ಹಾಸನ ಗಣೇಶೋತ್ಸವ ದುರಂತ: ಮೃತ ಗೋಕುಲ್ ಕುಟುಂಬದವರಿಗೆ ದೇವೇಗೌಡರ ಸಾಂತ್ವನ

111 (40)

ಹಾಸನ, ಸೆಪ್ಟೆಂಬರ್ 14, 2025: ಹಾಸನ ಜಿಲ್ಲೆಯ ಮೊಸಳೆಹೊಸಹಳ್ಳಿಯಲ್ಲಿ ಗಣೇಶೋತ್ಸವದ ಸಂಭ್ರಮದ ವೇಳೆ  ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ 9 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ದುರಂತದಲ್ಲಿ ಹಲವಾರು ಜನರು ಗಾಯಗೊಂಡಿದ್ದು, ಅವರಿಗೆ ಸ್ಥಳೀಯ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಈ ದುರಂತದ ಬಗ್ಗೆ ತಿಳಿದುಕೊಂಡ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರು ಮೊಸಳೆಹೊಸಹಳ್ಳಿಗೆ ಭೇಟಿ ನೀಡಿ, ಮೃತರ ಕುಟುಂಬಗಳನ್ನು ಭೇಟಿಯಾದರು.

ಅವರು ದುರಂತದಲ್ಲಿ ಸಾವನ್ನಪ್ಪಿದ ಗೋಕುಲ್ ಎಂಬುವವರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ,  ಗೋಕುಲ್‌ನ ತಾಯಿ, ದೇವೇಗೌಡರ ಕೈಹಿಡಿದು ಗೋಳಾಡಿದರು. “ನನ್ನ ಮಗ ನನ್ನ ಕೈ ಹಿಡಿದು ಬೈಕ್‌ನಲ್ಲಿ ಕರೆದುಕೊಂಡು ಹೋಗುತ್ತಿದ್ದ. ಈಗ ನನಗೆ ಯಾರು ದಿಕ್ಕು?” ಎಂದು ಗೋಕುಲ್‌ ತಾಯಿ ಕಣ್ಣೀರಿಟ್ಟರು.

ರಾಜ್ಯ ಸರ್ಕಾರದಿಂದ ಪರಿಹಾರ ಘೋಷಣೆ

ಸರ್ಕಾರವು ಈ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 7 ಲಕ್ಷ ರೂಪಾಯಿಗಳ ಪರಿಹಾರವನ್ನು ಘೋಷಿಸಿದೆ. ಈ ಆರ್ಥಿಕ ಸಹಾಯವು ಕುಟುಂಬಗಳಿಗೆ ತಕ್ಷಣದ ನೆರವನ್ನು ಒದಗಿಸಿದಂತಾಗಿದೆ. ಅಪಘಾತದ ಕಾರಣಗಳನ್ನು ಕಂಡುಹಿಡಿಯಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.

Exit mobile version