ಬೆಂಗಳೂರಿನಲ್ಲಿ ನಕಲಿ ನಂಬರ್ ಪ್ಲೇಟ್ ಬಳಸಿ 1.5 ಕೊಟಿ ರಾಬರಿ

Untitled design (15)

ಬೆಂಗಳೂರು;  ನಕಲಿ ನಂಬರ್ ಪ್ಲೇಟ್ ಬಳಸಿ 1.5 ಕೊಟಿ ನಗದಿನ ಜೊತೆಗೆ 50 ಗ್ರಾಂ ಚಿನ್ನಾಭರಣಗಳನ್ನ ದೋಚಿರುವ ಘಟನೆ ಬೆಂಗಳೂರಿನ ಯಲಹಂಕದಲ್ಲಿ ನಡೆದಿದೆ. ಗಿರಿರಾಜು ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದೆ.

ಗಿರಿರಾಜು ಇತ್ತೀಚೆಗೆ ಜಮೀನು ಖರೀದಿಗಾಗಿ ದೊಡ್ಡ ಮೊತ್ತದ ಹಣವನ್ನು ಮನೆಯಲ್ಲಿ ಇಟ್ಟುಕೊಂಡಿದ್ದರು. ಈ ಹಣವು ಅಡುಗೆ ಮನೆಯಲ್ಲಿ ಒಂದು ಬ್ಯಾಗ್‌ನಲ್ಲಿ ಮುಚ್ಚಿಡಲಾಗಿತ್ತು. ಗಿರಿರಾಜು ಅವರು ಆ ದಿನ ಮನೆಯಿಂದ ಹೊರಗಡೆ ಇದ್ದರು, ಆದರೆ ಅವರ ಕುಟುಂಬಸ್ಥರು ಮನೆಯಲ್ಲಿದ್ದರು.

ಸೆ.21 ರಂದು ಸಂಜೆ ಸುಮಾರು 6 ಗಂಟೆಗೆ, ನಾಲ್ವರು ಯುವಕರು ಇನ್ನೋವಾ ಕಾರಿನಲ್ಲಿ ಬಂದು ಮನೆಯ ಬಾಗಿಲು ಬಡಿದಿದ್ದಾರೆ.ತಮ್ಮನ್ನು ಸರ್ಕಾರಿ ಅಧಿಕಾರಿಗಳು ಎಂದು ಪರಿಚಯಿಸಿಕೊಂಡು, ನಿಮ್ಮ ಮನೆಯಲ್ಲಿ ಹಣ ಇದೆ ಎಂದು ಮಾಹಿತಿ ಬಂದಿದೆ. ನಾವು ಪರಿಶೀಲನೆ ಮಾಡಬೇಕು ಎಂದು ಹೇಳಿದರು. ಕುಟುಂಬಸ್ಥರು ಆಶ್ಚರ್ಯಗೊಂಡಿದ್ದಾರೆ ಆದರೆ ಅವರ ವಾಕ್‌ಚಾತುರ್ಯಕ್ಕೆ ಒಳಗಾಗಿ ಬಾಗಿಲನ್ನು ತೆರೆಯಲುತೆಗೆದಿದ್ದಾರೆ.

ಮನೆಗೆ ನಗ್ಗಿದ ತಕ್ಷಣ, ಆರೋಪಿಗಳು ಕಟ್ಟುನಿಟ್ಟಾಗಿ ನಿಮ್ಮ ಮನೆಯಲ್ಲಿ ಹಣ ಎಲ್ಲಿದೆ ? ಗಿರಿರಾಜು ಅವರು ಎಲ್ಲಿದ್ದಾರೆ ? ಎಂದು ಕೇಳಿದ್ದಾರೆ ಅದಕ್ಕೆ ಕುಟುಂಬಸ್ಥರು ಅವರು ಇಲ್ಲ, ಹಣವೂ ಇಲ್ಲ ಎಂದು ಹೇಳಿದ್ದಾರೆ. ನಂತರ ಆರೋಪಿಗಳು ಅಡುಗೆ ಮನೆಗೆ ಹೋಗಿ ಬ್ಯಾಗ್ ಅನ್ನು ಕಂಡುಹಿಡಿದು ಹಣದ ಜೊತೆಗೆ 20 ಲಕ್ಷ ಬೆಲೆಬಾಳುವ 50 ಗ್ರಾಂ ಚಿನ್ನವನ್ನೂ ದೋಚಿ ಕುಟುಂಬಸ್ಥರಿಗೆ ದಮಕಿ ಹಾಕಿ ಪರಾರಿಯಾಗಿದ್ದಾರೆ.

ಘಟನೆಯ ನಂತರ ಭಯಭೀತರಾದ ಕುಟುಂಬಸ್ಥರು ತಕ್ಷಣ ಯಲಹಂಕ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ನಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಈಗ ಆರೋಪಿಗಳ ಹಿನ್ನೆಲೆಯನ್ನು ತಿಳಿಯಲು ಪರಿಶೀಲನೆ ನಡೆಸಿದ್ದಾರೆ. ನಂತರ ಇದು ಯೋಜಿತ ರಾಬರಿಯಾಗಿದ್ಗಿದು ಆರೋಪಿಗಳನ್ನ ಕೂಡಲೆ ಬಂಧಿಸುತ್ತೇವೆ ಎಂದು ಯಲಹಂಕ ಪೊಲೀಸ್‌ ರಾಜೇಶ್ ಕುಮಾರ್ ತಿಳಿಸಿದ್ದಾರೆ. ಇದು ಒಂದು ಯೋಜಿತ ಗ್ಯಾಂಗ್‌ನ ಕೆಲಸ. ನಾವು ಆರೋಪಿಗಳನ್ನು ಶೀಘ್ರ ಬಂಧಿಸುವ ಖಾತರಿ ನೀಡುತ್ತೇವೆ” ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

Exit mobile version