ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮುನ್ನ ಸಚಿವ ಸಂಪುಟ ರಚನೆಯ ಚರ್ಚೆಗಳು ಜೋರಾಗಿವೆ. ಗ್ಯಾರಂಟಿ ನ್ಯೂಸ್ ಪಡೆದ ಪ್ರತ್ಯೇಕ ಮಾಹಿತಿಯ ಪ್ರಕಾರ, ಮೊದಲ ಹಂತದಲ್ಲಿ 8 ರಿಂದ 10 ಜನ ಸಚಿವರು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. 15 ದಿನಗಳ ನಂತರ ಎರಡನೇ ಹಂತದಲ್ಲಿ ಮತ್ತು 20 ಸಚಿವರನ್ನು ಸೇರಿಸುವ ಯೋಜನೆ ಇದೆ. ಒಟ್ಟು 33 ಸಚಿವ ಸ್ಥಾನಗಳಲ್ಲಿ 3 ಸ್ಥಾನಗಳನ್ನು ಖಾಲಿ ಇಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಸಂಭವನೀಯ ಸಚಿವರು ಬೆಂಗಳೂರು ಜಿಲ್ಲೆಯಿಂದ ಯಾರು?
- ಕೆ.ಜೆ. ಜಾರ್ಜ್ (ಸರ್ವಜ್ಞ ನಗರ, ಕ್ರಿಶ್ಚಿಯನ್)
- ರಾಮಲಿಂಗ ರೆಡ್ಡಿ (ಬಿಟಿಎಂ ಲೇಔಟ್, ರೆಡ್ಡಿ ಒಕ್ಕಲಿಗ)
- ಕೃಷ್ಣ ಬೈರೇಗೌಡ (ಬ್ಯಾಟರಾಯನಪುರ, ಒಕ್ಕಲಿಗ)
- ಜಮೀರ್ ಅಹಮದ್ ಖಾನ್ (ಚಾಮರಾಜಪೇಟೆ, ಮುಸ್ಲಿಂ)
- ಬೈರತಿ ಸುರೇಶ್ (ಹೆಬ್ಬಾಳ್, ಕುರುಬ)
- ಆನೇಕಲ್ ಶಿವಣ್ಣ (ಆನೇಕಲ್, ದಲಿತ ಬಲಗೈ)
ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಯಾರು?
- ಶರತ್ ಬಚ್ಚೇಗೌಡ (ಹೊಸಕೋಟೆ, ಒಕ್ಕಲಿಗ)
ಬೆಂಗಳೂರು ದಕ್ಷಿಣ ಜಿಲ್ಲೆಯಿಂದ ಯಾರು?
- ಬಾಲಕೃಷ್ಣ (ಮಾಗಡಿ, ಒಕ್ಕಲಿಗ)
ಮಂಡ್ಯ ಜಿಲ್ಲೆಯಿಂದ ಯಾರು?
- ಚಲುವರಾಯಸ್ವಾಮಿ (ನಾಗಮಂಗಲ, ಒಕ್ಕಲಿಗ)
- ನರೇಂದ್ರ ಸ್ವಾಮಿ (ಮಳವಳ್ಳಿ, ದಲಿತ ಬಲಗೈ)
ಮೈಸೂರು ಜಿಲ್ಲೆಯಿಂದ ಯಾರು?
- ಯತೀಂದ್ರ ಸಿದ್ದರಾಮಯ್ಯ (ಎಂಎಲ್ಸಿ, ಕುರುಬ)
- ತನ್ವೀರ್ ಸೇಠ್ (ನರಸಿಂಹರಾಜ, ಮುಸ್ಲಿಂ)
ಕೊಡಗು ಜಿಲ್ಲೆಯಿಂದ ಯಾರು?
- ಪೊನ್ನಣ್ಣ (ವಿರಾಜಪೇಟೆ, ಕೊಡವ)
ಹಾಸನ ಜಿಲ್ಲೆಯಿಂದ ಯಾರು?
