ಬೆಳ್ಳಂಬೆಳಗ್ಗೆ ಭಾರೀ ಅಗ್ನಿ ಅವಘಡ: ಕೆಮಿಕಲ್ ಹಾಗೂ ಆಯಿಲ್ ಸುಟ್ಟು ಭಸ್ಮ

Wrewe

ನೆಲಮಂಗಲ: ಇಂದು ಬೆಳಂಬೆಳಗ್ಗೆ ನೆಲಮಂಗಲದ ಅಡಕಮಾರನಹಳ್ಳಿಯ ಶೆಲ್ ಕಂಪನಿಯ ಆಯಿಲ್ ಗೋದಾಮಿನಲ್ಲಿ ಭಯಾನಕ ಅಗ್ನಿ ಅನಾಹುತ ಸಂಭವಿಸಿದೆ. ಬೆಳಗ್ಗೆ 3 ಗಂಟೆ ಸುಮಾರಿಗೆ ಶಾಟ್ ಸರ್ಕ್ಯೂಟ್‌ನಿಂದ ಬೆಂಕಿ ಉಂಟಾಯಿತು ಎಂದು ಶಂಕಿಸಲಾಗಿದ್ದು, ಗೋದಾಮು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ. ಕೆಮಿಕಲ್ ಹಾಗೂ ಆಯಿಲ್  ಭಸ್ಮವಾಗಿದೆ.

ಗೋದಾಮಿನಲ್ಲಿ ಸಂಪೂರ್ಣ ಬೆಂಕಿ ಹರಡಿದ್ದು, ಸುತ್ತಮುತ್ತಲಿನ ಕೈಗಾರಿಕೆಗಳಿಗೆ ಮತ್ತು ನಿವಾಸಿಗಳಿಗೆ ಬೆಂಕಿ ತಗುಲುವ ಭಯ ಸೃಷ್ಟಿಯಾಯಿತ್ತು. ಗೋದಾಮಿನಿಂದ ಏರಿದ ಕಪ್ಪಾದ ಹೊಗೆಯು ಇಡೀ ಪ್ರದೇಶವನ್ನು ಆವರಿಸಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ. ನೆಲಮಂಗಲ, ಪೀಣ್ಯ, ಯಶವಂತಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ 10ಕ್ಕೂ ಹೆಚ್ಚು ಅಗ್ನಿಶಾಮಕ ತಂಡಗಳು ಬೆಂಕಿ ನಂದಿಸಲು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಈ ಘಟನೆಯಿಂದ ಸ್ಥಳೀಯ ಕೈಗಾರಿಕೆಗಳಿಗೆ ಭಾರೀ ಆರ್ಥಿಕ ನಷ್ಟವಾಗಿದೆ. ಶೆಲ್ ಕಂಪನಿಯ ಗೋದಾಮು ಸಂಪೂರ್ಣವಾಗಿ ನಾಶವಾಗಿದ್ದು, ಇದರಿಂದ ಕಂಪನಿಯ ಪೂರೈಕೆ ಸರಪಳಿಯ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಸುತ್ತಮುತ್ತಲಿನ ಕಾರ್ಖಾನೆಗಳು ತಾತ್ಕಾಲಿಕವಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಿವೆ. ಸ್ಥಳೀಯ ನಿವಾಸಿಗಳು ತಮ್ಮ ಮನೆಗಳನ್ನು ತೊರೆಯುವಂತೆ ಸೂಚನೆ ಪಡೆದಿದ್ದಾರೆ.

Exit mobile version