ಗ್ಯಾರಂಟಿ ನ್ಯೂಸ್ ಸ್ಯಾಟಲೈಟ್ ಚಾನಲ್ ಲೋಕಾರ್ಪಣೆ ಮಾಡಿದ ಡಿಸಿಎಂ ಡಿಕೆಶಿ

Untitled design 2025 04 02t084201.592

ಗ್ಯಾರಂಟಿ ನ್ಯೂಸ್.. ಇದು ನಮ್ಮೆಲ್ಲರ ಕನಸು.. ನನಸಾಗಿದೆ.. ಸ್ಯಾಟಲೈಟ್ ಸುದ್ದಿವಾಹಿನಿಯಾಗಿ ಗ್ಯಾರಂಟಿ ನ್ಯೂಸ್, ವೀಕ್ಷಕರ ಮುಂದೆ ಬಂದಿದೆ.. ಕಳೆದ ಒಂದು ವರ್ಷದಿಂದ, ಈ ಅತ್ಯಾದ್ಭುತ ಕ್ಷಣಕ್ಕಾಗಿ ಕಾಯ್ತಿದ್ದ ಇಡೀ ತಂಡದ ಶ್ರಮಕ್ಕೆ ಈಗ ಸಾರ್ಥಕತೆ ಸಿಕ್ಕಿದೆ.. ಇದೀಗ ಸ್ಯಾಟಲೈಟ್ ವಾಹಿನಿ ಮೂಲಕ ಕರ್ನಾಟಕದಾದ್ಯಂತ ಲಭ್ಯವಿದೆ.

ಕನ್ನಡಿಗರ ಮನೆ ಮನೆಯಲ್ಲೂ ಮನೆಮಾತಾಗಲು ನಿಮ್ಮ ಮುಂದೆ ಈಗ ಗ್ಯಾರಂಟಿ ನ್ಯೂಸ್ ಚಾನೆಲ್ ಬರ್ತಿದ್ದು, ಗ್ಯಾರಂಟಿ ನ್ಯೂಸ್ ಸ್ಯಾಟಲೈಟ್ ಚಾನಲ್ ಅನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಲೋಕಾರ್ಪಣೆ ಮಾಡಿದ್ದಾರೆ.  ನಂತರ ಮಾತಾಡಿದ ಅವರು ಗ್ಯಾರಂಟಿ ನ್ಯೂಸ್ ಚಾನೆಲ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಶುಭ ಹಾರೈಸಿದರು.

ADVERTISEMENT
ADVERTISEMENT

ಅತೀ ಕಡಿಮೆ ಸಮಯದಲ್ಲಿ ಅತೀ ಹೆಚ್ಚು ಜನಮನ್ನಣೆ ಪಡೆದಿರೋ ಗ್ಯಾರಂಟಿ ನ್ಯೂಸ್ ಇಂದು ಸ್ಯಾಟಲೈಟ್ ಮೂಲಕ ನಿಮ್ಮ ಮನೆಮನಗಳಿಗೆ ತಲುಪಲಿದೆ. ಕಳೆದ ಒಂದು ವರ್ಷದಿಂದ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಯೂಟ್ಯೂಬ್, ಟ್ವಿಟರ್ ಸೇರಿದಂತೆ ಹಲವು ಪ್ಲಾಟ್ಫಾರ್ಮ್ಗಳ ಮೂಲಕ ರಾಜ್ಯ, ದೇಶ, ವಿದೇಶ, ಅಂತರರಾಷ್ಟೀಯ ಮಟ್ಟದ ಸಂಕ್ಷಿಪ್ತ ಸುದ್ದಿಗಳನ್ನು ಮುಟ್ಟಿಸುವ ಕೆಲಸವನ್ನ ನಿಮ್ಮ ಗ್ಯಾರಂಟಿ ನ್ಯೂಸ್ ಮಾಡುತ್ತಾ ಬಂದಿದೆ.. ಈಗ ಮತ್ತಷ್ಟು ಹೊಸ ವಿನ್ಯಾಸ ಹಾಗೂ ಹೊಸ ಹೊಸ ಟೆಕ್ನಾಲಜಿಗಳ ಮೂಲಕ ಮತ್ತಷ್ಟು ಜನರ ಹತ್ತಿರಕ್ಕೆ ಬರುತ್ತಿದೆ.. ಸ್ಪಷ್ಟ, ನಿಖರ ಸುದ್ದಿಗಳೊಂದಿಗೆ ನಿಮ್ಮ ಮುಂದೆ ಬರ್ತಿರೋ ಗ್ಯಾರಂಟಿ ನ್ಯೂಸ್ ಎಲ್ಲರ ಮನ ಗೆಲ್ಲಲು ಇಂದಿನಿಂದ ಗ್ರಾಂಡ್ ಎಂಟ್ರಿ ಕೊಡ್ತಿದೆ.. ನಿಮ್ಮದೇ ಗ್ಯಾರಂಟಿ ನ್ಯೂಸ್ ಚಾನೆಲ್‌ಗೆ ಹರಸಿ ಹಾರೈಸಿ..

Exit mobile version