ಚಲಿಸುತ್ತಿದ್ದ ಬೈಕ್‌ನಲ್ಲೇ ಲಿಪ್ ಲಾಕ್: ರೋಡ್ ರೊಮ್ಯಾನ್ಸ್ ಗೆ 4 ಸಾವಿರ ರೂ. ದಂಡ

Untitled design (24)

ಬೆಂಗಳೂರು: ಪಾರ್ಟಿ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕನ ಜಾಲಿ ರೈಡ್ ಕ್ಷಣದಲ್ಲಿ ಬದಲಾಗಿ ದುಬಾರಿ ದಂಡ ಕಟ್ಟಿದ್ದಾನೆ ಬೈಕ್‌ ಸವಾರ. ರಾಗಿಗುಡ್ಡ ಮೆಟ್ರೋ ನಿಲ್ದಾಣದ ಬಳಿ ಹೆಲ್ಮೆಟ್ ಇಲ್ಲದೆ ತ್ರಿಬಲ್ ರೈಡಿಂಗ್ ಮಾಡುತ್ತಿದ್ದ 23 ವರ್ಷದ ಯುವಕನಿಗೆ ಜಯನಗರ ಸಂಚಾರ ಪೊಲೀಸರು 4,000 ರೂಪಾಯಿ ದಂಡ ವಿಧಿಸಿದ್ದಾರೆ. ಹಿಂದೆ ಕುಳಿತ್ತಿದ್ದ ಸ್ನೇಹಿತರಿಬ್ಬರು ಕಿಸ್ಸಿಂಗ್ ಮಾಡುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿ, ಸಾರ್ವಜನಿಕರ ಟೀಕೆಗೆ ಗುರಿಯಾಗಿತ್ತು.

ಘಟನೆಯ ಹಿನ್ನೆಲೆ
ರಸ್ತೆಯಲ್ಲಿ ಬೈಕ್ ಅತಿವೇಗವಾಗಿ ಓಡಿಸುತ್ತಿದ್ದ ಯುವಕನನ್ನು ಪ್ರಯಾಣಿಕರು ವೀಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಈ ವಿಡಿಯೋವನ್ನು ಗಮನಿಸಿದ ಪೊಲೀಸರು ಯುವಕನನ್ನು ಗುರುತಿಸಿ, ಅವನ ಮನೆಗೆ ಹೋಗಿದ್ದಾರೆ. ಆತನ ತಂದೆ ಭದ್ರತಾ ಸಿಬ್ಬಂದಿಯಾಗಿ ಮತ್ತು ತಾಯಿ ಮನೆಗೆಲಸದವರಾಗಿ ಕೆಲಸ ಮಾಡುತ್ತಾರೆ. ಅವನ ತಾಯಿ ಸಾಲ ಮಾಡಿ ಮಗನಿಗೆ ಬೈಕ್ ಕೊಡಿಸಿದ್ದಾರೆ. ಯುವಕ ಮೆಡಿಕಲ್‌ನಲ್ಲಿ ಕೆಲಸ ಮಾಡುತ್ತಿದ್ದು, ತನ್ನ ತಾಯಿಯ ಸಾಲದಿಂದ ಖರೀದಿಸಿದ ಬೈಕ್‌ನಲ್ಲಿ ಸ್ನೇಹಿತರೊಂದಿಗೆ ಜಾಲಿ ರೈಡ್‌ ಮಾಡುತ್ತಿದ್ದ. ಘಟನೆಯ ನಂತರ ಅವನು ಮೊಬೈಲ್ ಸ್ವಿಚ್ ಆಫ್ ಮಾಡಿ ಮೈಸೂರಿಗೆ ಪರಾರಿಯಾಗಿದ್ದಾನೆ ಎನ್ನಲಾಗುತ್ತಿದೆ.

ADVERTISEMENT
ADVERTISEMENT

ಪೊಲೀಸರ ಕ್ರಮ
ಜಯನಗರ ಟ್ರಾಫಿಕ್ ಪೊಲೀಸರು ಯುವಕನನ್ನು ಟ್ರ್ಯಾಕ್ ಮಾಡಿ, ಅವನಿಗೆ 4,000 ರೂಪಾಯಿ ದಂಡವನ್ನು ವಿಧಿಸಿದ್ದಾರೆ. ಹೆಲ್ಮೆಟ್ ಇಲ್ಲದ ಚಾಲನೆ, ತ್ರಿಪಲ್ ರೈಡಿಂಗ್, ಅತಿವೇಗ, ಮತ್ತು ಸಾರ್ವಜನಿಕರಿಗೆ ತೊಂದರೆ ನೀಡಿದ್ದಕ್ಕಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ.ಇಂತಹ ಅಪಾಯಕಾರಿ ಚಟುವಟಿಕೆಗಳು ಜೀವಕ್ಕೆ ಕುತ್ತು ತರಬಹುದು. ಭವಿಷ್ಯದಲ್ಲಿ ಎಚ್ಚರಿಕೆ ವಹಿಸಬೇಕು” ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

 

Exit mobile version