ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಲು ಪ್ರಮುಖ ಕಾರಣವಾದ ‘ಪಂಚ ಗ್ಯಾರಂಟಿ’ ಯೋಜನೆಗಳ ಜಾರಿಯ ಹಿಂದೆ ತಾವೇ ಮಾಸ್ಟರ್ಮೈಂಡ್ ಆಗಿದ್ದ ರಹಸ್ಯವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಿಚ್ಚಿಟ್ಟಿದ್ದಾರೆ. ಬೆಂಗಳೂರಿನಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ‘ದೃಢ ಕರ್ನಾಟಕದ ಸಂಕಲ್ಪ’ ಎಂಬ ಸಂಪಾದಕರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ, ‘ಗ್ಯಾರಂಟಿ ನ್ಯೂಸ್’ ಸಂಪಾದಕ ಸತೀಶ್ ಆಂಜಿನಪ್ಪ ಅವರ ಪ್ರಶ್ನೆಗೆ ಉತ್ತರಿಸುತ್ತಾ ಸಿಎಂ ಈ ಮಹತ್ವದ ಹೇಳಿಕೆ ನೀಡಿದ್ದಾರೆ.
ತಮ್ಮ ಅವಧಿಯ ಪ್ರಮುಖ ಯೋಜನೆಗಳ ಕುರಿತು ಮಾತನಾಡಿದ ಡಿ.ಕೆ. ಶಿವಕುಮಾರ್, “ನಾನು ಕೆಪಿಸಿಸಿ ಅಧ್ಯಕ್ಷನಾಗಿದ್ದ ಅವಧಿಯಲ್ಲೇ ಈ ಪಂಚ ಗ್ಯಾರಂಟಿ ಯೋಜನೆಗಳ ನೀಲನಕ್ಷೆಯನ್ನು ನಾನೇ ಸಿದ್ಧಪಡಿಸಿದ್ದೆ” ಎಂದು ಹೇಳಿದ್ದಾರೆ. 10 ಕೆ.ಜಿ. ಉಚಿತ ಅಕ್ಕಿ ನೀಡುವ ‘ಅನ್ನಭಾಗ್ಯ’ ಯೋಜನೆ ಸಿದ್ದರಾಮಯ್ಯ ಅವರ ಕನಸಾಗಿತ್ತು, ಆದರೆ ಉಳಿದ ನಾಲ್ಕು ಗ್ಯಾರಂಟಿ ಯೋಜನೆಗಳಿಗೆ ರೂಪುರೇಷೆ ನೀಡಿದ್ದು ನಾನೇ ಡಿಕೆ ಶಿವಕುಮಾರ್ ಪ್ರತಿಪಾದಿಸಿದರು.
ಕೇವಲ ಗ್ಯಾರಂಟಿ ಮಾತ್ರವಲ್ಲದೆ ಭಾರತ್ ಜೋಡೋ ಯುವಕ ಸಂಘಟನೆ, ಪ್ರಜಾಸೇವೆ ಇಲಾಖೆ, ಕೃಷ್ಣಾ ಮೇಲ್ದಂಡೆ ಯೋಜನೆ, ತುಂಗಾಭದ್ರಾ ಮತ್ತು ಕೃಷ್ಣಾ ನದಿಯ ಪ್ರಮುಖ ನೀರಾವರಿ ಯೋಜನೆಗಳ ಹಿಂದೆಯೂ ನನ್ನ ತಮ್ಮದೇ ಶ್ರಮವಿದೆ ಎಂದ ಸಿಎಂ, “ನಾನು ರೂಪಿಸಿದ ಯೋಜನೆಗಳ ಪಟ್ಟಿಯನ್ನು ಹೇಳುತ್ತಾ ಹೋದರೆ ಇಡೀ ರಾತ್ರಿಯೇ ಮುಗಿದುಹೋಗುತ್ತದೆ” ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ವರದಿ: ಶ್ರೀಶೈಲ್ ಪಾಟೀಲ್