8 ವರ್ಷದ ಬಾಲಕಿಗೆ ಖಾಸಗಿ ಅಂಗ ತೋರಿಸಿದ ಯುವಕನ ಬಂಧನ

Untitled design 2025 05 03t111750.328

ವರದಿ: ಮೂರ್ತಿ , ಬೀರಯ್ಯನಪಾಳ್ಯ, ಗ್ಯಾರಂಟಿ ನ್ಯೂಸ್,  ನೆಲಮಂಗಲ

ಬೆಂಗಳೂರು: ಪುಟ್ಟ ಮಕ್ಕಳಿಗೂ ಸುರಕ್ಷತೆ ಕಳೆದುಹೋಗುತ್ತಿರುವ ಈ ದಿನಗಳಲ್ಲಿ ಮತ್ತೊಂದು ಗಂಭೀರ ಘಟನೆ ಬೆಂಗಳೂರಿನ ಮಾದನಾಯಕನಹಳ್ಳಿಯಲ್ಲಿ ನಡೆದಿದೆ. ಬಾಡಿಗೆ ಮನೆಯಲ್ಲಿ ವಾಸವಿದ್ದ 19 ವರ್ಷದ ಯುವಕ ಚಂದು ಎಂಬುವವನು, 8 ವರ್ಷದ ಬಾಲಕಿಗೆ ತನ್ನ ಖಾಸಗಿ ಅಂಗ ತೋರಿಸಿ ಮುಟ್ಟುವಂತೆ ಹೇಳಿದ ಎಂಬ ಆರೋಪದ ಮೇಲೆ ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಬಾಲಕಿಯ ಪೋಷಕರು ಹೇಳುವ ಹಾಗೆ ಚಂದು ಬಾಲಕಿಗೆ ಚಾಕಲೇಟ್ ಕೊಡಿಸುತ್ತೇನೆ ಎಂಬ ನಂಬಿಕೆ ನೀಡಿ ತನ್ನ ರೂಮಿನ ಹತ್ತಿರ ಕರೆದು ಪ್ಯಾಂಟ್ ಬಿಚ್ಚಿ ಖಾಸಗಿ ಅಂಗ ತೋರಿಸಿದ್ದನು. ಜೊತೆಗೆ, ಬಾಲಕಿಗೆ ಅದನ್ನು ಮುಟ್ಟುವಂತೆ ಬಲವಂತವಾಗಿ ಹೇಳಿದ್ದಾನೆ ಎನ್ನಲಾಗಿದೆ.

ಈ ಕುರಿತು ತಕ್ಷಣವೇ ತಾಯಿಗೆ ಬಾಲಕಿ ತಿಳಿಸಿದ್ದಳು. “ಅಮ್ಮಾ, ಚಂದು ಅಣ್ಣ ನನ್ನನ್ನು ರೂಮಿನ ಹತ್ತಿರ ಕರೆದು ಪ್ಯಾಂಟ್ ಬಿಚ್ಚಿ ತೋರಿಸಿದ್ರು, ಅದನ್ನ ಮುಟ್ಟು ಅಂತ ಹೇಳಿದ್ರು,” ಎಂದು ಬಾಲಕಿ ತನ್ನ ತಾಯಿಗೆ ಹೇಳಿದ್ರು ಎಂದು ಬಾಲಕಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

ಈ ದೂರಿನ ಆಧಾರದಲ್ಲಿ ಪೊಲೀಸರು ಆರೋಪಿಯನ್ನು ಪೋಕ್ಸೋ (POCSO) ಕಾಯ್ದೆ ಅಡಿಯಲ್ಲಿ ಬಂಧಿಸಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ಮುಂದುವರೆಸಿದ್ದಾರೆ.

ಮಕ್ಕಳ ಸುರಕ್ಷತೆಗಾಗಿ ಪೋಷಕರು ಎಚ್ಚರಿಕೆಯಿಂದಿರಬೇಕು ಎಂಬ ಮತ್ತೊಂದು ಉದಾಹರಣೆಯಾಗಿ ಈ ಘಟನೆ ಹೊರಹೊಮ್ಮಿದಂತಾಗಿದೆ.

| Reported by: ಮೂರ್ತಿ ಬೀರಯ್ಯನಪಾಳ್ಯ, ಗ್ಯಾರಂಟಿ ನ್ಯೂಸ್, ನೆಲಮಂಗಲ
Exit mobile version