ಬಸ್ ಚಾಲನೆ ಮಾಡುತ್ತಿದ್ದ ವೇಳೆ ಬಿಎಂಟಿಸಿ ಚಾಲಕನಿಗೆ ಹೃದಯಾಘಾತ: ಸ್ಥಳದಲ್ಲೇ ಸಾ*ವು

Untitled design 2026 04 25T181857.290

ಬೆಂಗಳೂರು : ರಾಜ್ಯದಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿವೆ. ಬಿಎಂಟಿಸಿ (BMTC) ಬಸ್ ಚಾಲಕರೊಬ್ಬರು ಕರ್ತವ್ಯದಲ್ಲೇ ಹೃದಯಾಘಾತಕ್ಕೆ ಬಲಿಯಾದ ಘಟನೆ ಬೆಂಗಳೂರಿನ ಹೊರವಲಯದಲ್ಲಿ ಸಂಭವಿಸಿದೆ. ಮೃತರನ್ನು 32 ವರ್ಷದ ರಮೇಶ್ ಎಂದು ಗುರುತಿಸಲಾಗಿದೆ.

ಘಟನೆ ವಿವರ
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಜಿಗಣಿ-ಬೊಮ್ಮಸಂದ್ರ ಮಾರ್ಗದ ಬಳಿ ಈ ದುರಂತ ಸಂಭವಿಸಿದೆ. ಮೃತ ಚಾಲಕ ರಮೇಶ್ (32) ಅವರು ಬಿಎಂಟಿಸಿಯ ಎಲೆಕ್ಟ್ರಿಕ್ ಬಸ್ ಚಾಲಕರಾಗಿದ್ದರು. ಇಂದು ಬೆಳಗ್ಗೆ ಎಂದಿನಂತೆ ಕರ್ತವ್ಯಕ್ಕೆ ತೆರಳಿದ್ದ ಅವರು, ಜಿಗಣಿಯಿಂದ ಬೊಮ್ಮಸಂದ್ರಕ್ಕೆ ಬಸ್ ಚಾಲನೆ ಮಾಡುತ್ತಿದ್ದರು. ಮಾರ್ಗಮಧ್ಯದಲ್ಲಿ ಅವರಿಗೆ ಎದೆನೋವು ಕಾಣಿಸಿಕೊಂಡಿತು. ಕೂಡಲೇ ಪ್ರಜ್ಞಾಪೂರ್ವಕವಾಗಿ ಬಸ್ ಅನ್ನು ರಸ್ತೆಯ ಬದಿಗೆ ನಿಲ್ಲಿಸಿದರು. ಅದಾದ ಕೆಲವೇ ಕ್ಷಣಗಳಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದರು. ಪ್ರಯಾಣಿಕರು ಮತ್ತು ಸ್ಥಳೀಯರು ತಕ್ಷಣ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ, ವೈದ್ಯರು ಅವರನ್ನು ಮೃತಪಟ್ಟಿದ್ದಾಗಿ ತಿಳಿಸಿದರು.

ಸಹೋದ್ಯೋಗಿಗಳ ಪ್ರತಿಭಟನೆ-ಪರಿಹಾರ ಆಗ್ರಹ
ರಮೇಶ್ ಅವರ ದುರ್ಮರಣದ ಸುದ್ದಿ ತಿಳಿದು, ಬಿಎಂಟಿಸಿ ಚಾಲಕರು ಮತ್ತು ಸಿಬ್ಬಂದಿ ತೀವ್ರ ಆಕ್ರೋಶಕ್ಕೊಳಗಾಗಿದ್ದಾರೆ. ಜಿಗಣಿ ಘಟಕ 27 ಡಿಪೋ ಮುಂದೆ ಅವರು ತಮ್ಮ ಬಸ್‌ಗಳನ್ನು ನಿಲ್ಲಿಸಿ ಪ್ರತಿಭಟನೆ ಆರಂಭಿಸಿದ್ದಾರೆ. ಈ ಪ್ರತಿಭಟನೆಯಿಂದಾಗಿ ಜಿಗಣಿ-ಬೊಮ್ಮಸಂದ್ರ ಮಾರ್ಗದಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಪ್ರತಿಭಟನಾಕಾರರು, “ಮೃತನ ಕುಟುಂಬಕ್ಕೆ ಕೂಡಲೇ ತಕ್ಕ ಪರಿಹಾರ ನೀಡಬೇಕು. ಹಿಂದೆ ಬಿಎಂಟಿಸಿಯ ಇನ್ನೊಬ್ಬ ಚಾಲಕ ಮೃತಪಟ್ಟಾಗ ಅವರಿಗೆ ಸೂಕ್ತ ಪರಿಹಾರ ನೀಡಲಾಗಿರಲಿಲ್ಲ. ಆ ತಪ್ಪನ್ನು ಪುನರಾವರ್ತಿಸಬಾರದು” ಎಂದು ಆಗ್ರಹಿಸಿದ್ದಾರೆ.

