ಬೆಂಗಳೂರಿನ ಈ ಪ್ರದೇಶಗಳಲ್ಲಿ ಎರಡು ದಿನ ವಿದ್ಯುತ್​ ವ್ಯತ್ಯಯ

Untitled design 2025 11 25T183054.055

ಬೆಂಗಳೂರು, ನವೆಂಬರ್ 25: ಮುಂದಿನ ಎರಡು ದಿನಗಳು ನಗರದ ಕೆಲವು ಪ್ರಮುಖ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸಂಪೂರ್ಣ ಸ್ಥಗಿತಗೊಳ್ಳಲಿದೆ. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಲಿಮಿಟೆಡ್ (ಕೆಪಿಟಿಸಿಎಲ್) ನಡೆಸುತ್ತಿರುವ ತುರ್ತು ನಿರ್ವಹಣಾ ಕಾಮಗಾರಿಯ ಹಿನ್ನೆಲೆಯಲ್ಲಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಈ ವ್ಯತ್ಯಯಕ್ಕೆ ಕಾರಣವೆಂದು ತಿಳಿಸಿದೆ.

ನವೆಂಬರ್ 26ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 4 ಗಂಟೆವರೆಗೆ

66/11 ಕೆವಿ ಆರ್.ಬಿ.ಐ. ಮತ್ತು ಆಸ್ಟಿನ್ ಟೌನ್ ಉಪಕೇಂದ್ರಗಳ ವ್ಯಾಪ್ತಿಯಲ್ಲಿ ಕಾಮಗಾರಿ ನಡೆಯಲಿದೆ. ಈ ಅವಧಿಯಲ್ಲಿ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ.

ಆರ್.ಬಿ.ಐ. ಲೇಔಟ್, ಕೊತ್ತನೂರುದಿನ್ನೆ, ಜೆ.ಪಿ. ನಗರ 5ನೇ ಹಂತ, ಶ್ರೇಯಸ್ ಕಾಲೋನಿ, ಗೌರವ್ ನಗರ, ನಟರಾಜ ಲೇಔಟ್, ನೃಪತುಂಗ ನಗರ, ಜಂಬೂಸವಾರಿ ದಿಣ್ಣೆ, ಚುಂಚಗಟ್ಟ ಮುಖ್ಯ ರಸ್ತೆ, ಬ್ರಿಗೇಡ್ ಮಿಲೇನಿಯಂ, ಬ್ರಿಗೇಡ್ ಗಾರ್ಡೇನಿಯಾ ಅಪಾರ್ಟ್‌ಮೆಂಟ್‌ಗಳು, ಜಾನ್ಸನ್ ಮಾರ್ಕೆಟ್, ರಿಚ್ಮಂಡ್ ಸರ್ಕಲ್, ನಾರೀಸ್ ರಸ್ತೆ, ಅರಬ್ ಲೈನ್, ವೆಲ್ಲಿಂಗ್ಟನ್ ಸ್ಟ್ರೀಟ್, ಕರ್ಲಿ ಸ್ಟ್ರೀಟ್, ಲಿಯೋನಾರ್ಡ್ ಸ್ಟ್ರೀಟ್, ರಿನಿಯಸ್ ಸ್ಟ್ರೀಟ್, ಸುತ್ತಮುತ್ತಲಿನ ಎಲ್ಲಾ ಸಣ್ಣ-ದೊಡ್ಡ ಬಡಾವಣೆಗಳು

ಈ ಪ್ರದೇಶಗಳಲ್ಲಿ ವಾಣಿಜ್ಯ ಸಂಕೀರ್ಣಗಳು, ಶಾಲಾ-ಕಾಲೇಜುಗಳು, ಆಸ್ಪತ್ರೆಗಳು, ದೊಡ್ಡ ಅಪಾರ್ಟ್‌ಮೆಂಟ್‌ಗಳಿವೆ. ಆದ್ದರಿಂದ ಮಂಗಳವಾರ ಮುಂಜಾನೆಯೇ ಜನರೇಟರ್, ಇನ್ವರ್ಟರ್, ಪವರ್ ಬ್ಯಾಂಕ್ ಚಾರ್ಜ್ ಮಾಡಿಟ್ಟುಕೊಳ್ಳಿ ಎಂದು ಬೆಸ್ಕಾಂ ಸಲಹೆ ನೀಡಿದೆ.

