ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ: 16ನೇ ಪಾಯಿಂಟ್‌‌ನಲ್ಲೂ ಸಿಗುತ್ತಾ ಅಸ್ಥಿಪಂಜರ?

Untitled design 2025 08 09t162834.631

ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳ ಹೂತಿಟ್ಟ ಪ್ರಕರಣ ಸಂಬಂಧ ಎಸ್ಐಟಿ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಅನಾಮಿಕ ತೋರಿಸಿರುವ 12 ಪಾಯಿಂಟ್‌ಗಳಲ್ಲಿ ಈಗಾಗಲೇ ಶೋಧ ಕಾರ್ಯ ಪೂರ್ಣಗೊಂಡಿದೆ. ಆದರೆ ಈವರೆಗೂ ಅನಾಮಿಕ ತೋರಿಸಿದ್ದ ಸ್ಪಾಟ್‌ಗಳಲ್ಲಿ ಆಪರೇಷನ್ ಫೇಲ್ ಆಗಿದ್ದು, ಇದೀಗ ಅಸ್ಥಿಪಂಜರ ಕೇಸ್‌‌ಗೆ  ಕ್ಲೈಮ್ಯಾಕ್ಸ್ ಸಿಕ್ಕಿದೆ.

ಸ್ಪಾಟ್ ನಂಬರ್ 16ರಲ್ಲಿ ಈ ಕೇಸ್‌‌ಗೆ ಬಿಗ್ ಟ್ವಿಸ್ಟ್ ಸಿಗುವ ಸಾಧ್ಯತೆಯಿದೆ. ಧರ್ಮಸ್ಥಳದ ಬಾಹುಬಲಿ ಬೆಟ್ಟದಲ್ಲಿ ಉತ್ಖನನ ಕಾರ್ಯ ನಡೆಯುತ್ತಿದ್ದು, ದಶಕಗಳ ಹಿಂದಿನ ಅಸ್ಥಿಪಂಜರ ರಹಸ್ಯ ಬಾಹುಬಲಿ ಬೆಟ್ಟದಲ್ಲಿ ಅಡಗಿದೆಯಾ. ಬಾಹುಬಲಿ ಪ್ರತಿಮೆ ಇರುವ ರತ್ನಗಿರಿ ಬೆಟ್ಟದಲ್ಲೇ ಯಾಕೆ ಶೋಧ ನಡೆಸಲಾಗುತ್ತದೆ?. ಆ ಬೆಟ್ಟದಲ್ಲಿ ಅನಾಮಿಕ ಸ್ಪಾಟ್ ನಂಬರ್ 16 ತೋರಿಸಿರೋದು ಯಾಕೆ?. ಇವತ್ತಿನ ಪಾಯಿಂಟ್ ನಂಬರ್ 16ರಲ್ಲಿ ಮೂಳೆಗಳ ರಾಶಿ ಇದೆಯಾ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿದೆ.

ಆರಂಭದಲ್ಲಿ ಮಾರ್ಕ್ ಮಾಡಿದ್ದ 1ರಿಂದ 12 ಸ್ಪಾಟ್‌ಗಳಲ್ಲಿ ಎಸ್ಐಟಿಗೆ ಏನೂ ಸಿಕ್ಕಿಲ್ಲ. ಕೇವಲ ಪಾಯಿಂಟ್ ನಂಬರ್ 6ರಲ್ಲಿ ಮಾತ್ರ ಮೂಳೆಗಳು ಪತ್ತೆಯಾಗಿತ್ತು. ಆದ್ರೆ, ಆ ಮೂಳೆಗಳು ಹೆಣ್ಣಿನ ಕಳೇಬರವಲ್ಲ, ಬದಲಾಗಿ ಗಂಡಸಿನದ್ದಾಗಿದೆ ಎಂದು ಬಯಲಾಗಿತ್ತು. ಸದ್ಯ ಸ್ಪಾಟ್ ನಂಬರ್ 6ರ ಮೂಳೆಗಳನ್ನು SITಯು FSL ಗೆ ರವಾನಿಸಿದ್ದು, ಉಳಿದ 13ನೇ ಸ್ಪಾಟ್ ಪಕ್ಕದಲ್ಲೇ ಡ್ಯಾಂ, ವಿದ್ಯುತ್ ಟ್ರಾನ್ಸ್ ಫಾರ್ಮ್ ಇರೋದ್ರಿಂದ ಎಸ್ಐಟಿ ಶೋಧ ಕಾರ್ಯ ನಡೆಸಿಲ್ಲ. ಮಣ್ಣಿನಲ್ಲಿ ತೇವಾಂಶ ಇದ್ದ ಕಾರಣ GPR ಮೂಲಕ ಶೋಧ ಕಾರ್ಯ ನಡೆಸುವುದು ಕಷ್ಟಸಾಧ್ಯವಾಗಿದ್ದು, ಇನ್ನು ಉಳಿದ ಸ್ಪಾಟ್ ನಂಬರ್ 14, 15, 15(A), 15(B), 15(C)ನಲ್ಲೂ ಏನೂ ಇಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಅಲ್ಲದೇ ಅನಾಮಿಕ ತೋರಿಸಿರುವ 16ರ ಶೋಧ ಕಾರ್ಯ ನಡೆಸುತ್ತಿರುವುದು ಭಾರೀ ಕುತೂಹಲ ಸೃಷ್ಟಿಸಿದೆ. 16ರಲ್ಲೂ ಮೂಳೆ ಸಿಗದೇ ಇದ್ದರೆ ಮತ್ತೊಂದು ಸ್ಪಾಟ್‌‌ನಲ್ಲಿ ಉತ್ಖನನ ನಡೆಸುವ ಸಾಧ್ಯತೆಯಿದೆ.

Exit mobile version