ತಮ್ಮ ಬೇಡಿಕೆ ಈಡೇರದಿದ್ದಲ್ಲಿ, ಮೃತ ರಮೇಶ್ ಅವರ ಶವವನ್ನೇ ಡಿಪೋ ಮುಂದೆ ತಂದು ನಿಲ್ಲಿಸಿ ತೀವ್ರ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನೂ ಅವರು ನೀಡಿದ್ದಾರೆ. 

ಭೀಕರ ರಸ್ತೆ ಅಪಘಾತ: ಬಿಎಂಟಿಸಿ ಬಸ್ ಹರಿದು ಯುವತಿ ಸ್ಥಳದಲ್ಲೇ ಸಾವು

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ಗಳ ಅಬ್ಬರಕ್ಕೆ ಸಾರ್ವಜನಿಕರು ಬಲಿಯಾಗುತ್ತಿರುವ ಪ್ರಕರಣಗಳ ಸಂಖ್ಯೆ ಮುಂದುವರೆದಿದೆ. ಇಂದು ಭೀಕರ ಅಪಘಾತ ನಡೆದಿದ್ದು, ಯುವತಿಯೊರ್ವಳ ಮೇಲೆ ಬಸ್‌‌ ಹರಿದು ಸಾವನ್ನಪ್ಪಿದ್ದಾರೆ.  ಈ ಅಪಘಾತದಲ್ಲಿ 21 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಶಿರೀಷಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆ ಸಂಜೆ ಸುಮಾರು 4.30 ರ ಸುಮಾರಿಗೆ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಘಟನೆ ಹೇಗೆ ನಡೆಯಿತು?
ಉತ್ತರಹಳ್ಳಿ ನಿವಾಸಿಯಾದ ಶಿರೀಷಾ (21) ಅವರು ತಮ್ಮ ಬೈಕ್‌ನಲ್ಲಿ ಶ್ರೀನಿವಾಸಪುರ ಕ್ರಾಸ್ ಮಾರ್ಗವಾಗಿ ತೆರಳುತ್ತಿದ್ದರು. ಅದೇ ದಿಕ್ಕಿನಲ್ಲಿ ವೇಗವಾಗಿ ಬಂದ ಬಿಎಂಟಿಸಿ ಬಸ್ ಬೈಕ್‌ನ ಹ್ಯಾಂಡಲ್‌ಗೆ ಸಣ್ಣದಾಗಿ ಟಚ್ ಆಗಿದೆ. ಈ ರಭಸಕ್ಕೆ ಬೈಕ್ ನಿಯಂತ್ರಣ ತಪ್ಪಿ ಶಿರೀಷಾ ನೇರವಾಗಿ ರಸ್ತೆಗೆ ಬಿದ್ದರು. ಇದೇ ವೇಳೆ ಬಸ್‌ನ ಹಿಂಬದಿಯ ಚಕ್ರ ಆಕೆಯ ತಲೆ ಮತ್ತು ಎದೆ ಭಾಗದ ಮೇಲೆ ಹರಿದು ಹೋಗಿದೆ. ತೀವ್ರ ರಕ್ತಸ್ರಾವವಾಗಿದ್ದು, ಆಸ್ಪತ್ರೆಗೆ ಕೊಂಡೊಯ್ಯುವಷ್ಟರಲ್ಲೇ ಯುವತಿ ಸಾವನ್ನಪ್ಪಿದ್ದಾರೆ.

ಮೃತೆ ಯಾರು?
ಶಿರೀಷಾ ಅವರು ಉತ್ತರಹಳ್ಳಿ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಅವರು ಸಮೀಪದ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿನಿ ಆಗಿದ್ದರು. ಕುಟುಂಬದಲ್ಲಿ ತಾಯಿ, ತಂದೆ ಮತ್ತು ಒಬ್ಬ ಅಣ್ಣ ಇದ್ದಾರೆ. ಮೃತದೇಹವನ್ನು ಆರ್.ಆರ್. ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಪೊಲೀಸರು ಕುಟುಂಬದವರಿಗೆ ಮಾಹಿತಿ ತಿಳಿಸಿದ್ದಾರೆ.

Exit mobile version