ನಕಲಿ ಬ್ರ್ಯಾಂಡ್ ಬಟ್ಟೆ ತಯಾರಿ: ಗಾರ್ಮೆಂಟ್ ಮೇಲೆ ಪೊಲೀಸರ ದಾಳಿ; ಮೂವರ ಬಂಧನ

Untitled design 2025 04 17t092729.968

ವರದಿ: ಮೂರ್ತಿ.ಬೀರಯ್ಯನಪಾಳ್ಯ, ಗ್ಯಾರಂಟಿ ನ್ಯೂಸ್, ನೆಲಮಂಗಲ

ಬೆಂಗಳೂರು: ವಿದೇಶಿ ಬ್ರ್ಯಾಂಡ್‌ಗಳ ನಕಲಿ ಲೇಬಲ್‌ಗಳನ್ನು ಬಳಸಿಕೊಂಡು ಬಟ್ಟೆ ತಯಾರಿಸುತ್ತಿದ್ದ ಗಾರ್ಮೆಂಟ್ ಸಂಸ್ಥೆಯ ಮೇಲೆ ಬೆಂಗಳೂರು ಪೊಲೀಸರು ದಾಳಿ ನಡೆಸಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ತೋಟದಗುಡ್ಡದಹಳ್ಳಿಯಲ್ಲಿರುವ ಸಂಗಮ್ ಅಪೆರಲ್ಸ್ ಎಂಬ ಗಾರ್ಮೆಂಟ್‌ನಲ್ಲಿ ಈ ದಾಳಿ ನಡೆದಿದೆ. ಆಶ್ರಫ್, ಶರ್ಪ್ ಉದ್ದೀನ್ ಮತ್ತು ಸರವಣ ಎಂಬ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಇವರು ಬರ್ಬೆರಿ (Burberry) ಮತ್ತು ಪೋಲೋ ರಾಲ್ಫ್ ಲಾರೆನ್ (Polo Ralph Lauren) ಎಂಬ ಪ್ರಸಿದ್ಧ ಬ್ರ್ಯಾಂಡ್‌ಗಳ ನಕಲಿ ಲೇಬಲ್‌ಗಳನ್ನು ಹಾಕಿ ಬಟ್ಟೆಗಳನ್ನು ತಯಾರಿಸುತ್ತಿದ್ದರು. ದಾಳಿಯಲ್ಲಿ ಸುಮಾರು 24 ಸಾವಿರ ನಕಲಿ ಲೇಬಲ್ ಹಾಕಿದ ಬಟ್ಟೆಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಈ ಪ್ರಕರಣದಲ್ಲಿ ಬ್ರ್ಯಾಂಡ್ ಕಂಪನಿಗಳ ಪರವಾಗಿ ಅಧಿಕಾರ ಪಡೆದ ಶ್ರೀನಿವಾಸ್ ಎಂಬವವರು ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ್ವಯ ಮಾದನಾಯಕನಹಳ್ಳಿ ಠಾಣೆ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿ ಭಾರತೀಯ ಬೌದ್ಧಿಕ ಸ್ವತ್ತು ಹಕ್ಕು (ಕಾಪಿರೈಟ್) ಕಾಯ್ದೆ 2023ರ ಸೆಕ್ಷನ್ 318(4), 51(ಎ), 51(ಬಿ), ಮತ್ತು 65 ರ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.

| Reported by: ಮೂರ್ತಿ.ಬಿ ನೆಲಮಂಗಲ
Exit mobile version