ಮಂಡ್ಯ ಜಿಲ್ಲೆಯ ಐತಿಹಾಸಿಕ ನಗರಿ ಶ್ರೀರಂಗಪಟ್ಟಣದಲ್ಲಿ ಇಂದು ಹನುಮ ಮಾಲಾಧಾರಿಗಳ ಬೃಹದಾಕಾರದ ಸಂಕೀರ್ತನಾ ಯಾತ್ರೆಯ ನಡೆಯುವ ವೇಳೆ ನೂಕುನುಗ್ಗಲು ನಡೆದಿದೆ.ಯಾತ್ರೆಯಲ್ಲಿ ಭಾಗವಹಿಸಿದ್ದ ಕೆಲವರು ಜಾಮಿಯಾ ಮಸೀದಿ ಪ್ರವೇಶದ್ವಾರದ ಬಳಿ ನುಗ್ಗಲು ಯತ್ನಿಸಿದ ನಡುವೆ, ಪೊಲೀಸರು ಅವರನ್ನ ತಡಿಯಲು ಯತ್ನಿಸಿದರು ಈ ವೇಳೆ ಸ್ಥಳದಲ್ಲಿ ತಳ್ಳಾಟ-ನೂಕಾಟವಾಗಿದೆ.
ಯಾತ್ರೆಯ ಹಿನ್ನೆಲೆ ಹಾಗೂ ಉದ್ದೇಶ
ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಆಯೋಜಿಸಲ್ಪಟ್ಟ ಈ ಸಂಕೀರ್ತನಾ ಯಾತ್ರೆಯು ‘ಮೂಡಲ ಬಾಗಿಲು ಶ್ರೀ ಆಂಜನೇಯಸ್ವಾಮಿ ದೇಗುಲ’ ಮರು ಸ್ಥಾಪನೆಯ ಸಂಕಲ್ಪದೊಂದಿಗೆ ನಡೆದಿತ್ತು. ಯಾತ್ರೆಯ ಮಾರ್ಗವು ನಿಮಿಷಾಂಬ ದೇಗುಲದಿಂದ ಆರಂಭಗೊಂಡು, ಜಾಮಿಯಾ ಮಸೀದಿ ಮುಂಭಾಗದ ರಂಗನಾಥಸ್ವಾಮಿ ದೇಗುಲದವರೆಗೆ ಇತ್ತು. ಸ್ಥಳೀಯ ಕೆಲವು ಹಿಂದೂ ಸಂಸ್ಥೆಗಳು ಹಾಗೂ ಭಕ್ತರು ಜಾಮಿಯಾ ಮಸೀದಿ ಸ್ಥಳದಲ್ಲಿ ಹಿಂದೆ ‘ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಸ್ಥಾನ’ ಇತ್ತು ಎಂದು ದೃಢವಾಗಿ ನಂಬುತ್ತಾರೆ. 18ನೇ ಶತಮಾನದಲ್ಲಿ ಟಿಪ್ಪು ಸುಲ್ತಾನನ ಆಳ್ವಿಕೆಯಲ್ಲಿ ಈ ದೇವಾಲಯವನ್ನು ಕೆಡವಲಾಯಿತು ಹಾಗೂ ಅದೇ ಸ್ಥಳದಲ್ಲಿ ಜಾಮಿಯಾ ಮಸೀದಿ ನಿರ್ಮಾಣವಾಗಿದೆ ಎಂದು ಜನರು ಆರೋಪ ಮಾಡುತ್ತಾರೆ.
ಯಾತ್ರೆಯು ಭಕ್ತಿಪೂರ್ವಕವಾಗಿ ಆರಂಭವಾಗಿದ್ದರೂ, ಜಾಮಿಯಾ ಮಸೀದಿ ಸಮೀಪಿಸಿದಂತೆ, ಯಾತ್ರೆಯಲ್ಲಿ ಭಾಗವಹಿಸಿದ್ದ ಕೆಲವರು ಮಸೀದಿ ಪ್ರವೇಶದ್ವಾರದ ಕಡೆಗೆ ನುಗ್ಗಲು ಪ್ರಯತ್ನಿಸಿದರು. “ಜಾಮಿಯಾ ಮಸೀದಿಯಲ್ಲಿರುವವನು ಹನುಮಂತ” ಎಂಬ ಘೋಷಣೆಗಳನ್ನು ಕೂಗಿದ್ದರು ಎಂದು ಸ್ಥಳಿಯರು ಹೇಳಿದ್ದಾರೆ. ಮಸೀದಿ ಆವರಣವನ್ನು ರಕ್ಷಿಸಲು ಮುನ್ನೆಚ್ಚರಿಕೆ ವ್ಯವಸ್ಥೆ ಮಾಡಿದ್ದ ಪೊಲೀಸರು ತಕ್ಷಣ ಈ ಗುಂಪನ್ನು ತಡೆಯಲು ಮುಂದಾದರು. ಇದರಿಂದೀಚೆಗೆ ಮಸೀದಿ ಮುಂದೆ ತಳ್ಳಾಟ-ನೂಕಾಟದ ಪರಿಸ್ಥಿತಿ ಉಂಟಾಯಿತು. ಪೊಲೀಸರು ಸಮರ್ಥವಾಗಿ ಹಸ್ತಕ್ಷೇಪ ನಡೆಸಿ, ಯಾತ್ರಿಕರನ್ನು ಮಸೀದಿಯಿಂದ ದೂರವಿರಿಸಿ, ಯಾತ್ರೆ ಮುಂದುವರೆಇ ಎಂದು ಪೊಲೀಸರ ಸೂಚಿಸಿದರು. ಹೀಗಾಗಿ ಸ್ಥಳದಲ್ಲಿ ಸ್ವಲ್ಪ ಸಮಯ ಉದ್ವಿಗ್ನತೆ ಉಂಟಾಗಿ, ಮಾಲಾಧಾರಿಗಳ ನಡುವೆ ನೂಕುನುಗ್ಗಲು ಉಂಟಾಯಿತು.
ಘಟನೆಯ ನಂತರ, ಪೊಲೀಸರು ಸ್ಥಳದಲ್ಲಿನ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದು, ಮಾಲಾಧಾರಿಗಳನ್ನ ಶಾಂತವಾಗಿರುವಂತೆ ಸೂಚಿಸಿದರು. ಯಾತ್ರೆಯನ್ನು ಯೋಜನೆಯಂತೆ ರಂಗನಾಥಸ್ವಾಮಿ ದೇಗುಲದವರೆಗೆ ಮುಗಿಸಲು ಅನುಮತಿ ನೀಡಲಾಯಿತು.
ಈ ಸಂಕೀರ್ತನಾ ಯಾತ್ರೆಗೆ ಮೈಸೂರು, ಕೊಡಗು, ಹಾಸನ, ರಾಮನಗರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಹನುಮ ಭಕ್ತರು ಹಾಗೂ ಮಾಲಾಧಾರಿಗಳು ಬೃಹತ್ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಈ ಘಟನೆಯಲ್ಲಿ ಪೊಲೀಸರ ತ್ವರಿತ ಹಸ್ತಕ್ಷೇಪವು ದೊಡ್ಡ ಗಲಭೆಯನ್ನ ತಡೆಗಟ್ಟಿದೆ.
