ಬೆಂಗಳೂರಿನಲ್ಲಿ ಮಳೆ ಅವಾಂತರ: ಮರ ಬಿದ್ದು 2 ಮನೆ, 5 ಕಾರುಗಳಿಗೆ ಹಾನಿ!

Untitled design 2025 09 11t065940.028

ಬೆಂಗಳೂರು: ಬೆಂಗಳೂರಿನ ರಾಜಾಜಿನಗರ 4ನೇ ಬ್ಲಾಕ್‌ನಲ್ಲಿ ಭಾರೀ ಗಾಳಿಮಳೆಯಿಂದಾಗಿ ಬೃಹತ್ ಮರವೊಂದು ಧರೆಗುರುಳಿ, ಚಂದ್ರಮ್ಮ ಮತ್ತು ಪೀಟರ್ ಎಂಬುವರ ಮನೆಗಳ ಮೇಲೆ ಬಿದ್ದಿದೆ. ಈ ಘಟನೆಯಿಂದಾಗಿ ಎರಡು ಮನೆಗಳ ಕಾಂಪೌಂಡ್ ಗೋಡೆ, ಗೇಟ್‌ಗಳಿಗೆ ತೀವ್ರ ಹಾನಿಯಾಗಿದೆ. ಇದರ ಜೊತೆಗೆ, ಐದು ಕಾರುಗಳು, ಒಂದು ಟಾಟಾ ಏಸ್ ವಾಹನ ಮತ್ತು ನಾಲ್ಕು ಬೈಕ್‌ಗಳು ಜಖಂಗೊಂಡಿವೆ. ವಿದ್ಯುತ್ ತಂತಿಗಳ ಮೇಲೆ ಮರ ಬಿದ್ದ ಪರಿಣಾಮ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ಈ ಘಟನೆ ಬೆಳಗಿನ ಜಾವ 3:30ರ ಸುಮಾರಿಗೆ ಸಂಭವಿಸಿದ್ದು, ಚಂದ್ರಮ್ಮ ಮತ್ತು ಪೀಟರ್ ಅವರ ಕುಟುಂಬಗಳು ತೀವ್ರ ತೊಂದರೆಗೆ ಸಿಲುಕಿವೆ. ಮನೆಯಿಂದ ಹೊರಗೆ ಬರಲಾಗದ ಪರಿಸ್ಥಿತಿ ಉಂಟಾಗಿದೆ. ಪೀಟರ್ ಅವರ ಮನೆಗೆ ಚೆನ್ನೈನಿಂದ ಬಂದಿದ್ದ ನೆಂಟರ ಕಾರು ಮನೆಯ ಮುಂಭಾಗದಲ್ಲಿ ನಿಲ್ಲಿಸಲಾಗಿತ್ತು. ಆದರೆ, ಮರ ಬಿದ್ದ ಪರಿಣಾಮ ಆ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ.

ಈ ಘಟನೆಯಿಂದಾಗಿ ರಾಜಾಜಿನಗರದ 4ನೇ ಬ್ಲಾಕ್‌ನಲ್ಲಿ ತಾತ್ಕಾಲಿಕವಾಗಿ ರಸ್ತೆ ಸಂಚಾರವೂ ಸ್ಥಗಿತಗೊಂಡಿದೆ. ಮರದ ಕೊಂಬೆಗಳು ರಸ್ತೆಯಾದ್ಯಂತ ಚೆಲ್ಲಾಪಿಲ್ಲಿಯಾಗಿದ್ದು, ಸಂಚಾರಕ್ಕೆ ಅಡ್ಡಿಯಾಗಿವೆ. ಸ್ಥಳೀಯರು ಈ ಪರಿಸ್ಥಿತಿಯಿಂದ ತೀವ್ರ ತೊಂದರೆಗೆ ಒಳಗಾಗಿದ್ದಾರೆ.

Exit mobile version