ಹಗಲು ದರೋಡೆಗೆ ಇಳಿದ ಬಿಬಿಎಂಪಿ: ಪಾರ್ಕಿಂಗ್ ಶುಲ್ಕದ ಹೆಸರಲ್ಲಿ ಬರೆ!

Untitled design 2025 04 13t160645.215

ಸಿಲಿಕಾನ್ ಸಿಟಿ ಮಂದಿಗೆ ಪಾಲಿಕೆ ಶಾಕ್ ಮೇಲೆ ಶಾಕ್ ನೀಡುತಿದೆ. ಕಸದ ಮೇಲೆ ತೆರಿಗೆ ಏರಿಕೆ ಮಾಡಿ ಜನರ ಜೇಬಿಗೆ ಕತ್ತರಿ ಹಾಕಿರುವ ಪಾಲಿಕೆ ಇದೀಗಾ ಪಾರ್ಕಿಂಗ್ ದರವನ್ನು ಹೆಚ್ಚಿಸಿದ್ದು ಸಿಲಿಕಾನ್ ಸಿಟಿ ಮಂದಿಗೆ ಗಾಯದ ಮೇಲೆ ಬರೆ ಹಾಕಲು ಸಿದ್ದವಾಗಿದೆ.

ಹಾಲು, ವಿದ್ಯುತ್ ದರ ಏರಿಕೆಯಾಗಿದೆ. ಅಲ್ಲದೇ, ಬೆಂಗಳೂರಿನಲ್ಲಿ ಕಸಕ್ಕೂ ತೆರಿಗೆ ಕಟ್ಟಬೇಕಾಗಿದೆ. ಇದೀಗ, ಬಿಬಿಎಂಪಿ ರಾಜಧಾನಿ ಜನರಿಗೆ ಮತ್ತೊಂದು ಶಾಕ್ ನೀಡಲು ಹೊರಟಿದೆ. ಹೌದು ಮನೆ ಪಾರ್ಕಿಂಗ್ ಸ್ಥಳಕ್ಕೆ ಚದರಡಿ ಲೆಕ್ಕದಲ್ಲಿ ತೆರಿಗೆ ವಿಧಿಸಲು ಬಿಬಿಎಂಪಿ ನಿರ್ಧರಿಸಿದೆ.

20 ಸಾವಿರ ಕೋಟಿ ಬಜೆಟ್ ಮಂಡಿಸಿ ಜನರ ಬಳಿ ವಸೂಲಿಗೆ ಪಾಲಿಕೆ ಇಳಿದ ಹಾಗೇ ಕಾಣುತಿದೆ. ನೂತನ ಯೂನಿಟ್ ಏರಿಯಾ ವಾಲ್ಯೂ ಕರುಡು ಜಾರಿಗೆ ಪಾಲಿಕೆ ಸಿದ್ಧತೆ ನಡೆಸಿದ್ದು ಇದರಿಂದಾಗಿ ದುಪ್ಪಟ್ಟು ಪಾರ್ಕಿಂಗ್ ಶುಲ್ಕ‌ ವಿಧಿಸಲು ಪಾಲಿಕೆ ಮುಂದಾಗಿದೆ. ಈವರೆಗೆ ಆಸ್ತಿ ತೆರಿಗೆಯ 50% ನಷ್ಟು ಪಾರ್ಕಿಂಗ್ ಶುಲ್ಕ ಪವತಿಸುತ್ತಿದ್ದ ತೆರಿಗೆದಾರರು ಹೊಸ ಹೊಸ ಕರುಡು ಪ್ರತಿಯ ಪ್ರಕಾರ ಆಸ್ತಿ ತೆರಿಗೆಯ 50% ಪಾವತಿ ರದ್ದು ಮಾಡಿ ಬದಲಿಗೆ ಪ್ರತಿ ಚದರ ಅಡಿಗೆ ವಸತಿ ಕಟ್ಟಡಗಳಿಗೆ ₹2 ಹಾಗೂ ವಾಣಿಜ್ಯ ಕಟ್ಟಡಗಳಿಗೆ ಪ್ರತಿ ಚದರ ಅಡಿಗೆ ₹3 ನಿಗದಿ‌ಮಾಡಿದ್ದು ಇದರಿಂದಾಗಿ ಬೆಂಗಳೂರಿನ ಮದ್ಯಮ ವರ್ಗ ಹಾಗೂ ತಳ ಮಧ್ಯಮ ವರ್ಗದ ಜನರ ಭಾರೀ ಹೊರೆಯಾಗಲಿದೆ.

