ಬುಕ್‌ ಮಾಡಿದ್ದು1.85 ಲಕ್ಷ ರೂ. ಸ್ಯಾಮ್ಸಂಗ್ ಫೋನ್‌..! ಡೆಲಿವೆರಿ ಆಗಿದ್ದು ಟೈಲ್ಸ್‌ಪೀಸ್‌..

Untitled design 2025 10 30t133602.661

ಬೆಂಗಳೂರು: ಆನ್ಲೈನ್‌ನಲ್ಲಿ 1.85 ಲಕ್ಷ ರೂಪಾಯಿ ಮೌಲ್ಯದ ಸ್ಯಾಮ್ಸಂಗ್ ಫೋನ್ ಅಡ್ವಾನ್ಸ್ ಬುಕ್ ಮಾಡಿದ ಟೆಕ್ಕಿಗೆ, ಡೆಲಿವರಿ ಬಾಕ್ಸ್‌ನಲ್ಲಿ ಫೋನ್‌ ಬದಲು ಕಲ್ಲು ಸಿಕ್ಕಿರುವ ಘಟನೆ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪ್ರದೇಶದಲ್ಲಿ ನಡೆದಿದೆ.

ಸಾಫ್ಟ್‌ವೇರ್ ಎಂಜಿನಿಯರ್ ಪ್ರೇಮಾನಂದ್ ಅವರು ಅಮೆಜಾನ್ ಆಪ್‌ನಿಂದ ಈ ದುಬಾರಿ ಫೋನ್ ಅನ್ನು ಖರೀದಿಸಿದ್ದರು. ನಿಗದಿತ ದಿನಾಂಕದಂದು ಉತ್ಪನ್ನದ ಡೆಲಿವರಿ ಆಗಿ, ಬಾಕ್ಸ್ ಅವರಿಗೆ ಒಪ್ಪಿಸಲ್ಪಟ್ಟಿತು. ಆದರೆ, ಬಾಕ್ಸ್ ತೆರೆದು ನೋಡಿದಾಗ ಅದರೊಳಗೆ ಫೋನ್‌ ಬದಲು ಚೌಕಾಕಾರದ ಕಲ್ಲು ಇರುವುದು ಕಂಡು ಬಂತು.

ಫೋನ್‌ನ ತೂಕಕ್ಕೆ ಸಮನಾದ ತೂಕದ ಈ ಕಲ್ಲನ್ನು ಬಾಕ್ಸ್‌ನಲ್ಲಿ ಇಟ್ಟು ವಂಚನೆ ಮಾಡಲಾಗಿದೆ. ಪ್ರೇಮಾನಂದ್ ಅವರು ಫೋನ್‌ಗಾಗಿ ಪೂರ್ಣ ಮೊತ್ತವನ್ನು ಮುಂಗಡವಾಗಿ ಪಾವತಿಸಿದ್ದರು. ಘಟನೆಯ ನಂತರ ಡೆಲಿವರಿ ಬಾಯ್‌ಗೆ ಸಂಪರ್ಕಿಸಲು ಪ್ರಯತ್ನಿಸಿದರೆ, ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ.

ಇದರ ನಂತರ, ಪ್ರೇಮಾನಂದ್ ಅವರು ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಎನ್ಸಿಆರ್‌ಪಿ ಪೋರ್ಟಲ್‌ನ ಮೂಲಕ ದೂರು ಸ್ವೀಕರಿಸಿ, ವಂಚನೆಯ ಪ್ರಕರಣವನ್ನು ದಾಖಲಿಸಿದ್ದಾರೆ. ಆನ್ಲೈನ್ ಖರೀದಿದಾರರ ಸುರಕ್ಷತೆ ಮತ್ತು ಡೆಲಿವರಿ ಪ್ರಕ್ರಿಯೆಯಲ್ಲಿ ಉಂಟಾಗಿರುವ ಈ ತೊಡಕು ಕುರಿತು ತನಿಖೆ ನಡೆಸಲಾಗುತ್ತಿದೆ.

Exit mobile version