್ಲವೂ ಅನಗತ್ಯ ಖರ್ಚು. ನೀವೇ ಯಾರಾದರೂ ಹೋಗಿ ಮಾತನಾಡಿಕೊಂಡು ಬರಲು ಆಗುವುದಿಲ್ಲವೇ? ರಾಜ್ಯದ ಖಜಾನೆ ಖಾಲಿಯಾಗಿದೆ ಎಂದು ನಾನು ಹೇಳುವುದಿಲ್ಲ, ಖಾಲಿ ಮಾಡಿಕೊಂಡು ಕುಳಿತಿರುವವರು ನೀವು ಎಂದು ಸರಕಾರದ ಕೇಂದ್ರ ಸಚಿವರು ತೀವ್ರ ವಾಗ್ದಾಳಿ ನಡೆಸಿದರು.

ಇಡಿ ದಾಳಿ ಬಗ್ಗೆ ಡಿಕೆಶಿ ಹೇಳಿಕೆ

ಚುನಾವಣೆ ಸಂದರ್ಭದಲ್ಲಿ ನನ್ನ ಮೇಲೆ ಇಡಿ ದಾಳಿ ಆಗಲಿದೆ ಎಂದು ಡಿ.ಕೆ. ಶಿವಕುಮಾರ್ ಅವರು ಹೇಳಿರುವುದನ್ನು ಗಮನಿಸಿದ್ದೇನೆ. ಅವರು ಏಕೆ ಭಯಪಡಬೇಕು? ತಪ್ಪು ಮಾಡಿದ್ದರೆ ತಾನೇ ಭಯಪಡಬೇಕು. ಅವರು ಅಕ್ರಮ ಮಾಡಿಲ್ಲ ಅಂದರೆ ಭಯ ಯಾಕೆ? ಇಡೀ ರಾತ್ರಿ ನಿದ್ರೆಗೆಟ್ಟು ಯಾಕೆ ಕುಳಿತಿರುತ್ತಿರಿ? ಇಡಿ, ಐಟಿ ಬಗ್ಗೆ ನಿಮಗೆ ಯಾಕೆ ಭಯ? ಎಂದು ಸಚಿವ ಕುಮಾರಸ್ವಾಮಿ ಅವರು ಪ್ರಶ್ನಿಸಿದರು.

ನಾನು ಯಾರನ್ನು ಕೂಡ ಬ್ಲ್ಯಾಕ್ ಮಾಡುತ್ತಿಲ್ಲ

ನಾನು ಯಾರನ್ನೂ ಬ್ಲ್ಯಾಕ್ ಮೇಲ್ ಮಾಡುತ್ತಿಲ್ಲ. ಹೈಕೋರ್ಟ್, ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಕೋರ್ಟ್ ಆದೇಶ ಇದ್ದಮೇಲೂ ನೀವು ಆ ವ್ಯಕ್ತಿಗೆ (ಅಶೋಕ್ ಖೇಣಿ) ಯಾಕೆ ಹೆದರುತ್ತಿದ್ದೀರಿ? ಕೋರ್ಟ್ ಆದೇಶದಲ್ಲಿ ಅಕ್ರಮವಾಗಿ ಟೋಲ್ ಸಂಗ್ರಹ ಮಾಡಲಾಗುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ನಿನ್ನೆ ನನ್ನ ತೋಟದಲ್ಲಿ ನೈಸ್ ಸಂತ್ರಸ್ತ ರೈತರ ಸಭೆ ನಡೆಯಿತು. Aa ಸಭೆಯಲ್ಲಿ ಭಾಗಿಯಾಗಿದ್ದ ಯುವಕನೊಬ್ಬ ನಮ್ಮ ಅಪ್ಪ ಕಾಣೆಯಾಗಿದ್ದಾರೆ. ಒಂದು ವರ್ಷದಿಂದ ಪತ್ತೆ ಇಲ್ಲ ಎಂದು ಹೇಳಿ ಕಣ್ಣೀರು ಹಾಕಿದ. ರಾಜ್ಯದಲ್ಲಿ ಏನು ನಡೆಯುತ್ತಿದೆ ಮಿಸ್ಟರ್ ಶಿವಕುಮಾರ್ ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದರು.

ಕೊಟ್ಟಿರುವ ಅಧಿಕಾರವನ್ನು ಕಳ್ಳಕಾಕರಿಗೆ ರಕ್ಷಣೆ ಕೊಡಲು ನೀಡಿಲ್ಲ ನಿಮಗೆ. ಆ ಕಳ್ಳಕಾಕರ ಜತೆ ನೀವೇ ಶಾಮೀಲಾಗಿದ್ದೀರಿ. ನಾನು ಹಿಟ್ ಅಂಡ್ ರನ್ ಮಾಡುವುದಿಲ್ಲ. ಸ್ವಲ್ಪ ಇರಿ ಕೊಡುತ್ತೇನೆ. ನನ್ನದೇನಿದ್ದರೂ ನೇರ ಹೋರಾಟ, ಹಿಟ್ಟು ಇಲ್ಲ ರನ್ನು ಇಲ್ಲ. ಕೊಡುವುದಾದರೆ ನಿಮಗೆ (ಮಾಧ್ಯಮಗಳಿಗೆ) ದಿನಕ್ಕೊಂದು ಹಗರಣದ ಮಾಹಿತಿ ಕೊಡಬಹುದು. ನಾನು ಬದುಕಿರುತ್ತೇನೆ, ನೀವು ಬದುಕಿರುತ್ತೀರಾ, ನೋಡೋಣ ಇರಿ. ಮುಂದೆ ಏನೇನು ಆಗುತ್ತದೋ ಎಂದು ಅವರು ಮಾರ್ಮಿಕವಾಗಿ ಉತ್ತರಿಸಿದರು.

