ವಾಹನ ಸವಾರರೇ ಗಮನಿಸಿ: ಬೆಂಗಳೂರಿನ ಈ ರಸ್ತೆಯಲ್ಲಿ 60 ದಿನ ವಾಹನ ಸಂಚಾರ ಬಂದ್!

ಬೆಂಗಳೂರಿನ ಈ ರಸ್ತೆಯಲ್ಲಿ 60 ದಿನ ವಾಹನ ಸಂಚಾರ ಬಂದ್

ಬೆಂಗಳೂರು: ಬೆಂಗಳೂರಿನ ವಾಹನ ಸವಾರರೇ ಗಮನಿಸಿ!.. ಇಂದಿನಿಂದ ಅಂದರೆ ಅಕ್ಟೋಬರ್ 05, 2026ರಿಂದ ಮುಂದಿನ 60 ದಿನಗಳ ಕಾಲ ನಗರದ ರೇಸ್ ಕೋರ್ಸ್ ರಸ್ತೆಯಲ್ಲಿ ಮಳೆ ನೀರು ಕಾಲುವೆ ಮತ್ತು ಒಳಚರಂಡಿ ಕಾಮಗಾರಿ ಆರಂಭವಾಗುತ್ತಿರುವ ಹಿನ್ನೆಲೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಸಾರ್ವಜನಿಕರ ಸುಗಮ ಸಂಚಾರ ದೃಷ್ಟಿಯಿಂದ ಪೊಲೀಸ್ ಇಲಾಖೆ ಪರ್ಯಾಯ ಮಾರ್ಗಗಳನ್ನು ಸೂಚಿಸಿದೆ.

ಕಾಮಗಾರಿ ವಿವರ

ಬೆಂಗಳೂರು ನಗರದ ಹೈಗೌಂಡ್ಸ್ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ರೇಸ್ ಕೋರ್ಸ್ ರಸ್ತೆಯ ಮೌರ್ಯ ಜಂಕ್ಷನ್ನಿಂದ ಹರೇಕೃಷ್ಣ ರಸ್ತೆ ಜಂಕ್ಷನ್ವರೆಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವತಿಯಿಂದ ವೈಟ್ ಟಾಪಿಂಗ್ ಕಾಮಗಾರಿ ಪ್ರಗತಿಯಲ್ಲಿದೆ. ಈ ಹಿನ್ನೆಲೆ ಸದರಿ ರಸ್ತೆಯಲ್ಲಿ ಹೊಸದಾಗಿ ಸ್ಟಾರ್ಮ್ ವಾಟರ್ ಡ್ರೈನ್, ಸೀವೇಜ್ ಲೈನ್ ಮತ್ತು ಯುಟಿಲಿಟಿ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ. ಈ ಕಾಮಗಾರಿಯು ದಿನಾಂಕ 05.10.2026ರಿಂದ ಪ್ರಾರಂಭವಾಗಲಿದ್ದು, ಮುಂದಿನ 60 ದಿನಗಳ ಕಾಲ ನಡೆಯಲಿದೆ.

ಸಂಚಾರ ನಿರ್ಬಂಧದ ವಿವರ

ಕಾಮಗಾರಿಯ ಹಿನ್ನೆಲೆಯಲ್ಲಿ ಕೆಳಕಂಡ ಸ್ಥಳಗಳಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಪರ್ಯಾಯ ಮಾರ್ಗಗಳು

ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಪೊಲೀಸ್ ಇಲಾಖೆ ಕೆಳಕಂಡ ಪರ್ಯಾಯ ಮಾರ್ಗಗಳನ್ನು ಸೂಚಿಸಿದೆ.

1. ಸ್ಯಾಂಕಿ ರಸ್ತೆಯಲ್ಲಿ ಕೆ.ಆರ್. ಮಾರ್ಕೆಟ್ ಕಡೆಗೆ ಸಂಚರಿಸುವ ಬಸ್ಗಳು ಹಾಗೂ ಎಚ್ಜಿವಿ ವಾಹನಗಳು: ಬಿ.ಎಂ.ಟಿ.ಸಿ ಬಸ್ಗಳು, ಖಾಸಗಿ ಬಸ್ಗಳು ಹಾಗೂ ಹೆಚ್.ಜಿ.ವಿ. ವಾಹನಗಳು ವಿಂಡ್ಲರ್ ಮ್ಯಾನರ್ನಿಂದ ನೇರವಾಗಿ ಎಲ್.ಆರ್.ಡಿ.ಇ. ಜಂಕ್ಷನ್ ಕಡೆಗೆ ಚಲಿಸಿ, ಎಲ್.ಆರ್.ಡಿ.ಇ. ಜಂಕ್ಷನ್ನಲ್ಲಿ ಬಲತಿರುವು ಪಡೆದು ಬಸವೇಶ್ವರ ಜಂಕ್ಷನ್ ಮುಖಾಂತರ ಸಂಚರಿಸಬೇಕು.

