ಗೃಹಲಕ್ಷ್ಮೀಯರಿಗೆ ಶಾಕ್ ಕೊಟ್ಟ ರಾಜ್ಯ ಸರ್ಕಾರ!

BeFunky collage (11)

ರಾಜ್ಯ ಸರ್ಕಾರದ ಐದು ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯು ಮಹಿಳೆಯರಿಗೆ ಶಾಕ್‌ ನೀಡಿದೆ. ಹೌದು, ರಾಜ್ಯಾದ್ಯಂತ ಒಟ್ಟು 3.89 ಲಕ್ಷ ಗೃಹಲಕ್ಷ್ಮೀ ಫಲಾನುಭವಿಗಳಿಗೆ ಕರ್ನಾಟಕ ಸರ್ಕಾರ ಕೊಕ್ ನೀಡಿದೆ.

ಗೃಹಲಕ್ಷ್ಮೀ ಯೋಜನೆಯನ್ನು ಅನೇಕರು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬ ಮಾತು ಕೇಳಿಬಂದಿದೆ. ಈ ಕುರಿತಂತೆ ಸರ್ಕಾರವು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸರ್ಕಾರದ ವಿವಿಧ ದತ್ತಾಂಶಗಳನ್ನು ಆಧರಿಸಿ ಪಟ್ಟಿಯನ್ನು ಸಿದ್ದಪಡಿಸುವ ಮೂಲಕ ಫಲಾನುಭವಿಗಳ ಪರಿಷ್ಕರಣೆಯನ್ನು ನಡೆಸಿತ್ತು. ಈ ವೇಳೆ 3.89 ಲಕ್ಷ ಅನರ್ಹ ಮಹಿಳಾ ಫಲಾನುಭವಿಗಳು ಪತ್ತೆಯಾಗಿದ್ದಾರೆ. ಈ ಅನರ್ಹ ಫಲಾನುಭವಿಗಳಲ್ಲಿ ಸರ್ಕಾರಕ್ಕೆ ತೆರಿಗೆ ಕಟ್ಟುತ್ತಿರುವವರು, ಮೃತಪಟ್ಟ ಮಹಿಳೆಯರು, ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ ಎಂದು ತಿಳಿದುಬಂದಿದೆ. ಇಂತಹ ಅನರ್ಹರ ಪಟ್ಟಿಯನ್ನು ಯೋಜನೆಯಿಂದ ಸರ್ಕಾರ ಕೈಬಿಟ್ಟಿದೆ.

ಗೃಹಲಕ್ಷ್ಮೀ ಅನರ್ಹರ ಪಟ್ಟಿ ಕೈಬಿಟ್ಟಿದ್ದರಿಂದ ರಾಜ್ಯ ಸರ್ಕಾರಕ್ಕೆ ಎಷ್ಟು ಉಳಿತಾಯ ಗೊತ್ತಾ..?

ಗೃಹಲಕ್ಷ್ಮೀ ಅನರ್ಹರ ಪಟ್ಟಿ ಕೈಬಿಟ್ಟಿದ್ದರಿಂದ ಸರ್ಕಾರದ ಚೊಕ್ಕಸಕ್ಕೆ 77 ಕೋಟಿ ರೂ. ಉಳಿತಾಯವಾಗಲಿದೆ ಎಂದು ಹೇಳಲಾಗುತ್ತಿದೆ. ರಾಜ್ಯಾದ್ಯಂತ ಆದಾಯ ತೆರಿಗೆ ಮತ್ತು GST ಕಟ್ಟುತ್ತಿರುವವರು 1.95 ಲಕ್ಷ ಮಂದಿ ಇದ್ದಾರೆ ಎಂದು ಸರ್ಕಾರ ನಡೆಸಿದ ಪರಿಷ್ಕರಣೆಯಿಂದ ತಿಳಿದುಬಂದಿದೆ. ಮೃತಪಟ್ಟ 1.95 ಲಕ್ಷ ಫಲಾನುಭವಿಗಳ ಹೆಸರಿನ ಅಕೌಂಟ್ ಗೂ ಈ ಯೋಜನೆಯ 2000 ರೂ. ಹಣ ಸಂದಾಯವಾಗಿದೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ 47,871 ಮಂದಿಯನ್ನು ಗೃಹಲಕ್ಷ್ಮೀ ಯೋಜನೆಯಿಂದ ರಾಜ್ಯ ಸರ್ಕಾರ ಕೈಬಿಟ್ಟಿದೆ. ಮಾರ್ಚ್ ತಿಂಗಳಿನಲ್ಲಿ ಒಟ್ಟು 3.89 ಲಕ್ಷ ಅನರ್ಹ ಫಲಾನುಭವಿಗಳು ಪತ್ತೆಯಾಗಿದ್ದರು ಎಂದು ತಿಳಿದುಬಂದಿದೆ.

ಯಾವ್ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿ ಅನರ್ಹರು..?

ಜಿಲ್ಲೆ IT ಮತ್ತು GST ಪಾವತಿಸಿದವರು ಮರಣಹೊಂದಿದವರು ಒಟ್ಟು
ಬೆಂಗಳೂರು ನಗರ 33,833 14,038 47,871
ಬೆಳಗಾವಿ 16,432 15,850 32,282
ದಕ್ಷಿಣ ಕನ್ನಡ 10,495 6,159 16,654
ಬಾಗಲಕೋಟೆ 4,849 5,907 10,756
ಬಳ್ಳಾರಿ 4,237 3,415 7,652
ಬೆಂಗಳೂರು ಗ್ರಾಮಾಂತರ 4,285 3,911 8,196
ಬೀದರ್ 3,650 4,063 7,713
ಚಾಮರಾಜನಗರ 2,232 4,739 6,971
ಚಿಕ್ಕಮಗಳೂರು 3,872 5,042 8,914
ಚಿತ್ರದುರ್ಗ 3,810 6,543 10,353
ದಾವಣಗೆರೆ 4,794 5,926 10,720
ಧಾರವಾಡ 6,660 5,628 12,288
ಗದಗ 2,740 3,868 6,608
ಹಾಸನ 6,866 8,033 14,899
ಹಾವೇರಿ 4,549 5,905 10,454
ಕಲಬುರಗಿ 5,765 6,408 12,173
ಕೊಡಗು 2,712 2,193 4,905
ಕೋಲಾರ 4,636 5,615 10,251
ಕೊಪ್ಪಳ 3,334 4,475 7,809
ಮಂಡ್ಯ 6,735 9,168 15,903
ಮೈಸೂರು 9,139 11,541 20,680
ರಾಯಚೂರು 4,603 5,181 9,784
ರಾಮನಗರ 5,117 5,713 10,830
ಶಿವಮೊಗ್ಗ 6,124 6,409 12,533
ತುಮಕೂರು 7,898 12,139 20,037
ಉಡುಪಿ 5,718 4,311 10,029
ಉತ್ತರ ಕನ್ನಡ 6,404 5,546 11,950
ವಿಜಯನಗರ 2,592 3,825 6,417
ವಿಜಯಪುರ 4,742 5,540 10,282
ಯಾದಗಿರಿ 2,145 2,775 4,920
ಒಟ್ಟು 1,94,560 1,95,224 3,89,784
Exit mobile version