- ಶಿವಲಿಂಗೇಗೌಡ (ಅರಸೀಕೆರೆ, ಒಕ್ಕಲಿಗ)
ದಕ್ಷಿಣ ಕನ್ನಡ ಜಿಲ್ಲೆಯಿಂದ ಯಾರು?
- ಯು.ಟಿ. ಖಾದರ್ (ಮಂಗಳೂರು, ಮುಸ್ಲಿಂ)
ಚಾಮರಾಜನಗರ ಜಿಲ್ಲೆಯಿಂದ ಯಾರು?
- ಪುಟ್ಟರಂಗಶೆಟ್ಟಿ (ಚಾಮರಾಜನಗರ, ಉಪ್ಪಾರ)
- ಎ.ಆರ್. ಕೃಷ್ಣಮೂರ್ತಿ (ಕೊಳ್ಳೇಗಾಲ, ದಲಿತ ಬಲಗೈ)
ತುಮಕೂರು ಜಿಲ್ಲೆಯಿಂದ ಯಾರು?
- ಡಾ. ಜಿ. ಪರಮೇಶ್ವರ್ (ಕೊರಟಗೆರೆ, ದಲಿತ ಬಲಗೈ)
- ಟಿ.ಬಿ. ಜಯಚಂದ್ರ (ಶಿರಾ, ಒಕ್ಕಲಿಗ)
ಶಿವಮೊಗ್ಗ ಜಿಲ್ಲೆಯಿಂದ ಯಾರು?
- ಮಧು ಬಂಗಾರಪ್ಪ (ಸೊರಬ, ಈಡಿಗ)
- ಸಂಗಮೇಶ್ (ಭದ್ರಾವತಿ, ಲಿಂಗಾಯತ)
ಹಾವೇರಿ ಜಿಲ್ಲೆಯಿಂದ ಯಾರು?
- ಶ್ರೀನಿವಾಸ ಮಾನೆ (ಹಾನಗಲ್, ಮರಾಠ)
ಧಾರವಾಡ ಜಿಲ್ಲೆಯಿಂದ ಯಾರು?
- ಪ್ರಸಾದ್ ಅಬ್ಬಯ್ಯ (ಹುಬ್ಬಳ್ಳಿ-ಧಾರವಾಡ ಪೂರ್ವ, ದಲಿತ ಬಲಗೈ)
ಚಿತ್ರದುರ್ಗ ಜಿಲ್ಲೆಯಿಂದ ಯಾರು?
- ರಘುಮೂರ್ತಿ (ಚಳ್ಳಕೆರೆ, ವಾಲ್ಮೀಕಿ)
ದಾವಣಗೆರೆ ಜಿಲ್ಲೆಯಿಂದ ಯಾರು?
- ಎಸ್.ಎಸ್. ಮಲ್ಲಿಕಾರ್ಜುನ್ (ದಾವಣಗೆರೆ ಉತ್ತರ, ಲಿಂಗಾಯತ)
ಕೋಲಾರ ಜಿಲ್ಲೆಯಿಂದ ಯಾರು?
- ರೂಪಕಲಾ ಶಶಿಧರ್ (ಕೆಜಿಎಫ್, ದಲಿತ ಎಡಗೈ)
ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಯಾರು?
- ಸುಬ್ಬಾರೆಡ್ಡಿ (ಬಾಗೇಪಲ್ಲಿ, ರೆಡ್ಡಿ ಒಕ್ಕಲಿಗ)
- ಪ್ರದೀಪ್ ಈಶ್ವರ್ (ಚಿಕ್ಕಬಳ್ಳಾಪುರ, ಬಲಿಜ)
ಉತ್ತರ ಕನ್ನಡ ಜಿಲ್ಲೆಯಿಂದ ಯಾರು?