2. ಸ್ಯಾಂಕಿ ರಸ್ತೆಯಲ್ಲಿ ಮೆಜೆಸ್ಟಿಕ್ ಕಡೆಗೆ ಸಂಚರಿಸುವ ವಾಹನಗಳು: ಬಿ.ಎಂ.ಟಿ.ಸಿ ಬಸ್ಗಳು, ಖಾಸಗಿ ಬಸ್ಗಳು ಹಾಗೂ ಹೆಚ್.ಜಿ.ವಿ. ವಾಹನಗಳು ಸೇರಿದಂತೆ ಎಲ್ಲಾ ರೀತಿಯ ವಾಹನಗಳು ಕುಮಾರಕೃಪ ರಸ್ತೆಯ ಮುಖಾಂತರ ಶಿವಾನಂದ ಸರ್ಕಲ್ ತಲುಪಿ ಬಲ ತಿರುವು ಪಡೆದು ಎಸ್.ಸಿ. ರಸ್ತೆಯಲ್ಲಿ ಎಡತಿರುವು ಪಡೆದು ಮೆಜೆಸ್ಟಿಕ್ ಕಡೆಗೆ ಸಂಚರಿಸಬೇಕು.

3. ಓಲ್ಡ್ ಜೆ.ಡಿ.ಎಸ್ ಜಂಕ್ಷನ್ನಿಂದ ಟ್ರಿಲೈಟ್ ಜಂಕ್ಷನ್ ಕಡೆಗೆ ಸಂಚರಿಸುವ ವಾಹನಗಳು: ಓಲ್ಡ್ ಜೆ.ಡಿ.ಎಸ್ ಜಂಕ್ಷನ್ನಲ್ಲಿ ಎಡಭಾಗದ ರಸ್ತೆಯಲ್ಲಿ ಟ್ರಿಲೈಟ್ ಜಂಕ್ಷನ್ ಕಡೆಗೆ ಮತ್ತು ರೆವ್ಯೂ ಜಂಕ್ಷನ್ನಲ್ಲಿ ಎಡತಿರುವು ಪಡೆದು ಕುಮಾರ ಕೃಪ ರಸ್ತೆಯ ಮೂಲಕ ಶಿವಾನಂದ ಜಂಕ್ಷನ್ ಕಡೆಗೆ ಸಂಚರಿಸಬಹುದು.

4. ಟ್ರಿಲೈಟ್ ಜಂಕ್ಷನ್ನಿಂದ ಮೌರ್ಯ ಜಂಕ್ಷನ್ ಕಡೆಗೆ ಹೋಗುವ ವಾಹನಗಳು: ಎಲ್ಲಾ ತರದ ವಾಹನಗಳು ಟ್ರಿಲೈಟ್ ಜಂಕ್ಷನ್ನಿಂದ ಶಿವಾನಂದ ಪ್ರೈಓವರ್ ಮೇಲೆ ನೇರವಾಗಿ ಚಲಿಸುವ ಮೂಲಕ ನೆಹರು ಸರ್ಕಲ್ನಿಂದ ಎಸ್.ಸಿ. ರಸ್ತೆಯನ್ನು ತಲುಪಿ ಮೆಜೆಸ್ಟಿಕ್ ಕಡೆಗೆ ಸಂಚರಿಸಬಹುದು.

ಸಾರ್ವಜನಿಕರಿಗೆ ಮನವಿ

ಸಾರ್ವಜನಿಕರ ಸುಗಮ ಸಂಚಾರದ ದೃಷ್ಟಿಯಿಂದ ಕೈಗೊಂಡಿರುವ ಈ ವ್ಯವಸ್ಥೆಯು ದಿನಾಂಕ 05.10.2026ರಿಂದ ಮುಂದಿನ 60 ದಿನಗಳ ಕಾಲ ಜಾರಿಯಲ್ಲಿರಲಿದೆ. ಸಂಚಾರ ನಿರ್ಬಂಧದ ಸಮಯದಲ್ಲಿ ವಾಹನ ಸವಾರರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಮತ್ತು ಸಂಚಾರ ಪೊಲೀಸರ ಸೂಚನೆಗಳನ್ನು ಪಾಲಿಸುವಂತೆ ಬೆಂಗಳೂರು ಸಂಚಾರ ಪೊಲೀಸ್ ಇಲಾಖೆ ಮನವಿ ಮಾಡಿದೆ. ಅಗತ್ಯವಿದ್ದರೆ ಮುಂಚಿತವಾಗಿ ಹೊರಡುವ ಮೂಲಕ ಸಮಯ ಉಳಿಸಿಕೊಳ್ಳಬಹುದು. ಕಾಮಗಾರಿಯಿಂದ ಆಗುವ ತಾತ್ಕಾಲಿಕ ಅಸೌಕರ್ಯಕ್ಕೆ ಸಾರ್ವಜನಿಕರು ಸಹಕರಿಸಬೇಕೆಂದು ಕೋರಲಾಗಿದೆ.

Exit mobile version