ಬಾಳು ಕೊಡ್ತೀನಿ ಎಂದು ವಿಧವೆ ಮಹಿಳೆಯನ್ನು ನಂಬಿಸಿ, ಗರ್ಭಿಣಿ ಮಾಡಿ ಕೈಕೊಟ್ಟ ಯುವಕ

11 (4)

ಚಿಕ್ಕಬಳ್ಳಾಪುರ: ‘ನಿನಗೆ ನಾನು ಬಾಳು ಕೊಡ್ತೀನಿ’ ಎಂದು ನಂಬಿಸಿ, ಒಬ್ಬ ವಿಧವೆಯನ್ನು ಮದುವೆಯಾದ ಯುವಕ, ಅವಳು 8 ತಿಂಗಳ ಗರ್ಭಿಣಿಯಾಗಿದ್ದಾಗಲೇ ಮತ್ತೊಬ್ಬಳನ್ನು ಮದುವೆಯಾದ ಆಘಾತಕರ ಘಟನೆಯೊಂದು ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. 

34 ವರ್ಷದ ಕೀರ್ತಿ ಎ ಎಂಬ ವಿಧವೆ ಮಹಿಳೆ, ತನ್ನ ಗಂಡನನ್ನು ಕಳೆದುಕೊಂಡ ನಂತರ ಮಗಳೊಂದಿಗೆ ನೆಮ್ಮದಿಯ ಜೀವನ ನಡೆಸುತ್ತಿದ್ದಳು. ಕೀರ್ತಿ ಎ ತನ್ನ ಗಂಡನನ್ನು 2022ರಲ್ಲಿ ಕಳೆದುಕೊಂಡ ನಂತರ, ಮಗಳನ್ನು ಸಾಕಲು ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಅಲ್ಲಿಯೇ ಪರಿಚಯವಾದ ಸುನಿಲ್ ಎನ್ ಎಂಬ 33 ವರ್ಷದ ಯುವಕ, ಆಕೆಯನ್ನು ಪ್ರೀತಿಸುವ ನೆಪದಲ್ಲಿ ಆಕೆಯನ್ನು ನಂಬಿಸಿದ್ದ.

ಸುನಿಲ್ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಅಂಬಿಗಾನಹಳ್ಳಿ ನಿವಾಸಿ. ಅವನು ಆಕೆಗೆ ಬಾಳು ಕೊಡುವುದಾಗಿ ಭರವಸೆ ನೀಡಿ, ಮೊದಲು ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡ. ನಂತರ, ಚಿಕ್ಕಬಳ್ಳಾಪುರದ ಸಬ್ ರೆಜಿಸ್ಟರ್ ಕಚೇರಿಯಲ್ಲಿ ಮದುವೆಯನ್ನು ನೋಂದಣಿ ಮಾಡಿಸಿದ್ದ. ಕೀರ್ತಿ ಅವನ ಮಾತುಗಳನ್ನು ನಂಬಿ, ತನ್ನ ಜೀವನವನ್ನು ಅವನೊಂದಿಗೆ ಕಟ್ಟಿಕೊಂಡಳು.

ಮದುವೆಯ ನಂತರ ಕೀರ್ತಿ 8 ತಿಂಗಳ ತುಂಬು ಗರ್ಭೀಣಿಯಾಗಿದ್ದಾಳೆ. ಆದರೆ, ಸುನಿಲ್ ತನ್ನ ಕುಟುಂಬದ ವಿರೋಧವಿದೆ ಎಂಬ ನೆಪವನ್ನು ಹೊಡ್ಡಿ, ಮತ್ತೊರ್ವ ಯುವತಿಯನ್ನು ಮದುವೆಯಾಗಿದ್ದಾನೆ. ಈ ವಿಷಯ ತಿಳಿದ ಕೀರ್ತಿ ನ್ಯಾಯ ಕೇಳಲು ಸುನಿಲ್ ಮನೆಗೆ ಹೋಗಿದ್ದು, ಅಂಬಿಗಾನಹಳ್ಳಿಯಲ್ಲಿರುವ ಅವನ ಮನೆಯಲ್ಲಿ, ಸುನಿಲ್ ನ ತಂದೆ-ತಾಯಿ ಮತ್ತು ಸಂಬಂಧಿಕರು ಆಕೆ ಮೇಲೆ ಹಲ್ಲೆ ನಡೆಸಿದ್ದಾರೆ.

ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ, ಕೀರ್ತಿಯನ್ನು ರಕ್ಷಿಸಿದರು. ಆಕೆಯನ್ನು ಚಿಕ್ಕಬಳ್ಳಾಪುರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಯಿತು. ಈಗ ಆಕೆ ಚಿಕಿತ್ಸೆ ಪಡೆಯುತ್ತಿದ್ದಾಳೆ. ನಂತರ ಕೀರ್ತಿ ಮಾತನಾಡಿದ್ದು, “ನಾನು ಅವನನ್ನು ನಂಬಿದ್ದೆ, ಆದರೆ ಅವನು ನನಗೆ ಮೋಸ ಮಾಡಿದ್ದಾನೆ. ನನ್ನ ಮಗಳು ಮತ್ತು ಇನ್ನು ಬರಬೇಕಾದ ಮಗುವಿಗೆ ನ್ಯಾಯ ಬೇಕು.” ಎಂದು ಕಣ್ಣೀರು ಹಾಕಿದ್ದಾಳೆ.

Exit mobile version