ಡಿಸೆಂಬರ್ 6ರಂದು ಬೆಂಗಳೂರಿನ ಅನೇಕ ಪ್ರದೇಶಗಳಲ್ಲಿ ಪವರ್‌ಕಟ್..ಎಲ್ಲೆಲ್ಲಿ?

Untitled design 2025 12 04T202449.930

ಬೆಂಗಳೂರು, ಡಿ.4: ಕರ್ನಾಟಕ ಪವರ್‌ ಟ್ರಾನ್ಸ್‌ಮಿಷನ್‌ ಕಾರ್ಪೊರೇಶನ್‌ ಲಿಮಿಟೆಡ್‌ (KPTCL) ವತಿಯಿಂದ ಕೈಗೊಳ್ಳಲಾಗಿರುವ ತುರ್ತು ನಿರ್ವಹಣಾ ಕೆಲಸಗಳ ಹಿನ್ನೆಲೆಯಲ್ಲಿ ನಗರದ ಹಲವು ಭಾಗಗಳಲ್ಲಿ ಡಿಸೆಂಬರ್‌ 6ರಂದು ಶನಿವಾರ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಸುಮಾರು 8 ಗಂಟೆಗಳ ಕಾಲ ಪವರ್‌ಕಟ್‌ ಜಾರಿಯಲ್ಲಿರಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

66/11 ಕೆವಿ ಕಾಡುಗೋಡಿ ಉಪಕೇಂದ್ರ ವ್ಯಾಪ್ತಿಯಲ್ಲಿ ನಡೆಯಲಿರುವ ತಾಂತ್ರಿಕ ಕಾಮಗಾರಿ ಪೂರ್ಣಗೊಳಿಸಲು ವಿದ್ಯುತ್ ಪೂರೈಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಸಾರ್ವಜನಿಕರು ಮುಂಚಿತವಾಗಿ ಅಗತ್ಯ ಸಿದ್ಧತೆ ಮಾಡಿಕೊಂಡಿರಲು ಬೆಸ್ಕಾಂ ಮನವಿ ಮಾಡಿದೆ.

ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳ ಪಟ್ಟಿ

ಕಾಡುಗೋಡಿ ಉಪಕೇಂದ್ರದಿಂದ ವಿದ್ಯುತ್ ಪಡೆಯುವ ವಿವಿಧ ವಸತಿ ಪ್ರದೇಶಗಳು, ವ್ಯಾಪಾರ ಕೇಂದ್ರಗಳು ಹಾಗೂ ಪ್ರಮುಖ ರಸ್ತೆಗಳಲ್ಲೂ ಶನಿವಾರ ವಿದ್ಯುತ್ ಇರುವುದಿಲ್ಲ. ಅವರು ತಿಳಿಸಿರುವ ಪ್ರದೇಶಗಳು ಹೀಗಿವೆ.

ಬೆಳತೂರು, ಅಯ್ಯಪ್ಪ ದೇವಸ್ಥಾನ ಪ್ರದೇಶ, ಕುಂಬೇನ ಅಗ್ರಹಾರ, ಪಟಾಲಮ್ಮ ಲೇಔಟ್, ವಿ.ಎಸ್.ಆರ್. ಲೇಔಟ್, ಕಾಡುಗೋಡಿ, ಚನ್ನಸಂದ್ರ, ಎಫ್‌ಸಿಐ ಗೋದಾಮು, ಸಫಲ್, ಶಂಕರಪುರ, ಸಿದ್ಧಾರ್ಥ ಲೇಔಟ್, ಸಾಯಿ ಆಶ್ರಮ, ಎಚ್‌ಡಿಎಫ್‌ಸಿ ಬ್ಯಾಂಕ್ ಸುತ್ತಮುತ್ತ, ಅಲೆಂಬಿಕ್ ಮತ್ತು ಮಾರ್ವೆಲ್ ಅಪಾರ್ಟ್‌ಮೆಂಟ್‌ಗಳು, ಇಮ್ಮಡಿಹಳ್ಳಿ, ಕೈತೋಟ, ದಿನ್ನೂರು, ಜಿ.ಕೆ. ಲೇಔಟ್, ದಿನ್ನೂರು ಪೊಲೀಸ್‌ ಸ್ಟೇಷನ್‌, ಮೈತ್ರಿ ಲೇಔಟ್, ಸರ್ಕಾರಿ ಪಾಲಿಟೆಕ್ನಿಕ್ ಪ್ರದೇಶ, ಚನ್ನಸಂದ್ರ ಮೇನ್‌ ರೋಡ್, ನಾಗೊಂಡನಹಳ್ಳಿ, ನಾಗರಾಜ್ ಲೇಔಟ್, ದೊಮ್ಮರಪಾಳ್ಯ, ಪ್ರಶಾಂತ್ ಲೇಔಟ್, ಉಪ್ಕರ್ ಲೇಔಟ್, ಪೃಥ್ವಿ ಲೇಔಟ್.

