ಅಂಬೇಡ್ಕರ್ ನಾಮಫಲಕಕ್ಕೆ ಸಗಣಿ ಬಳಿದ ಆರೋಪಿ ಬಂಧನ

ಕೊ (4)

ದಾವಣಗೆರೆ: ಜಿಲ್ಲೆಯ ಜಗಳೂರು ತಾಲೂಕಿನ ಚಿಕ್ಕಮಲ್ಲನ ಹೊಳೆ ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ನಾಮಫಲಕಕ್ಕೆ ಸಗಣಿ ಎರಚಿ ಅಪವಿತ್ರಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿಯನ್ನು ಅದೇ ಗ್ರಾಮದ ನಿವಾಸಿ ದಿನೇಶ್ (40) ಎಂದು ಗುರುತಿಸಲಾಗಿದೆ. ಆರೋಪಿಯು ಕಳೆದ ಜೂನ್ 28ರಂದು ರಾತ್ರಿ ಗ್ರಾಮದ ಅಂಬೇಡ್ಕರ್ ನಾಮಫಲಕದ ಮೇಲೆ ಸಗಣಿ ಎರಚಿ ಅವಮಾನ ಮಾಡಿದ್ದಾನೆ ಎನ್ನುವ ಆರೋಪ ಕೇಳಿಬಂದಿತ್ತು. ಘಟನೆ ಬೆಳಕಿಗೆ ಬಂದ ಬಳಿಕ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.

ಪ್ರಕರಣ ಸಂಬಂಧ ಸ್ಥಳೀಯರ ದೂರಿನ ಮೇರೆಗೆ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಆರಂಭಿಸಿದ ಪೊಲೀಸರು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ, ಸಿಸಿಟಿವಿ ದೃಶ್ಯಗಳು ಹಾಗೂ ಇತರ ಮಾಹಿತಿ ಆಧರಿಸಿ ಆರೋಪಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಕ್ರಮ ಕೈಗೊಂಡಿದ್ದಾರೆ.

ಗಾಂಜಾ ವ್ಯಸನಿ ಮೊಮ್ಮಗನಿಂದ ಅಜ್ಜಿಯ ಭೀಕರ ಹತ್ಯೆ: ಆರೋಪಿಗೆ ಕಾಲಿಗೆ ಗುಂಡೇಟು

ಶಿವಮೊಗ್ಗ: ಗಾಂಜಾ ಸೇವನೆ ಬಗ್ಗೆ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದ ಅಜ್ಜಿಯನ್ನು ಮೊಮ್ಮಗನೇ ಹತ್ಯೆ ಮಾಡಿದ ಹೃದಯವಿದ್ರಾವಕ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ. ಅಜ್ಜಿಯನ್ನು ಮೊಮ್ಮಗನ ಕಾಲಿಗೆ ಪೊಲೀಸರು ಗಂಡೇಟು ನೀಡಿದ್ದಾರೆ..

ಮೃತ ವೃದ್ಧೆ ಸುಶೀಲಮ್ಮ (65) ಎಂದು ಗುರುತಿಸಲಾಗಿದ್ದು, ಆರೋಪಿ ಅವರೇ ಮೊಮ್ಮಗ ಕಿಶೋರ್ (25) ಎಂದು ಪೊಲೀಸರು ತಿಳಿಸಿದ್ದಾರೆ. ಗಾಂಜಾ ಸೇವನೆ ಚಟವಾಗಿದ್ದ ಕಿಶೋರ್, ತನ್ನ ಈ ಚಟದಿಂದ ಮನೆಯಲ್ಲಿ ಆಗಾಗ್ಗೆ ಕಿರಿಕಿರಿ ಮತ್ತು ಗಲಾಟೆ ಮಾಡುತ್ತಿದ್ದ. ಅವನ ಈ ಗಲಾಟೆ ಸಹಿಸಲಾರದೆ, ಮನೆಯ ಹಿರಿಯರಾದ ಸುಶೀಲಮ್ಮ ಅವರು ಮೊಮ್ಮಗನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಮುಂದಾಗಿದ್ದರು.