ನವೆಂಬರ್ 27 ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆವರೆಗೆ 

66/11 ಕೆವಿ ಬಿ.ಎಂ.ಟಿ.ಸಿ. ಉಪಕೇಂದ್ರದ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣಾ ಕಾಮಗಾರಿ ನಡೆಯಲಿದ್ದು, ಈ ಬಾರಿ ಬೆಂಗಳೂರಿನ ಹೃದಯ ಭಾಗವೇ ಕತ್ತಲೆಯಲ್ಲಿ ಮುಳುಗಲಿದೆ.

ವಿಲ್ಸನ್ ಗಾರ್ಡನ್, ಹೊಂಬೆಗೌಡ ನಗರ, ಸಂಪಂಗಿರಾಮನಗರ, ಜೆ.ಸಿ. ರಸ್ತೆ, ಶಾಂತಿನಗರ, ಬಿ.ಟಿ.ಎಸ್. ರಸ್ತೆ, ರಿಚ್‌ಮಂಡ್ ಸರ್ಕಲ್, ರೆಸಿಡೆನ್ಸಿ ರೋಡ್, ಸುದಾಮ ನಗರ, ಕೆ.ಎಚ್. ರಸ್ತೆ (ಡಬಲ್ ರೋಡ್), ಸುಬ್ಬಯ್ಯ ಸರ್ಕಲ್, ಸಿದ್ದಯ್ಯ ರಸ್ತೆ,  ಲಾಲ್‌ಬಾಗ್ ರಸ್ತೆ, ನೀರುಮಾರ್ಗ ರಸ್ತೆ, ಈ ಪ್ರದೇಶಗಳ ಸುತ್ತಮುತ್ತಲಿನ ಈ ಭಾಗದಲ್ಲಿ ಸಾವಿರಾರು ಕಚೇರಿಗಳು, ಬಹುರಾಷ್ಟ್ರೀಯ ಕಂಪನಿಗಳು, ಹೋಟೆಲ್‌ಗಳು, ಶಾಪಿಂಗ್ ಮಾಲ್‌ಗಳು, ಖಾಸಗಿ ಆಸ್ಪತ್ರೆಗಳಿವೆ. 7ಗಂಟೆಗಳ ಕಾಲ ವಿದ್ಯುತ್ ಇಲ್ಲದಿರುವುದರಿಂದ ದಿನಚರಿ ತೀವ್ರ ಅಡಚಣೆಯಾಗುವ ಸಾಧ್ಯತೆ ಇದೆ.

ಬೇಸ್ಕಾಂ ಸಾರ್ವಜನಿಕರಿಗೆ ಮನವಿ

ಬೆಸ್ಕಾಂ ಗ್ರಾಹಕರಿಗೆ ಹೀಗಾಗಿ ಸಲಹೆ ನೀಡಿದೆ.

ಪೂರೈಕೆ ಪುನಃಸ್ಥಾಪನೆ ಕಾರ್ಯವು ನಿರ್ಧರಿತ ಸಮಯಕ್ಕಿಂತ ಮೊದಲು ಮುಗಿದರೆ, ವಿದ್ಯುತ್ ಪೂರೈಕೆ ನಾಗರಿಕರಿಗೆ ಮರುಪ್ರಾರಂಭಿಸಲಾಗುವುದು ಎಂದು ಬೆಸ್ಕಾಂ ತಿಳಿಸಿದೆ.

Exit mobile version