ಇದೇ ರೀತಿ ಸ್ವಾಮಿ ವಿವೇಕಾನಂದ ರಸ್ತೆ, ವೈಟ್‌ಫೀಲ್ಡ್ ಮೇನ್‌ ರೋಡ್, ಇಸಿಸಿ ರಸ್ತೆ, ನಾಯ್ಡು ಲೇಔಟ್, ಇನ್ನರ್ ಸರ್ಕಲ್ ರಸ್ತೆ, ಭುವನೇಶ್ವರಿ ರಸ್ತೆ, ಭೈರಪ್ಪ ಲೇಔಟ್, ವಿನಾಯಕ ಲೇಔಟ್, ರುಸ್ತುಂಜಿ ಲೇಔಟ್, ಪ್ರೆಸ್ಟೀಜ್ ಮೇಬೆರ್ರಿ ಅಪಾರ್ಟ್‌ಮೆಂಟ್, ಆದರ್ಶ ಫಾರ್ಮ್ ಮೆಡೋಸ್, ಬೋರ್‌ವೆಲ್ ರಸ್ತೆ, ಔಟರ್ ಸರ್ಕಲ್, ವಿನಾಯಕನಗರ, ಬ್ರಿಗೇಡ್ ಕಾಸ್ಮೋಪೊಲಿಸ್, ಗೋಯಲ್ ಹರಿಯಾಣಾ ಅಪಾರ್ಟ್‌ಮೆಂಟ್, ವಿಜಯನಗರ, ಗಾಂಧೀಪುರ, ಇಮ್ಮಡಿಹಳ್ಳಿ ಮೇನ್‌ ರೋಡ್, ದೊಬರಪಾಳ್ಯ, ಸುಮಧುರಾ ಅಪಾರ್ಟ್‌ಮೆಂಟ್ ಮತ್ತು ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲೂ ವ್ಯತ್ಯಯ  ಆಗಲಿದೆ.

ಸಹಾಯವಾಣಿ ಸಂಖ್ಯೆಗಳಿಗೆ ದೂರು ದಾಖಲಿಸಿ: ಬೆಸ್ಕಾಂ ಮನವಿ

ವಿದ್ಯುತ್ ವ್ಯತ್ಯಯದ ಅವಧಿಯಲ್ಲಿ ಅಥವಾ ಅದಾದ ನಂತರ ವಿದ್ಯುತ್ ಸಂಬಂಧಿತ ಯಾವುದೇ ಸಮಸ್ಯೆ ಕಂಡುಬಂದಲ್ಲಿ, ಸಾರ್ವಜನಿಕರು ತಕ್ಷಣ 1912 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ದೂರು ಸಲ್ಲಿಸಬಹುದು. 1912 ನಂಬರ್‌ ಲಭ್ಯವಿಲ್ಲದಿದ್ದರೆ, ಪ್ರತ್ಯೇಕ ಜಿಲ್ಲೆಗಳಿಗಾಗಿ ನೀಡಿರುವ ವಾಟ್ಸ್‌ಆಪ್‌ ಸಹಾಯವಾಣಿ ಸಂಖ್ಯೆಗಳ ಮೂಲಕ ದೂರುಗಳನ್ನು ಕಳುಹಿಸಲು ಬೆಸ್ಕಾಂ ನಾಗರಿಕರಿಗೆ ಸೂಚಿಸಿದೆ.

ಪವರ್‌ಕಟ್‌ನಿಂದಾಗಿ ಕೆಲ ಪ್ರದೇಶಗಳಲ್ಲಿ ನೀರಿನ ಪೂರೈಕೆಯ ಮೇಲೂ ಪರಿಣಾಮ ಬೀಳಬಹುದಾದ ಕಾರಣ ಸಾರ್ವಜನಿಕರು ಮುಂಚಿತವಾಗಿ ನೀರು ಸಂಗ್ರಹಣೆ, ಮೊಬೈಲ್‌ ಚಾರ್ಜಿಂಗ್‌, ಇಂಟರ್ನೆಟ್‌ ಬ್ಯಾಕ್‌ಅಪ್‌ ಹಾಗೂ ಅಗತ್ಯ ಉಪಕರಣಗಳ ಬಳಕೆಯ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ.

Exit mobile version