ಬೆಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ ಸದ್ದು: ಯುವಕ-ಯುವತಿಗೆ ನಡು ರಸ್ತೆಯಲ್ಲೇ ಹಲ್ಲೆ

Untitled design 2025 04 10t213950.158

ಬೆಂಗಳೂರಿನ ಚಂದ್ರಾಲೇಔಟ್‌ನಲ್ಲಿ ಒಂದು ಘನಘೋರ ಘಟನೆ ನಡೆದಿದೆ. ಸ್ಕೂಟರ್‌ನಲ್ಲಿ ಕುಳಿತಿದ್ದ ಯುವಕ-ಯುವತಿಯರ ಮೇಲೆ “ನೈತಿಕ ಪೊಲೀಸ್‌ಗಿರಿ” ಹೆಸರಿನಲ್ಲಿ ಹಲ್ಲೆ ನಡೆಸಿದ ಗ್ಯಾಂಗ್‌ನ ಐದು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಈ ವಿಡಿಯೋಗೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. 

ಘಟನೆಯ ವಿವರ:
ಚಂದ್ರಾಲೇಔಟ್‌ನ ಪಾರ್ಕ್ ಬಳಿ ಬೆಳಗ್ಗೆ ಸ್ಕೂಟರ್‌ನಲ್ಲಿ ಕುಳಿತು ಮಾತನಾಡುತ್ತಿದ್ದ ಯುವಕ-ಯುವತಿಯನ್ನು ಗುಂಪೊಂದು ಬಂದು ಕಿರುಕುಳ ನೀಡಿದ್ದಾರೆ. “ನೀವು ಯಾಕೆ ಒಟ್ಟಿಗೆ ಕುಳಿತಿದ್ದೀರಿ? ಇದು ನಮ್ಮ ಏರಿಯಾ” ಎಂದು ಕೇಳಿದ  ಗುಂಪೊಂದು ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಆ ಯುವಕ, ಯುವತಿ “ನಾವು ಸ್ನೇಹಿತರು, ಮಾತಾಡುತ್ತಿದ್ದೇವೆ” ಎಂದು ಹೇಳಿದರೂ, ಆ ಗ್ಯಾಂಗ್ ಕಿರುಕುಳ ನೀಡಿ ಹಲ್ಲೆ ಮಾಡಿದ್ದಾರೆ.

ADVERTISEMENT
ADVERTISEMENT

ಯುವತಿಯ ಜಡೆಯನ್ನು ಹಿಡಿದು ಎಳೆದು, ಇಬ್ಬರ ಮೇಲೂ ಹೊಡೆದು ಹಲ್ಲೆ ಮಾಡಿದ್ದಾರೆ. “ನಿಮ್ಮ ಅಪ್ಪ-ಅಮ್ಮಂದಿರಿಗೆ ಫೋನ್ ಮಾಡ್ತೀವಿ” ಎಂದು ಬೆದರಿಸಿದ ಗ್ಯಾಂಗ್‌, ಹಿಂಸೆಯ ವೀಡಿಯೊವನ್ನು ರೆಕಾರ್ಡ್ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಹಲ್ಲೆಗೆ ಒಳಗಾದ ಯುವಕ, ಯುವತಿ ಸ್ಥಳೀಯ ಚಂದ್ರಾಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.

ಯುವಕ, ಯುವತಿ ದೂರಿನ ಆಧಾರದ ಮೇಲೆ ಪೊಲೀಸರು ಸೈಯದ್‌, ಶಾಹಿಲ್ ಸೇರಿದಂತೆ ಐವರನ್ನು ಬಂಧಿಸಿದ್ದಾರೆ. ಅವರ ವಿರುದ್ಧ ದೌರ್ಜನ್ಯ, ಹಲ್ಲೆ ಆರೋಪಗಳನ್ನು ದಾಖಲಿಸಲಾಗಿದೆ. 

 

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..

Exit mobile version