ಬಿಜೆಪಿ ಕಾರ್ಯಕರ್ತ ವಿನಯ್ ಆತ್ಮಹತ್ಯೆ ಪ್ರಕರಣ ತನಿಖೆಯನ್ನ ಪೊಲೀಸರು ಚುರುಕುಗೊಳಿಸಿದ್ದಾರೆ. ಆತ್ಮಹತ್ಯೆ ಸಂಬಂಧ ವಿನಯ್ ಗೆ ಸಂಬಂಧಿಸಿದ ಮೊಬೈಲ್ ಪೋನ್ ಹಾಗೂ ಲ್ಯಾಪ್ ಟಾಪ್ ನ್ನ ಎಫ್ಎಸ್ಎಲ್ ಗೆ ರವಾನಿಸಿದ್ದು, ರಿಟ್ರೀವ್ ಮಾಡಲು ಮುಂದಾಗಿದ್ದಾರೆ. ಪೊಲೀಸ್ ತನಿಖೆಯ ಕಂಪ್ಲೀಟ್ ಸ್ಟೋರಿ ಇಲ್ಲಿದೆ ನೋಡಿ.
ಮಡಿಕೇರಿ ಮೂಲದ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಸಂಬಂಧ ಹೆಣ್ಣೂರು ಪೊಲೀಸರು ತನಿಖೆಯನ್ನ ತೀವ್ರಗೊಳಿಸಿದ್ದಾರೆ. ವಿನಯ್ ಆತ್ಮಹತ್ಯೆಗೆ ನಿಖರ ಕಾರಣ ಪತ್ತೆ ಹಚ್ಚುವ ಸಲುವಾಗಿ ವಿನಯ್ ಬಳಸುತ್ತಿದ್ದ ಮೊಬೈಲ್ ಪೋನ್ ಹಾಗೂ ಲ್ಯಾಪ್ ಟಾಪ್ ನ್ನ ಎಫ್ಎಸ್ಎಲ್ ಗೆ ರವಾನಿಸಲಾಗಿದೆ. ಮೊಬೈಲ್ ಹಾಗೂ ಲ್ಯಾಪ್ ಟಾಪ್ ರಿಟ್ರೀವ್ ಮಾಡಿ ಅದರಲ್ಲಿನ ಡೇಟಾ ಹೊರ ತೆಗೆದು ಆ ಬಳಿಕ ಅಸಲಿ ತನಿಖೆ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ.
ವಿನಯ್ ಆತ್ಮಹತ್ಯೆಗೆ ಇಬ್ಬರು ಶಾಸಕರು ಹಾಗೂ ಕಾಂಗ್ರೆಸ್ ಮುಖಂಡ ತೆನ್ನೀರಾ ಮೈನಾ ಕಿರುಕುಳವೇ ಕಾರಣ ಎಂದು ಆರೋಪಿಸಲಾಗಿದ್ದು, ವಿನಯ್ ಸೋಮಯ್ಯ ಬರೆದ ಡೆತ್ ನೋಟ್ ನಲ್ಲೂ ಕೂಡ ಮೂವರ ಹೆಸರುಗಳನ್ನ ಉಲ್ಲೇಖ ಮಾಡಲಾಗಿತ್ತು. ಅದ್ರೆ ವಿನಯ್ ಡೆತ್ ನೋಟ್ ವಾಟ್ಸಪ್ ನಲ್ಲಿ ಬರೆದಿದ್ದು, ಅದು ಡಿಜಿಟಲ್ ಎವಿಡೇನ್ಸ್ ಆಗಲಿದೆ. ಅದ್ರೆ ಮೊಬೈಲ್ ನಲ್ಲಿನ ಬರಹಗಳನ್ನ ಬರೆದಿದ್ದು ಯಾರು ಅನ್ನೋ ಗೊಂದಲ ಉಂಟಾಗಿದ್ದು, ಅದರ ನಿಖರತೆಯನ್ನ ಪತ್ತೆ ಹಚ್ಚಲು ಡೆತ್ ನೋಟ್ ಕಾಪಿ ಹಾಗೂ ಮೊಬೈಲ್ ನ್ನ ಎಫ್ಎಸ್ಎಲ್ ನಲ್ಲಿ ಪರಿಶೀಲನೆ ನಡೆಸಲು ಮುಂದಾಗಿದ್ದಾರೆ.
ಇನ್ನು ವಿನಯ್ ಆತ್ಮಹತ್ಯೆಗೆ ಶಾಸಕ ಪೊನ್ನಣ್ಣ, ಮಂಥರ್ ಗೌಡ ಹಾಗೂ ತೆನ್ನೀರಾ ಮೈನಾ ಅಂತಾ ಬಿಜೆಪಿ ಮುಖಂಡರು ಆರೋಪಿಸಿ ದೂರು ನೀಡಿದ್ದಾರೆ. ಅದ್ರೆ ಮೂವರ ಪಾತ್ರದ ಬಗ್ಗೆ ಸೂಕ್ತ ಸಾಕ್ಷ್ಯಧಾರಗಳು ಪತ್ತೆಯಾದಲ್ಲಿ ನೋಟಿಸ್ ನೀಡಿ ವಿಚಾರಣೆ ನಡೆಸಲು ಪೊಲೀಸರು ಚಿಂತನೆ ನಡೆಸಿದ್ದಾರೆ. ಅಲ್ಲದೇ ವಿನಯ್ ಬಳಸುತ್ತಿದ್ದ ಪೋನ್ ನಂಬರ್ ಸಿಡಿಆರ್ ಹೊರ ತೆಗೆದು ಪರಿಶೀಲನೆ ನಡೆಸುವ ಕೆಲಸವನ್ನ ಪೊಲೀಸರು ಮಾಡುತ್ತಿದ್ದು, ಆತ್ಮಹತ್ಯೆಗು ಮುನ್ನ ಯಾರ್ಯಾರ ಮಾತಾಡಿದ್ದಾರೆ ಅನ್ನೋ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಸದ್ಯ ಹೆಣ್ಣೂರು ಪೊಲೀಸರು ತೆನ್ನೀರಾ ಮೈನಾ ಮೇಲೆ ಎಫ್ಐಆರ್ ದಾಖಲಿಸಿಕೊಂಡು ವಿನಯ್ ಪೋನ್ ಕರೆಗಳು ಹಾಗೂ ಟವರ್ ಲೋಕೇಷನ್ ವಿಶ್ಲೇಷಣೆ ನಡೆಸಿದ್ದಾರೆ. ಸದ್ಯ ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದು, ಎಫ್ಎಸ್ಎಲ್ ರಿಪೋರ್ಟ್ ಬಂದ ಬಳಿಕವಷ್ಟೆ ಆತ್ಮಹತ್ಯೆಯ ನಿಖರ ವಿಚಾರ ಬೆಳಕಿಗೆ ಬರಬೇಕಿದೆ.