ರಾಜ ಹೈಕೋರ್ಟು ಕಠಿಣ ಶಬ್ದಗಳಲ್ಲಿ ನೈಸ್ ಯೋಜನೆ ಬಗ್ಗೆ ಅಭಿಪ್ರಾಯಗಳನ್ನು ದಾಖಲಿಸಿದ್ದರು ಕೂಡ ಈ ಸರ್ಕಾರ ಈ ಮುಖ್ಯಮಂತ್ರಿ ನೇತೃತ್ವದಲ್ಲಿ ಅಶೋಕ್ ಖೇಣಿ ಎಂಬ ವ್ಯಕ್ತಿಗೆ ಏಕೆ ರಕ್ಷಣೆ ನೀಡುತ್ತಾ ಬಂದಿದೆ ಎಂದು ಕೇಂದ್ರ ಸಚಿವರು ತೀಕ್ಷ್ಣವಾಗಿ ಪ್ರಶ್ನಿಸಿದರು.

ಕಳೆದ ಐದು ದಿನಗಳಿಂದ ರೈತರು ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದರು. ಐದು ದಿನಗಳ ಕಾಲ ಪ್ರತಿಭಟನೆ ನಡೆಯುವಾಗ ಸುಮ್ಮನಿದ್ದ ಸರ್ಕಾರ, ನಿನ್ನೆ ಏಕಾಏಕಿ ಸುಮೊಟೊ ಕೇಸ್ ದಾಖಲಿಸಿದೆ. ಇದು ರೈತರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನವಾಗಿದೆ. ಜೆಡಿಎಸ್ ಪಕ್ಷ ಸಂಪೂರ್ಣವಾಗಿ ರೈತರ ಪರವಾಗಿ ನಿಲ್ಲುತ್ತದೆ ಎಂದು ಅವರು ಹೇಳಿದರು.

ಹಾಲಿಗೆ ಪ್ರೋತ್ಸಾಹ ಧನ ನೀಡಬೇಕು

ಹಾಲಿನ ದರ ಹೆಚ್ಚಳ ಈ ಸಂದರ್ಭದಲ್ಲಿ ಸರಿಯಲ್ಲ. ಗ್ಯಾರಂಟಿಗಳಿಗೆ ಹಣ ಮೀಸಲಿಟ್ಟಿದ್ದೀರಿ, 6ನೇ ಗ್ಯಾರಂಟಿ ಎಂದು ರೈತರಿಗೆ ಪ್ರೋತ್ಸಾಹ ಧನ ಕೊಡಿ. ಸರ್ಕಾರವೇ ₹10 ಪ್ರೋತ್ಸಾಹ ಧನವನ್ನು ₹15 ಮಾಡಿ. ಜನರ ಮೇಲೆ ಹೊರೆ ಹಾಕದೆ ಸರ್ಕಾರವೇ ರೈತರಿಗೆ ಸಬ್ಸಿಡಿ ಕೊಡಲಿ. ಬರೀ ಕಾಫಿ, ಟೀ ಗೆ ₹200 ಕೋಟಿ ಖರ್ಚು ಮಾಡುವ ಈ ಸರಕಾರಕ್ಕೆ ಪ್ರೋತ್ಸಾಹ ಧನ ನೀಡುವುದು ಕಷ್ಟವೇ? ಕುಟುಂಬದಲ್ಲಿ ಮಕ್ಕಳಿಗೆ ಹಾಲು ತೆಗೆದುಕೊಳ್ಳಬೇಕಾದರೆ ಬಡ ಕುಟುಂಬದ ಪರಿಸ್ಥಿತಿ ಏನಾಗಬಹುದು? ರೈತ ಹಸುಗಳನ್ನು ನಂಬಿ ಬದುಕುತ್ತಿದ್ದಾನೆ ಎಂದು ಸಚಿವರು ಹೇಳಿದರು.

ಕೆಪಿಎಸ್ಸಿ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಎಲ್ಲರಿಗೂ ಗೊತ್ತು. ಪ್ರಿಯಾಂಕ ಖರ್ಗೆ ಉಸ್ತುವಾರಿ ವಹಿಸಿದ್ದ ಇಲಾಖೆಯಲ್ಲಿ ಅಕ್ರಮ ನೇಮಕಾತಿ ನಡೆದಿದೆ. 24 ಎಂಜಿನಿಯರ್ ಗಳ ನೇಮಕದಲ್ಲಿ ಅಕ್ರಮ ಆಗಿದೆ. ಆದರೆ, ಈ ಮುಖ್ಯಮಂತ್ರಿ ನೀಡಿದರೆ ಪ್ರಿಯಾಂಕ್ ಖರ್ಗೆ ತಪ್ಪೇ ಮಾಡಿಲ್ಲ ಎಂದು ಕ್ಲೀನ್ ಚಿಟ್ ನೀಡುತ್ತಿದ್ದಾರೆ ಎಂದು ಸಚಿವರು ಕಿಡಿಕಾರಿದರು.

Exit mobile version