ಬಾರ್‌ನಲ್ಲಿ ₹2 ಲಕ್ಷ ನಗದು, ಮದ್ಯ ಬಾಟಲ್‌ಗಳನ್ನು ದೋಚಿದ ಐನಾತಿ ಕಳ್ಳರು

ಬೆಂಗಳೂರಿನ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ಭಾರೀ ಕಳ್ಳತನ

11 2025 04 25t182054.572

ವರದಿ: ಮೂರ್ತಿ, ಬೀರಯ್ಯನಪಾಳ್ಯ, ಗ್ಯಾರಂಟಿ ನ್ಯೂಸ್, ನೆಲಮಂಗಲ

ಬೆಂಗಳೂರು ಉತ್ತರ ತಾಲೂಕು ವ್ಯಾಪ್ತಿಯ ವೆಂಕಟಾಪುರದಲ್ಲಿ ಬಹಳಷ್ಟು ಜನರು ಸೇರುವ ಕೃಷ್ಣ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಭಾರೀ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ದುಷ್ಕರ್ಮಿಗಳ ತಂಡ, ಬಾರ್‌ನ ಶೆಟರ್ ಮುರಿದು ಒಳನುಗ್ಗಿ ₹2 ಲಕ್ಷಕ್ಕೂ ಹೆಚ್ಚು ನಗದು ಹಾಗೂ ಲಕ್ಷಾಂತರ ರೂ. ಮೌಲ್ಯದ ಬ್ರಾಂಡೆಡ್ ಮದ್ಯ ಬಾಟಲ್‌ಗಳನ್ನು ಎಗರಿಸಿದ್ದಾರೆ.

ಈ ಬಾರ್ ಮತ್ತು ರೆಸ್ಟೋರೆಂಟ್ ಎಂ.ಜಿ. ಶಿವಣ್ಣ ಅವರಿಗೆ ಸೇರಿದ್ದು ಆಗಿದ್ದು, ದುಷ್ಕರ್ಮಿಗಳು ವಿಶೇಷವಾಗಿ ತಂತ್ರಯುಕ್ತವಾಗಿ ಕೃತ್ಯ ಎಸಗಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಘಟನೆ ಬೆಳಗಿನ ಜಾವದ ಸಮಯದಲ್ಲಿ ಸಂಭವಿಸಿರಬಹುದೆಂದು ಶಂಕಿಸಲಾಗಿದೆ.

ಕಳ್ಳರು ಕದ್ದ ಮದ್ಯದ ವಿವರಗಳು ಹೀಗಿವೆ

ಬ್ಲಾಕ್ ಅಂಡ್ ವೈಟ್ ಫುಲ್ ಬಾಟಲ್ – 03
ಬ್ಲಾಕ್ ಅಂಡ್ ವೈಟ್ ಕ್ವಾಟರ್ ಬಾಟಲ್ – 13
ಮ್ಯಾಜಿಕ್ ಮೂಮೆಂಟ್ ಫುಲ್ ಬಾಟಲ್ – 03
ಎಂ ಹೆಚ್ (M.H.) 1 ಲೀಟರ್ ಬಾಟಲ್ – 01
ಸ್ಪಿನ್ ಆಪ್ ಆರೆಂಜ್ – 08 ಬಾಟಲ್‌ಗಳು
ಪಂಚ್ 90ml ಪ್ಯಾಕ್‌ಗಳು – 96
ಓಲ್ಡ್ ಮಂಕ್ 90ml ಪ್ಯಾಕ್‌ಗಳು – 96

ಈ ಎಲ್ಲಾ ಮದ್ಯದ ಬಾಟಲ್‌ಗಳ ಒಟ್ಟು ಮೌಲ್ಯವನ್ನು ಸುಮಾರು ₹70,000 ಎಂದು ಅಂದಾಜಿಸಲಾಗಿದೆ. ಜೊತೆಗೆ ಬಾರ್‌ನಲ್ಲಿದ್ದ ₹2 ಲಕ್ಷ ನಗದು ಸಹ ಕಳ್ಳರು ಕದ್ದಿದ್ದಾರೆ. ಬಾರ್ ಮತ್ತು ರೆಸ್ಟೋರೆಂಟ್ ಎಂ.ಜಿ. ಶಿವಣ್ಣ ಮಾಲಿಕ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

ಪೊಲೀಸರ ತನಿಖೆ ಆರಂಭ

ಈ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಪ್ರಾರಂಭವಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸಿಸಿಟಿವಿ ಫುಟೇಜ್‌ಗಳನ್ನು ಪರಿಶೀಲನೆಗೆ ತೆಗೆದುಕೊಂಡಿದ್ದಾರೆ. ಕಳ್ಳರು ಯಾರಾಗಿರಬಹುದು ಎಂಬ ಬಗ್ಗೆ ಸುಳಿವು ಪತ್ತೆ ಹಚ್ಚಲು ಪೊಲೀಸ್ ತಂಡ ಕಾರ್ಯನಿರತವಾಗಿದೆ.

ಸ್ಥಳೀಯರು ಈ ಕೃತ್ಯದಿಂದ ಅಚ್ಚರಿ ವ್ಯಕ್ತಪಡಿಸುತ್ತಿದ್ದು, ಬಾರ್‌ಗಳಲ್ಲಿ ಸುರಕ್ಷತೆ ವ್ಯವಸ್ಥೆ ಇನ್ನಷ್ಟು ಕಟ್ಟುನಿಟ್ಟಾಗಬೇಕೆಂಬ ಬೇಡಿಕೆ ಕೇಳಿಬಂದಿದೆ.

| Reported by: ಮೂರ್ತಿ ಬೀರಯ್ಯನಪಾಳ್ಯ, ಗ್ಯಾರಂಟಿ ನ್ಯೂಸ್, ನೆಲಮಂಗಲ
Exit mobile version