ಇನ್ನೂ ಬಿಬಿಎಂಪಿಯ ಹೊಸ ಕರಡಿನ ಮೂಲಕ ಇನ್ಮುಂದೆ ದುಪ್ಪಟ್ಟು ಪಾರ್ಕಿಂಗ್ ದರ ಪಾವತಿಸಬೇಕಾದ ಅನಿವಾರ್ಯತೆ ಎದುರಾಗಿದೆ‌‌. ಒಟ್ಟು 6 ವಲಯಗಳಲ್ಲಿ ವರ್ಗೀಕರಿಸಿ ಆಸ್ತಿ ತೆರಿಗೆ ವಸೂಲಿ ಮಾಡುತ್ತಿರುವ ಪಾಲಿಕೆ A ಇಂದ F ವರೆಗೆ ವಲಯಗಳಲ್ಲಿ ಪ್ರತಿ ಚದರ ಅಡಿಗೆ ವಿವಿಧ ರೀತಿಯ ಆಸ್ತಿ ತೆರಿಗೆ ದರ ನಿಗದಿ ಮಾಡಿದೆ. ಇನ್ನೂ E ಮತ್ತು F ವಲಯದಲ್ಲಿ ನಗರದ ಮಧ್ಯಮ ಹಾಗೂ ತಳ ಮಧ್ಯಮ ವರ್ಗದ ಆಸ್ತಿ ತೆರಿಗೆದಾರರಿದ್ದು. E ವಲಯದಲ್ಲಿ ಪ್ರತಿ ಚದರ ಅಡಿಗೆ ₹1.50 ಆಸ್ತಿ ತೆರಿಗೆ ಇದರ 50% ಪಾರ್ಕಿಂಗ್ ಶುಲ್ಕ ಎಂದರೆ 75 ಪೈಸೆ ಪಾವತಿ ಮಾಡಬೇಕಿತ್ತು. F ವಲಯದಲ್ಲಿ ಪ್ರತಿ ಚದರ ಅಡಿಗೆ ₹1.20 ಆಸ್ತಿ ತೆರಿಗೆ ಇದರ 50% ಪ್ರತಿ ಚದರ ಅಡಿಗೆ ಎಂದರೆ 60 ಪೈಸೆ ಪಾವತಿ ನಿಯಮ ಇತ್ತು ಆದರೆ ಹೊಸ ಕರುಡು ಪ್ರತಿ ಅನುಸಾರ ಇನ್ಮುಂದೆ ಪ್ರತಿ‌ ಚದರ ಅಡಿಗೆ ಸಾರ್ವಜನಿಕರು ₹2 ಪಾವತಿ ಮಾಡಬೆಕಿದ್ದು ಈ ಮೂಲಕ ಜನಸಾಮಾನ್ಯರು ಏಕಾಏಕಿ ₹1.25 ಇಂದ ₹1.40 ವರೆಗೆ ಹೆಚ್ಚುವರಿಯಾಗಿ ಪಾವತಿ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

ಓಟ್ನಲ್ಲಿ ಸಿಲಿಕಾನ್ ಸಿಟಿ ಜೀವನ ದಿನದಿಂದ ದಿನಕ್ಕೆ ದುಬಾರಿಯಾಗುತಿದ್ದು. ಕಾರು ಬೈಕ್ ಇದ್ದವರಿಗೆ ಇಲ್ಲಿಯವರೆಗೆ ಪೆಟ್ರೋಲ್ ಡೀಸೇಲ್ ರೇಟ್ ಚಿಂತೆಯಾಗಿದ್ರೆ ಇದೀಗಾ ಪಾಲಿಕೆಯ ನಿಯಮ ಪಾರ್ಕಿಂಗ್ ಬಗ್ಗೆಯೂ ಚಿಂತಿಸುವ ಹಾಗೆ ಮಾಡಿರೋದಂತು ಸತ್ಯ.

ಚರಣ್ ಮೂಡಬಿದಿರೆ,ಮೆಟ್ರೋ ಬ್ಯೂರೋ ಗ್ಯಾರಂಟಿ ನ್ಯೂಸ್ ಬೆಂಗಳೂರು

 

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..
Exit mobile version