ಲಕ್ಕುಂಡಿಯ ಮನೆಯೊಳಗೆ 10ನೇ ಶತಮಾನದ ಅರ್ಧನಾರೀಶ್ವರ ದೇವಾಲಯ ಪತ್ತೆ

Untitled design 2026 01 20T132136.905

ಗದಗ: ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದ ನೆಲದಡಿ ಬಗೆದಷ್ಟು ಪುರಾತನ ವಸ್ತುಗಳು ಪತ್ತೆಯಾಗುತ್ತಲೇ ಇದೆ. ಗದಗ ತಾಲೂಕಿಗೆ ಸೇರಿದ ಲಕ್ಕುಂಡಿ ಗ್ರಾಮದ ಚೌಕಿಮಠ ಕುಟುಂಬದ ವಾಸದ ಮನೆಯೊಳಗೆ, ಶತಮಾನಗಳ ಕಾಲ ಮಣ್ಣಿನಡಿಯಲ್ಲಿ ಹುದುಗಿದ್ದ ಪ್ರಾಚೀನ ಅರ್ಧನಾರೀಶ್ವರ ದೇವಾಲಯ ಪತ್ತೆಯಾಗಿದೆ. 

ಶಿವಯ್ಯ ಹಾಗೂ ಶೇಖರಯ್ಯ ಚೌಕಿಮಠ ಎಂಬವರ ಕುಟುಂಬಗಳು ಈ ದೇವಾಲಯದ ಆವರಣದಲ್ಲಿಯೇ ಮನೆ ಕಟ್ಟಿಕೊಂಡು ವರ್ಷಗಳಿಂದ ವಾಸಿಸುತ್ತಿವೆ. ಈ ಮನೆಯಲ್ಲಿ ಸುಮಾರು ಐದು ರಿಂದ ಆರು ಮಂದಿ ವಾಸಿಸುತ್ತಿದ್ದಾರೆ. ಮನೆಯ ಹೊರಭಾಗ ಸಂಪೂರ್ಣವಾಗಿ ವಾಸದ ಕಟ್ಟಡವಾಗಿದ್ದರೂ, ಒಳಭಾಗದಲ್ಲಿ ಸುಮಾರು ಹತ್ತು ಅಡಿ ಮಣ್ಣಿನಡಿಯಲ್ಲಿ ಚಾಲುಕ್ಯರ ಕಾಲದ ಪುರಾತನ ದೇವಾಲಯ ಇರುವುದನ್ನು ತಪಾಸಣೆಯಲ್ಲಿ ಪತ್ತೆ ಹಚ್ಚಲಾಗಿದೆ.

ಈ ದೇವಾಲಯವು 10ರಿಂದ 11ನೇ ಶತಮಾನಕ್ಕೆ ಸೇರಿದ ಚಾಲುಕ್ಯರ ಕಾಲದ ಈಶ್ವರ ದೇವಾಲಯವಾಗಿದ್ದು, ಅರ್ಧನಾರೀಶ್ವರ ರೂಪದ ಶಿವನ ಮೂರ್ತಿ ಇಲ್ಲಿ ಸ್ಥಾಪಿತವಾಗಿದೆ. ದೇವಾಲಯದ ಗರ್ಭಗುಡಿ, ಶಿಲ್ಪ ಕೆತ್ತನೆಗಳು, ಕಂಬಗಳು ಮತ್ತು ವಾಸ್ತು ವಿನ್ಯಾಸಗಳು ಆ ಕಾಲದ ಶಿಲ್ಪಕಲೆಯ ಶ್ರೇಷ್ಠತೆಯನ್ನು ಪ್ರತಿಬಿಂಬಿಸುತ್ತವೆ.

ಈ ದೇವಾಲಯದಲ್ಲಿ ಕಾಣಿಸಿಕೊಳ್ಳುವ ಶಿಲ್ಪಗಳು, ನಿಖರ ಕೆತ್ತನೆಗಳು ಹಾಗೂ ವಾಸ್ತುಶಿಲ್ಪವು ಲಕ್ಕುಂಡಿಯು ಒಮ್ಮೆ ಚಾಲುಕ್ಯರ ಕಾಲದ ಪ್ರಮುಖ ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರವಾಗಿತ್ತು ಎಂಬುದಕ್ಕೆ ಮತ್ತೊಂದು ಸಾಕ್ಷಿಯಾಗಿದೆ.

Exit mobile version