ಹೈದರಾಬಾದ್‌ನಿಂದ ಹುಬ್ಬಳ್ಳಿಗೆ ಹೊರಟಿದ್ದ Fly91 ಏರ್‌ಲೈನ್ಸ್ ವಿಮಾನವೊಂದು ಭಾರಿ ದುರಂತದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದೆ. ಹುಬ್ಬಳ್ಳಿ ಏರ್‌ಪೋರ್ಟ್‌ನಲ್ಲಿ ಲ್ಯಾಂಡಿಂಗ್ ಮಾಡಲು ಸಾಧ್ಯವಾಗದ ಕಾರಣ ವಿಮಾನವು ಬರೋಬ್ಬರಿ 4 ಗಂಟೆಗಳ ಕಾಲ ಆಗಸದಲ್ಲೇ ಸುತ್ತಾಡಿ ಅಂತಿಮವಾಗಿ ಬೆಂಗಳೂರು ಏರ್‌ಪೋರ್ಟ್‌ನಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದೆ.
ಘಟನೆಯ ವಿವರ : ನಿನ್ನೆ ಮಧ್ಯಾಹ್ನ 3 ಗಂಟೆಗೆ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಿದ್ದ ವಿಮಾನ ಸಂಜೆ 4:30ಕ್ಕೆ ಹುಬ್ಬಳ್ಳಿ ಏರ್‌ಪೋರ್ಟ್‌ನಲ್ಲಿ ಲ್ಯಾಂಡಿಂಗ್ ಆಗಬೇಕಿತ್ತು.
ಆದರೆ ಹುಬ್ಬಳ್ಳಿ ಏರ್‌ಪೋರ್ಟ್‌ನಲ್ಲಿ ಲ್ಯಾಂಡಿಂಗ್ ಮಾಡುವ ಪ್ರಯತ್ನಗಳು ವಿಫಲವಾದವು. ವಿಮಾನವು ಮುಂಡಗೋಡು, ದಾವಣಗೆರೆ, ಶಿವಮೊಗ್ಗ ಪ್ರದೇಶಗಳ ಮೇಲೆ 4 ಗಂಟೆಗಳ ಕಾಲ ಸುತ್ತಾಡುತ್ತಾ ಉಳಿಯಿತು. ಅಂತಿಮವಾಗಿ ಸಂಜೆ 7:30ಕ್ಕೆ ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಲಾಗಿದೆ.
ಪ್ರಯಾಣಿಕರ ಆತಂಕ: ವಿಮಾನ ಲ್ಯಾಂಡಿಂಗ್ ಆಗದೆ ಆಕಾಶದಲ್ಲೇ ಸುತ್ತಾಡುತ್ತಿರುವುದನ್ನು ಕಂಡು ಪ್ರಯಾಣಿಕರು ತೀವ್ರ ಆತಂಕಕ್ಕೊಳಗಾಗಿದ್ದರು. ಕೆಲವರು ಕಣ್ಣೀರು ಹಾಕಿದ್ದಾರೆ. “ನಾವು ಜೀವಂತವಾಗಿ ಬರುವುದೇ ಅನುಮಾನ” ಎಂದು ಕುಟುಂಬಸ್ಥರಿಗೆ ಮೊಬೈಲ್ ಸಂದೇಶ ಕಳುಹಿಸಿದ ಪ್ರಕರಣಗಳೂ ವರದಿಯಾಗಿವೆ.
ಪ್ರಯಾಣಿಕರ ಕುಟುಂಬಸ್ಥರು Fly91 ಏರ್‌ಲೈನ್ಸ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಘಟನೆ ಬಗ್ಗೆ ಸಕಾಲದಲ್ಲಿ ಮಾಹಿತಿ ನೀಡದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಿದ್ದಾರೆ.
ಕಾರಣ ಏನು? ವಿಮಾನ ಲ್ಯಾಂಡಿಂಗ್ ವೈಫಲ್ಯಕ್ಕೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಕೆಲವು ಪ್ರಯಾಣಿಕರು ತಾಂತ್ರಿಕ ದೋಷ ಎಂದು ಹೇಳುತ್ತಿದ್ದರೆ, ಮೂಲಗಳ ಪ್ರಕಾರ ಹವಾಮಾನ ವೈಪರೀತ್ಯವೇ ಈ ಘಟನೆಗೆ ಮುಖ್ಯ ಕಾರಣ ಎನ್ನಲಾಗಿದೆ. ಈ ಬಗ್ಗೆ ವಿಮಾನ ಕಂಪನಿ ಮತ್ತು ವಿಮಾನ ನಿಲ್ದಾಣ ಪ್ರಾಧಿಕಾರಗಳಿಂದ ಅಧಿಕೃತ ವಿವರಣೆ ಇನ್ನೂ ಬಂದಿಲ್ಲ.
