ರಾಜ್ಯ ಸರ್ಕಾರದ ವಿರುದ್ದ ‌ಜೆಡಿಎಸ್ ಪ್ರತ್ಯೇಕ ಹೋರಾಟ!

ಬಿಜೆಪಿ ಮೈತ್ರಿಯಿದ್ದರೂ ಜೆಡಿಎಸ್ ನಿಂದ ಪ್ರತ್ಯೇಕ ಶಕ್ತಿ ಪ್ರದರ್ಶನಕ್ಕೆ ಪ್ಲಾನ್!

Untitled design 2025 04 01t121822.623

ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಜನಾಕ್ರೋಶ ಯಾತ್ರೆ ಇಂದಿನಿಂದ ಆರಂಭಿಸಿದೆ. ಬಿಜೆಪಿ ಮೈತ್ರಿ ಪಕ್ಷದ ಜೆಡಿಎಸ್‌‌‌ಗೆ ಈ ಜನಾಕ್ರೋಶ ಯಾತ್ರೆಗೆ ಬಿಜೆಪಿ ಆಹ್ವಾನ ನೀಡಿಲ್ಲ. ಹೀಗಾಗಿ ಸರ್ಕಾರದ ವಿರುದ್ಧ ಜೆಡಿಎಸ್ ಕೂಡ ಪ್ರತ್ಯೇಕ ‌ಹೋರಾಟಕ್ಕೆ ಸಜ್ಜಾಗಿದೆ. ರಾಜ್ಯದಲ್ಲಿ ದಿನನಿತ್ಯ ಒಂದಿಲ್ಲೊಂದು ವಸ್ತುಗಳ ದರ ಏರಿಕೆ ಮಾಡ್ತಿರೋ‌ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಹೋರಾಟಕ್ಕೆ ತಂತ್ರ ರೂಪಿಸಿರೋ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ರಾಜ್ಯಾದ್ಯಂತ 15 ಜಿಲ್ಲೆಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಚಿಂತನೆ ನಡೆಸಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ‌ಜನಾಂದೋಲನಕ್ಕೆ ನಿರ್ಧಾರ ಮಾಡಿರೋ ಕುಮಾರಸ್ವಾಮಿ ಶೀಘ್ರದಲ್ಲಿಯೇ ಹೋರಾಟದ ದಿನಾಂಕ ನಿಗದಿ ಮಾಡಲಿದ್ದಾರೆ.

ರಾಜ್ಯ ಸರ್ಕಾರದ ಬೆಲೆ ಏರಿಕೆ, ಮುಸ್ಲಿಂ ಮೀಸಲಾತಿ, ಎಸ್‌ಸಿ, ಎಸ್ಟಿ ಹಣ ದುರ್ಬಳಕೆ ಹಾಗೂ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಜೆಡಿಎಸ್ ಜಿಲ್ಲಾಮಟ್ಟದಲ್ಲಿ ಪ್ರತಿಭಟನೆ ಮೂಲಕ ಹೋರಾಟಕ್ಕೆ ಚಿಂತನೆ ನಡೆಸಿದೆ. ಆರಂಭದಲ್ಲಿ ಹಳೇ ಮೈಸೂರು, ಭಾಗದ ಹದಿನೈದು‌ ಜಿಲ್ಲೆಗಳಲ್ಲಿ ಖುದ್ದು ಹೆಚ್ ಡಿ ಕುಮಾರಸ್ವಾಮಿಯವರೇ ಪ್ರವಾಸ ಕೈಗೊಂಡು ಸರ್ಕಾರದ ವಿರುದ್ಧ ಚಾಟಿ ಬೀಸಲಿದ್ದಾರೆ. ಇದರ ಜೊತೆಗೆ ಪ್ರತಿ ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೂ ಒತ್ತು ನೀಡಲು ಕುಮಾರಸ್ವಾಮಿ ಜೆಡಿಎಸ್ ಮುಖಂಡರಿಗೆ ಸೂಚನೆ ನೀಡಿದ್ದು, ಇತ್ತ ಬೆಂಗಳೂರಿನಲ್ಲಿಯೂ ಜೆಡಿಎಸ್ ಪಕ್ಷದ ಸಂಘಟನೆಗೂ ಹೆಚ್‌ಡಿ ಕುಮಾರಸ್ವಾಮಿ ಒತ್ತು ನೀಡಲಿದ್ದು, ಮುಂಬರುವ ಬಿಬಿಎಂಪಿ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲು ಸೂಚನೆ ನೀಡಿದ್ದಾರೆ.

ರಾಜ್ಯ ಸರ್ಕಾರದ ಜನ ವಿರೋಧಿ ನಡೆಯನ್ನು ಸಮರ್ಥವಾಗಿ ಖಂಡಿಸುವ ಮೂಲಕ ಜನರ ಮನ್ನಣೆ ಪಡೆಯರಿ. ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಿ. ಹೋರಾಟದಲ್ಲಿ ಆದಷ್ಟು ಯುವಕರಿಗೆ ಆದ್ಯತೆ ಕೊಡಿ ಎಂದು ಸೂಚನೆ ನೀಡಿರೋ ಕುಮಾರಸ್ವಾಮಿಯವರ ಹೋರಾಟದ ಸ್ವರೂಪ ಹೇಗಿರಲಿದೆ.

Exit mobile version