ಪ್ರೀತಿಸಿದ ಶಿಕ್ಷಕಿ ಕೈಕೊಟ್ಟಿದ್ದಕ್ಕೆ ಆ*ತ್ಮಹ*ತ್ಯೆ ಮಾಡಿಕೊಂಡ ಶಿಕ್ಷಕ

Untitled design 2025 04 18t105203.083

ವರದಿ: ಮೂರ್ತಿ. ಬೀರಯ್ಯನಪಾಳ್ಯ, ಗ್ಯಾರಂಟಿ ನ್ಯೂಸ್, ನೆಲಮಂಗಲ

ಬೆಂಗಳೂರು: ಪ್ರೀತಿಸಿದ ಶಿಕ್ಷಕಿ ಕೈಕೊಟ್ಟ ಕಾರಣ ಶಿಕ್ಷಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಮಾಕಳಿ ಗ್ರಾಮದಲ್ಲಿ ನಡೆದಿದೆ. ಅಕ್ರಮ ಪ್ರೇಮ ಸಂಬಂಧದ ಸಂಕಷ್ಟದ ಮಧ್ಯೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಟ್ಯೂಷನ್ ಸೆಂಟರ್‌ ನಡೆಸುತ್ತಿದ್ದ 35 ವರ್ಷದ ಶಿಕ್ಷಕ ಆನಂದ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾರೆ. ಶಿಕ್ಷಕ ಆನಂದ, ವಿವಾಹಿತ ಶಿಕ್ಷಕಿ ಹೇಮಲತಾರೊಂದಿಗೆ ಕಳೆದ 8 ವರ್ಷಗಳಿಂದ ಅಕ್ರಮ ಪ್ರೇಮ ಸಂಬಂಧದಲ್ಲಿದ್ದರು ಎನ್ನಲಾಗಿದೆ. ಇಬ್ಬರೂ ಸೇರಿ ಮಾಕಳಿಯಲ್ಲಿ ಟ್ಯೂಷನ್ ಸೆಂಟರ್ ಆರಂಭಿಸಿದ್ದರು. ಆದರೆ ಇತ್ತೀಚೆಗೆ ಹೇಮಲತಾ ಮತ್ತೊಬ್ಬನಾದ ನಿರಂಜನ್ ಜೊತೆಗೆ ಹೆಚ್ಚಿನ ಒಡನಾಟ ಹೊಂದಿದ್ದರಿಂದ ಇವರಿಬ್ಬರ ನಡುವೆ ಮನಸ್ತಾಪ ಉಂಟಾಗಿದೆ.

ಆನಂದ ಟ್ಯೂಷನ್ ಸೆಂಟರ್ ಹಣವಷ್ಟೇ ಅಲ್ಲದೆ, ತನ್ನ ಮನೆಯಿಂದಲೂ ಸುಮಾರು 5 ಲಕ್ಷ ರೂ. ನೀಡಿದ್ದರಾಗಿ ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಬ್ಬರ ನಡುವೆ ಗಲಾಟೆ ಶುರುವಾಗಿ, ಹೇಮಲತಾ ತನ್ನ ಪತಿ ತಿಮ್ಮಯ್ಯಗೆ ವಿಷಯ ತಿಳಿಸಿ ಬೆದರಿಕೆ ನೀಡಿದ್ದಾರಂತೆ.

ಡೆತ್ ನೋಟ್, ವಾಟ್ಸಪ್ ಸ್ಟೇಟಸ್ ಮೂಲಕ ಹೇಮಲತಾಳ ಮೇಲಿನ ಆರೋಪ

ಆನಂದ ಆತ್ಮಹತ್ಯೆಗೂ ಮೊದಲು ಡೆತ್ ನೋಟ್ ಬರೆದು, ವಾಟ್ಸಪ್ ಸ್ಟೇಟಸ್‌ನಲ್ಲೂ ಹೇಮಲತಾಳ ಕಿರುಕುಳದ ಬಗ್ಗೆ ಮಾಹಿತಿ ಹಾಕಿದ್ದಾನೆ. ಮಾಕಳಿಯ ಟ್ಯೂಷನ್ ಸೆಂಟರ್‌ನಲ್ಲಿ ಪ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಮೃತದೇಹ ಕೊಡಲಾಗಿದೆ.

ಹೇಮಲತಾ ವಿರುದ್ಧ ಪ್ರಕರಣ ದಾಖಲು

ಘಟನೆ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 108B ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿತ ಶಿಕ್ಷಕಿ ಹೇಮಲತಾರನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಲಾಗುತ್ತಿದೆ.

Exit mobile version