- ಆರ್.ವಿ. ದೇಶಪಾಂಡೆ (ಹಳಿಯಾಳ್, ಬ್ರಾಹ್ಮಣ)
ಬೆಳಗಾವಿ ಜಿಲ್ಲೆಯಿಂದ ಯಾರು?
- ಸತೀಶ್ ಜಾರಕಿಹೊಳಿ (ಯಮಕನಮರಡಿ, ವಾಲ್ಮೀಕಿ)
- ಲಕ್ಷ್ಮೀ ಹೆಬ್ಬಾಳ್ಕರ್ (ಬೆಳಗಾವಿ ಗ್ರಾಮೀಣ, ಲಿಂಗಾಯತ)
- ಲಕ್ಷ್ಮಣ ಸವದಿ (ಅಥಣಿ, ಲಿಂಗಾಯತ)
ವಿಜಯಪುರ ಜಿಲ್ಲೆಯಿಂದ ಯಾರು?
- ಎಂ.ಬಿ. ಪಾಟೀಲ್ (ಬಬಲೇಶ್ವರ, ಲಿಂಗಾಯತ)
- ಸಿ.ಎಸ್. ನಾಡಗೌಡ (ಮುದ್ದೇಬಿಹಾಳ, ಲಿಂಗಾಯತ)
ಬಾಗಲಕೋಟೆ ಜಿಲ್ಲೆಯಿಂದ ಯಾರು?
- ವಿಜಯಾನಂದ ಕಾಶಪ್ಪನವರ್ (ಹುನಗುಂದ, ಲಿಂಗಾಯತ)
ಬಳ್ಳಾರಿ ಜಿಲ್ಲೆಯಿಂದ ಯಾರು?
- ಬಿ. ನಾಗೇಂದ್ರ (ಬಳ್ಳಾರಿ ಗ್ರಾಮೀಣ, ವಾಲ್ಮೀಕಿ)
ಕೊಪ್ಪಳ ಜಿಲ್ಲೆಯಿಂದ ಯಾರು?
- ಶಿವರಾಜ ತಂಗಡಗಿ (ಕನಕಗಿರಿ, ದಲಿತ – ಬೋವಿ)
ರಾಯಚೂರು ಜಿಲ್ಲೆಯಿಂದ ಯಾರು?
- ಹಂಪನ ಗೌಡ ಬದರ್ಲಿ (ಸಿಂಧನೂರು, ಲಿಂಗಾಯತ)
ಕಲಬುರಗಿ / ಯಾದಗಿರಿ ಜಿಲ್ಲೆಯಿಂದ ಯಾರು?
- ಪ್ರಿಯಾಂಕ್ ಖರ್ಗೆ (ಚಿತ್ತಾಪುರ, ದಲಿತ ಬಲಗೈ)
- ಖನೀಜಾ ಫಾತಿಮಾ (ಕಲಬುರಗಿ ಉತ್ತರ, ಮುಸ್ಲಿಂ)
- ಅಜಯ್ ಸಿಂಗ್ (ಜೇವರ್ಗಿ, ರಜಪೂತ)
ಬೀದರ್ ಜಿಲ್ಲೆಯಿಂದ ಯಾರು?
- ಈಶ್ವರ್ ಖಂಡ್ರೆ (ಬಾಲ್ಕಿ, ಲಿಂಗಾಯತ)
ಈ ಲಿಸ್ಟ್ ಪ್ರಸ್ತುತ ಸಂಭವನೀಯವಾಗಿದ್ದು, ಅಂತಿಮ ನಿರ್ಧಾರ ಹೈಕಮಾಂಡ್ ಮತ್ತು ಡಿ.ಕೆ. ಶಿವಕುಮಾರ್ ಅವರದ್ದಾಗಿರುತ್ತದೆ. ಮೊದಲ ಹಂತದಲ್ಲಿ 8-10 ಸಚಿವರು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಹೆಚ್ಚಿದೆ.