5 ರೂಪಾಯಿ ಬೋಟಿಗೆ 150 ರೂ.: ಬೆಂಗಳೂರು ಪಬ್‌ಗಳಲ್ಲಿ ಹಣ ದೋಚುವ ಕಲೆಗೆ ಗ್ರಾಹಕ ಶಾಕ್

Untitled design 2026 04 02T152251.998

ಬೆಂಗಳೂರು (ಏಪ್ರಿಲ್ 2): ಸಿಲಿಕಾನ್ ಸಿಟಿ ಬೆಂಗಳೂರಿನ ಪಬ್‌ಗಳು ಯುವಕರ ಮೆಚ್ಚುಗೆ ಗಳಿಸಿವೆ. ಆದರೆ ಇತ್ತೀಚೆಗೆ ಇಂದಿರಾನಗರದ ಪ್ರಸಿದ್ಧ ಪಬ್ ಒಂದರ ಅತಿಯಾದ ದರ ಮತ್ತು ಮೋಸದ ಮೆನು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಎಕ್ಸ್ (ಟ್ವಿಟರ್) ಬಳಕೆದಾರ ಅರುಣ್‌ರಾಜ್ ಪತ್ತಾರ್ ಹಂಚಿಕೊಂಡ ಒಂದು ಪೋಸ್ಟ್ ಕ್ಷಣಾರ್ಧದಲ್ಲಿ ವೈರಲ್ ಆಗಿದ್ದು, ಪಬ್‌ಗಳ ‘ದೋಚುವ ಕಲೆ’ ಈಗ ತೆರೆದುಕೊಂಡಿದೆ.

ಏನಿದು ಪ್ರಕರಣ?

ಅರುಣ್‌ರಾಜ್ ಅವರು ಇಂದಿರಾನಗರದ ಪಬ್ ಒಂದರಲ್ಲಿ ‘ಚಿಲ್ಲಿ ಡಸ್ಟೆಡ್ ಗೋಲ್ಡ್ ಫಿಂಗರ್ಸ್’ ಎಂಬ ಖಾದ್ಯವನ್ನು ಆರ್ಡರ್ ಮಾಡಿದ್ದಾರೆ. ಮೆನುವಿನಲ್ಲಿ ಆಕರ್ಷಕ ಹೆಸರು ಮತ್ತು ಚಿತ್ರ ನೋಡಿ ಅವರು 150 ರೂ. ಪಾವತಿಸಿದ್ದಾರೆ. ಆದರೆ ಅವರಿಗೆ ಬಡಿಸಿದ್ದು ಕೇವಲ 5-6 ಫ್ರೈಯಮ್ಸ್ (ಬೋಟಿ) ಅದೂ ಸಾಮಾನ್ಯ ಅಂಗಡಿಗಳಲ್ಲಿ 5 ರೂ.ಗೆ ಸಿಗುವ ಸರಳ ತಿಂಡಿ.

ಅವರು ಈ ಎರಡು ಚಿತ್ರಗಳನ್ನು ಎಕ್ಸ್‌ನಲ್ಲಿ ಹಂಚಿಕೊಂಡು ವ್ಯಂಗ್ಯವಾಗಿ ಬರೆದಿದ್ದಾರೆ. “ಇದನ್ನೇ ‘ಚಿಲ್ಲಿ ಡಸ್ಟೆಡ್ ಗೋಲ್ಡ್ ಫಿಂಗರ್ಸ್’ ಎಂದು ಕರೆಯುತ್ತಾರೆ. ನಾನು ಆರ್ಡರ್ ಮಾಡಿದಾಗ ತಂದಿದ್ದು ಇದನ್ನೇ. ವಿಶ್ವದಲ್ಲೇ ಮೊದಲ ಬಾರಿಗೆ 150 ರೂ. ಪಾವತಿಸಿ ಫ್ರೈಯಮ್ಸ್ ತಿಂದವನೆಂದು ನನ್ನ ರಕ್ತಸಂಬಂಧದಲ್ಲಿ ದಾಖಲು ಮಾಡಿಕೊಂಡಿದ್ದೇನೆ.” ಎಂದು ಬರೆದುಕೊಂಡಿದ್ದಾನೆ..

ನೆಟ್ಟಿಗರ ಪ್ರತಿಕ್ರಿಯೆ

ಪೋಸ್ಟ್ ವೈರಲ್ ಆದ ಬೆನ್ನಲ್ಲೇ ನೂರಾರು ಕಾಮೆಂಟ್‌‌ಗಳು ಸುರಿಮಳೆಗೈದಿದ್ದಾರೆ. ಕೆಲವರು ತಮ್ಮದೇ ಅನುಭವಗಳನ್ನು ಹಂಚಿಕೊಂಡರೆ, ಇನ್ನು ಕೆಲವರು ಬೆಂಗಳೂರಿನ ಪಬ್ ಸಂಸ್ಕೃತಿಯನ್ನೇ ಟೀಕಿಸಿದರು. ಬ್ಬ ಬಳಕೆದಾರ“ನಾನೊಬ್ಬನೇ ಈ ರೀತಿ ವಂಚನೆಗೆ ಒಳಗಾಗಿಲ್ಲ ಎಂದು ತಿಳಿದು ಸಮಾಧಾನವಾಯಿತು.” ಎಂದಿದ್ದಾನೆ. ಮತ್ತೊಬ್ಬರು“ಸರಳ ವಸ್ತುಗಳಿಗೆ ಅತ್ಯಾಧುನಿಕ ಹೆಸರು ಕೊಟ್ಟು ದುಬಾರಿ ಬೆಲೆಗೆ ಮಾರಾಟ ಮಾಡುವುದು ಇಂದಿನ ಮಾರ್ಕೆಟಿಂಗ್ ತಂತ್ರ.” ಎಂದು ಹೇಳಿಕೊಂಡಿದ್ದಾನೆ.. ಇನ್ನೊಬ್ಬರು“ನಮ್ಮೂರ ಅಂಗಡಿಯಲ್ಲಿ ಇದೇ ಬೋಟಿ 5 ರೂ.ಗೆ ಸಿಗುತ್ತದೆ. ಪಬ್ ಹೋಗಿ ದುಡ್ಡು ವ್ಯರ್ಥ ಮಾಡಿಕೊಳ್ಳಬೇಡಿ.” ಎಂದು ಹೇಳಿದ್ದಾರೆ.

Exit mobile version