ಮೆಟ್ರೋ ಪ್ರಯಾಣಿಕರಿಗೆ ಮತ್ತೊಂದು ಶಾಕ್‌: ಫೆಬ್ರವರಿ 9ರಿಂದ ‘ನಮ್ಮ ಮೆಟ್ರೋ’ ಟಿಕೆಟ್ ದರ ಏರಿಕೆ

Untitled design 2026 02 05T110444.626

ಬೆಂಗಳೂರು: ಸಿಲಿಕಾನ್ ಸಿಟಿಯ ಸಂಚಾರದ ಲೈಫ್‌ಲೈನ್ ಎಂದೇ ಗುರುತಿಸಿಕೊಂಡಿರುವ ‘ನಮ್ಮ ಮೆಟ್ರೋ’ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ (BMRCL) ಮತ್ತೊಂದು ಬಿಗ್ ಶಾಕ್ ನೀಡಿದೆ. ಫೆಬ್ರವರಿ 9ರಿಂದ ಜಾರಿಗೆ ಬರುವಂತೆ ಮೆಟ್ರೋ ಟಿಕೆಟ್ ದರವನ್ನು ಶೇಕಡಾ 5ರಷ್ಟು ಹೆಚ್ಚಳ ಮಾಡುವುದಾಗಿ ಅಧಿಕೃತವಾಗಿ ಘೋಷಿಸಲಾಗಿದೆ. ಈ ದರ ಏರಿಕೆಯು ದಿನನಿತ್ಯ ಮೆಟ್ರೋ ಅವಲಂಬಿಸಿರುವ ಲಕ್ಷಾಂತರ ಪ್ರಯಾಣಿಕರ ಜೇಬಿಗೆ ನೇರ ಹೊಡೆತ ನೀಡಲಿದೆ.

ದರ ಏರಿಕೆಗೆ ಕಾರಣವೇನು?

ಬಿಎಂಆರ್‌ಸಿಎಲ್ ತಿಳಿಸಿರುವಂತೆ, ಮೆಟ್ರೋ ರೈಲ್ವೇ ಕಾಯ್ದೆ–2002ರ ಅಡಿಯಲ್ಲಿ ರಚಿಸಲಾದ ‘ಫೇರ್ ಫಿಕ್ಸೇಷನ್ ಕಮಿಟಿ’ (FFC) ಶಿಫಾರಸಿನಂತೆ ಈ ದರ ಪರಿಷ್ಕರಣೆ ಮಾಡಲಾಗಿದೆ. ಮೆಟ್ರೋ ಸಂಚಾರದ ನಿರ್ವಹಣೆ, ವಿದ್ಯುತ್ ವೆಚ್ಚ, ಸಿಬ್ಬಂದಿ ವೇತನ, ತಾಂತ್ರಿಕ ನಿರ್ವಹಣೆ ಸೇರಿದಂತೆ ಕಾರ್ಯಾಚರಣಾ ವೆಚ್ಚಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅವನ್ನು ಸಮತೋಲನಗೊಳಿಸಲು ದರ ಏರಿಕೆ ಅನಿವಾರ್ಯ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

ಕಳೆದ 7.5 ವರ್ಷಗಳ ಬಳಿಕ ಮೊದಲ ಬಾರಿಗೆ ಮೆಟ್ರೋ ಟಿಕೆಟ್ ದರ ಪರಿಷ್ಕರಣೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಏಕಾಏಕಿ ಭಾರೀ ದರ ಏರಿಕೆ ತಪ್ಪಿಸುವ ಉದ್ದೇಶದಿಂದ ಪ್ರತಿವರ್ಷ ‘ಸ್ವಯಂಚಾಲಿತ ದರ ಪರಿಷ್ಕರಣೆ ವ್ಯವಸ್ಥೆ’ ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ.

ಹೊಸ ದರ ಪಟ್ಟಿ ಹೇಗಿದೆ?

ಪರಿಷ್ಕೃತ ದರಪಟ್ಟಿಯಂತೆ, ಪ್ರಯಾಣದ ದೂರಕ್ಕೆ ಅನುಗುಣವಾಗಿ ಕನಿಷ್ಠ ₹1ರಿಂದ ಗರಿಷ್ಠ ₹5ರವರೆಗೆ ದರ ಹೆಚ್ಚಳವಾಗಿದೆ.

ಪ್ರಮುಖ ಮಾರ್ಗಗಳ ಟಿಕೆಟ್ ದರ

ನಗರದ ಪ್ರಮುಖ ಹಾಗೂ ಹೆಚ್ಚು ಪ್ರಯಾಣಿಕರು ಬಳಸುವ ಮಾರ್ಗಗಳಲ್ಲೂ ದರ ಏರಿಕೆಯಾಗಿದೆ.

ಈ ದರ ಏರಿಕೆ ಕ್ರಮಕ್ಕೆ ರಾಜಕೀಯ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದ ಪಿ.ಸಿ. ಮೋಹನ್, ಬಿಎಂಆರ್‌ಸಿಎಲ್ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
“ರಾಜ್ಯ ಸರ್ಕಾರದ ಆಡಳಿತಾತ್ಮಕ ವೈಫಲ್ಯ ಮತ್ತು ಆರ್ಥಿಕ ದುಸ್ಥಿತಿಯ ಹೊರೆ ಜನಸಾಮಾನ್ಯರ ಮೇಲಿದೆ. ಮೆಟ್ರೋ ಪ್ರಯಾಣಿಕರ ಮೇಲೆ ದರ ಏರಿಕೆ ಹೇರಿರುವುದು ಸ್ಪಷ್ಟ ಅನ್ಯಾಯ,” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ಫೆಬ್ರವರಿಯಲ್ಲಿ ಮೆಟ್ರೋ ಟಿಕೆಟ್ ದರವನ್ನು ಶೇ.101ರಷ್ಟು ಹೆಚ್ಚಳ ಮಾಡಲಾಗಿತ್ತು. ಆದರೆ ಸಾರ್ವಜನಿಕರಿಂದ ವ್ಯಾಪಕ ವಿರೋಧ, ಪ್ರತಿಭಟನೆಗಳು ಉಂಟಾದ ಹಿನ್ನೆಲೆಯಲ್ಲಿ ಆ ನಿರ್ಧಾರವನ್ನು ಬಿಎಂಆರ್‌ಸಿಎಲ್ ಹಿಂಪಡೆಯಬೇಕಾಯಿತು. ಈ ಬಾರಿ ಕೇವಲ ಶೇ.5ರಷ್ಟು ಏರಿಕೆ ಎಂದು ಹೇಳಲಾಗುತ್ತಿದ್ರೂ, ದಿನನಿತ್ಯ ಮೆಟ್ರೋ ಅವಲಂಬಿಸಿರುವ ಮಧ್ಯಮ ವರ್ಗ ಹಾಗೂ ಉದ್ಯೋಗಸ್ಥರಿಗೆ ಇದು ಹೆಚ್ಚುವರಿ ಹೊರೆ ಎನ್ನುವುದು ಪ್ರಯಾಣಿಕರ ಅಭಿಪ್ರಾಯವಾಗಿದೆ.

Exit mobile version