ಘಟನೆಯ ದಿನ, ಸುಶೀಲಮ್ಮ ಅವರು ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಲು ನಿರ್ಧರಿಸಿದ್ದರು. ತಾನು ಪೊಲೀಸರನ್ನು ಭೇಟಿಯಾಗಲು ಮನೆಯಿಂದ ಹೊರಟಿದ್ದನ್ನು ಗಮನಿಸಿದ ಕಿಶೋರ್, ಅಜ್ಜಿಯನ್ನು ತಡೆಯಲು ಪ್ರಯತ್ನಿಸಿದ. ವಿಷಯ ತಿಳಿದು ಬೆಚ್ಚಿಬಿದ್ದ ಕಿಶೋರ್, ಅಜ್ಜಿಯನ್ನು ತಡೆಯುವುದರ ಬದಲು ಹತ್ಯೆ ಮಾಡಲು ಮುಂದಾಗಿದ್ದ

ಸುಶೀಲಮ್ಮ ಅವರು ಮನೆಯ ಹೊಸ್ತಿಲಲ್ಲಿ ನಿಲ್ಲುತ್ತಿದ್ದಂತೆಯೇ, ಕಿಶೋರ್ ಅವರನ್ನು ಹಿಂದಿನಿಂದ ಎಳೆದು ಕೆಳಗೆ ಬೀಳಿಸಿದ್ದಾನೆ. ಮತ್ತು ಆ ಕ್ಷಣವೇ, ಸಮೀಪದಲ್ಲಿದ್ದ ಸೈಜುಗಲ್ಲನ್ನು ಎತ್ತಿಕೊಂಡು ಅಜ್ಜಿಯ ತಲೆಯ ಮೇಲೆ ಬಲವಾಗಿ ಎತ್ತಿ ಹಾಕಿದ್ದಾನೆ. ಈ ದಾಳಿಗೆ ಸುಶೀಲಮ್ಮ ತೀವ್ರವಾಗಿ ಗಾಯಗೊಂಡು, ಸ್ಥಳದಲ್ಲೇ ಕುಸಿದು ಬಿದ್ದರು. ಸ್ಥಳಿಯರು ತಕ್ಷಣ ಸ್ಥಳಕ್ಕೆ ಆಗಮಿಸಿ ವೃದ್ಧೆಯನ್ನು ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದರೂ, ಅಷ್ಟರಲ್ಲೇ ಅವರು ಮೃತಪಟ್ಟಿದ್ದರು.

ಕಿಶೋರ್ ವಿರುದ್ಧ ಈ ಹಿಂದೆಯೂ ಸುಶೀಲಮ್ಮ ಅವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕಂಪ್ಲೇಂಟ್ ನೀಡಿದ್ದರು.  ಆ ಬಾರಿ ಪೊಲೀಸರು ಎಚ್ಚರಿಕೆ ನೀಡಿ ಕಳುಹಿಸಿದ್ದರು. 

ಕಿಶೋರ್ ಗಾಂಜಾ ವ್ಯಸನಿಯಾಗಿದ್ದು, ಮನೆಯಲ್ಲಿ ಯಾವುದೇ ಕೆಲಸ ಮಾಡದೆ, ಚಟಕ್ಕಾಗಿ ಪದೇ ಪದೇ ಮನೆಯವರ ಬಳಿ ಹಣ ಕೇಳುತ್ತಿದ್ದ. ಅವನ ಈ ವರ್ತನೆಯಿಂದ ಬೇಸತ್ತು, ಸುಶೀಲಮ್ಮ ಅವರು ಅವನಿಗೆ ಬುದ್ಧಿವಾದ ಮಾಡುತ್ತಿದ್ದು, ಕೊನೆಗೆ ಪೊಲೀಸರ ಸಹಾಯ ಪಡೆಯಲು ನಿರ್ಧರಿಸಿದ್ದರು.

ಘಟನಾ ಸ್ಥಳಕ್ಕೆ ದೊಡ್ಡಪೇಟೆ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಪೊಲೀಸರು ಮಹಜರು ನಡೆಸಿ, ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಅಲ್ಲದೆ, ಆರೋಪಿ ಕಿಶೋರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರು ಈ ಪ್ರಕರಣವನ್ನು ಕೊಲೆಯ ಪ್ರಕರಣವಾಗಿ ದಾಖಲಿಸಿಕೊಂಡು, ತನಿಖೆ ಮುಂದುವರೆಸಿದ್ದಾರೆ.

Exit mobile version